ಜೈನ ಮುನಿ ಮಾಡಿದ ತಪ್ಪೇನು ಗೊತ್ತಾ, ನಿಜ ಗೊತ್ತಾಗಿ ಕಣ್ಣೀರಿಟ್ಟ ಕರುನಾಡು

 | 
Gf

ಬೆಳಗಾವಿ ಜಿಲ್ಲೆಯ ಹಿರೇಕೋಡಿ ಜೈನ ಮಠದ ಜೈನಮುನಿಗಳಾದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಕಿರಾತಕರನ್ನು ಬಂಧಿಸಿದ್ದಾರೆ. ಸ್ವಾಮೀಜಿಯವರ ಆತ್ಮೀಯತೆ ಹೊಂದಿದ್ದು ಅವರ ವಿಶ್ವಾಸವನ್ನು ಸಂಪಾದಿಸಿದ್ದ ನಾರಾಯಣ ಮಾಳಿ ಎಂಬಾತನೇ ಈ ಕೊಲೆಯನ್ನು ಮಾಡಿದ ದುಷ್ಟ ಎಂದು ತಿಳಿದುಬಂದಿದೆ. 

ಅವನಿಗೆ ಸಹಕಾರ ನೀಡಿದವನು ಅವನಿಗೆ ಆಪ್ತನಾಗಿರುವ ಹುಸೇನ್‌ ಡಾಲಾಯತ್‌. ನಾರಾಯಣ ಮಾಳಿ ಆಗಾಗ ಮಠಕ್ಕೆ ಬಂದು ಸ್ವಾಮೀಜಿಯವರ ವಿಶ್ವಾಸವನ್ನು ಗಳಿಸಿದ್ದ. ಅಲ್ಲದೆ, ತನ್ನ ಕಷ್ಟಗಳನ್ನು ಹೇಳಿಕೊಂಡು ಹಣವನ್ನು ಪಡೆದಿದ್ದ ಎನ್ನಲಾಗಿದೆ. ಕೊನೆಗೆ ಸ್ವಾಮೀಜಿ ಹಣವನ್ನು ವಾಪಸ್‌ ಕೇಳಿದಾಗ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹುಸೇನ್‌ ಡಾಲಾಯತ್‌ ಈ ಕೊಲೆಯನ್ನು ಸಹಾಯ ಮಾಡಿದ ಕಿರಾತಕನಾಗಿದ್ದಾನೆ.

ನಾರಾಯಣ ಮಾಳಿ ಹಿರೇಕೋಡಿ ನಿವಾಸಿಯಾದರೆ, ಹುಸೇನ್ ಢಾಲಾಯತ್ ಚಿಕ್ಕೋಡಿ ನಿವಾಸಿ.
ನಾರಾಣಯಣ ಮಾಳಿ ಮೂಲತಃ ರಾಯಬಾಗ ತಾಲೂಕಿನ ಖಟಕಬಾವಿ ನಿವಾಸಿ. ಆತ ಜೈನಮುನಿಗಳ ಆಶ್ರಮದ ಕೂಗಳತೆ ದೂರದಲ್ಲಿ ಜಮೀನು ಲೀಸ್ ಪಡೆದು ಬೇಸಾಯ ಮಾಡುತ್ತಿದ್ದ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಅಲ್ಲೇ ವಾಸವಾಗಿದ್ದ. ಇದೇ ವೇಳೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಆಪ್ತನಾಗಿದ್ದ ನಾರಾಯಣ ಮಾಳಿ. 

ಜೊತೆಗೆ ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಜೈನಮುನಿಗಳ ವಿಶ್ವಾಸ ಗಳಿಸಿದ್ದ. ವೈಯಕ್ತಿಕ ಕಾರಣಕ್ಕೆ ಜೈನಮುನಿಗಳ ಬಳಿ 6 ಲಕ್ಷ ಹಣ ಪಡೆದಿದ್ದ ನಾರಾಯಣ ಹಣ ವಾಪಸ್ ಕೇಳಿದ್ದಕ್ಕೆ ಕೊಲೆಯನ್ನೇ ಮಾಡಿದ್ದಾನೆ.
ಜುಲೈ 5ರ ರಾತ್ರಿ ನಂದಿಪರ್ವತ ಆಶ್ರಮದ ಕೋಣೆಯಲ್ಲಿಯೇ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾಡಲಾಗಿದೆ. ವಿದ್ಯುತ್ ಶಾಕ್ ನೀಡಿದ ಕತ್ತು ಹಿಸುಕಿ ಹತ್ಯೆ ಮಾಡಿದ ಬಗ್ಗೆ ಮಾಹಿತಿ ಇದೆ. 

ಬಳಿಕ ತನ್ನ ಸ್ನೇಹಿತನಾಗಿರುವ ಹುಸೇನ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದ ಆರೋಪಿ ಮೃತದೇಹವನ್ನು ಖಟಕಬಾವಿ ಗ್ರಾಮದ ಹೊರವಲಯದಲ್ಲಿ ಒಯ್ದು ಒಂಬತ್ತು ತುಂಡುಗಳಾಗಿ ಕತ್ತರಿಸಿ ಬಟ್ಟೆ ಸುತ್ತಿ ಕೊಳವೆಬಾವಿಗೆ ಎಸೆದಿದ್ದ ಎನ್ನಲಾಗಿದೆ. ಯಾರಿವರು ಸ್ವಾಮೀಜಿ, ಹಂತಕರು ಪತ್ತೆಯಾಗಿದ್ದು ಹೇಗೆ? ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಲ್ಲಿ ಕಳೆದ 15 ವರ್ಷಗಳಿಂದ ವಾಸವಾಗಿರುವ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು.

ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇತ್ತು. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿತ್ತು. ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿತ್ತು. 

ಇದು ಸಹ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಇದೀಗ ಅಪರಾಧಿಗಳು ಪೊಲೀಸರ ವಶದಲ್ಲಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.