ವಯಸ್ಸು 36 ಕಳೆದರೂ ಮದುವೆ ಬೇಡ ಎನ್ನುತ್ತಿರುವ ಕಾರುಣ್ಯ ರಾಮ್, ಹಳೆ ಘಟನೆ ಮೆಲುಕು ಹಾಕಿದ ಕಾರುಣ್ಯ
Jul 15, 2025, 18:00 IST
|

ಅದಕ್ಕೆ ಒಂದು ಅರ್ಥ ಇದೆ. ನನ್ನದು ಏನು ಇಲ್ಲ. ನನ್ನ ಪಾತ್ರವೇ ಇಲ್ಲವೇ ಅಂದ ಮೇಲೆ ಏನು ಉತ್ತರ ಕೊಡಬೇಕು. ಏನಂತ ಸ್ಪಷ್ಟನೆ ಕೊಡಬೇಕು. ಹೀಗಾಗಿ ನಾನು ಅದನ್ನು ಅಲ್ಲಿಗೆ ಬಿಟ್ಟುಬಿಟ್ಟೆ ಎಂದರು. ನನ್ನ ತಮ್ಮನ ಸಾವಿನ ಬಳಿಕ ನಾನು ಮತ್ತೆ ಡಿಪ್ರೆಷನ್‌ಗೆ ಹೋಗಿದ್ದು ಇದೇ ಕಾರಣಕ್ಕೆ. ಜೀವನ ಹೊಸದಾಗಿ ತಿರುವು ತೆಗೆದುಕೊಂಡು ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿಕೊಂಡಿದ್ದಾಗ ಈ ರೀತಿ ನನ್ನ ಹೆಸರನ್ನು ಸುಮ್ಮನೆ ಬಳಸಿಕೊಂಡಿದ್ದು ತುಂಬಾ ತಪ್ಪು.
ಆದರೆ ಅಲ್ಲಿನ ನೈಜತೆ ಯಾರಿಗೂ ಗೊತ್ತಿಲ್ಲ. ಅಲ್ಲಿ ನನ್ನ ಹೆಸರು ಯಾರು ತೆಗೆದುಕೊಂಡರು ಎನ್ನುವುದು ಗೊತ್ತಿಲ್ಲ. ನನಗೆ ತಂಗಿ ಇದ್ದಾಳೆ, ನನಗೆ ಗೊತ್ತು ಹೆಣ್ಣು ಮಕ್ಕಳು ಕೆಲವೊಮ್ಮೆ ಮೋಸ ಹೋಗುತ್ತಾರೆ. ಅವರು ದಿಢೀರ್ ನಿರ್ಧಾರ ಮಾಡುತ್ತಾರೆ. ಆ ರೀತಿ ಮಾಡಬಾರದು. ಆ ನಟಿ ಕೂಡ ದಿಢೀರ್ ನಿರ್ಧಾರ ಮಾಡದೇ ಸ್ವಲ್ಪ ಸಮಯ ತೆಗೆದುಕೊಂಡಿದ್ದರೆ ಅವರಿಗೂ ಅದರ ಅಸಲಿ ವಿಚಾರ ಅವರಿಗೂ ಗೊತ್ತಾಗುತ್ತಿತ್ತು.
ಬಳಿಕ ನಾನು ಅವರನ್ನು ಭೇಟಿಯಾಗಿ ಸ್ಪಷ್ಟನೆ ಕೊಟ್ಟೆ ಕೂಡ. ಮೊದಲು ನನಗೆ ಆಕೆ ಯಾರೂ ಅಂತಾನೂ ಗೊತ್ತಿರಲಿಲ್ಲ. ಆ ಸಮಯದಲ್ಲಿ ಅದು ನನಗೆ ಬೇಡದ ವಿಚಾರ ಅನಿಸಿತು. ನಾನೇನು ಮಾಡದೇ ಇದ್ದಾಗ ಸ್ಪಷ್ಟನೆ ಕೊಡುವುದು ನನಗೆ ನಿರುಪಯುಕ್ತ ಅನಿಸಿತು' ಎಂದು ಹೇಳಿದರು. ವ್ಯಕ್ತಿಯ ಜೊತೆಗಿನ ಒಂದು ಫೋಟೋ ತೋರಿಸಿ, ಈ ಆರೋಪಕ್ಕೆ ಒಂದು ಸಾಕ್ಷಿ ಕೊಡಿ ಅಂತಾ ಕೇಳಿದ್ದೆ. ಈ ಅಂತೆ ಕಂತೆಗಳಿಗೆ ಹೇಗೆ ಪ್ರತಿಕ್ರಿಯೆ ಕೊಡಲು ಆಗುತ್ತದೆ. ಯಾರ ಹತ್ತಿರನೂ ಒಂದು ಸಾಕ್ಷಿ ಇಲ್ಲ. ಈ ಘಟನೆ ಆಗಿ ಒಂದು ನಾಲ್ಕು ದಿನ ಆದ ಮೇಲೆ ಆ ಹುಡುಗಿಯನ್ನು ಭೇಟಿ ಆಗಿ ನನ್ನನ್ನೇ ಕೇಳಬಹುದಿತ್ತು. ಯಾಕೆ ಹೀಗೆ ಮಾಡಿದಿರಿ ಅಂತಾ ಕೇಳಿದೆ. ಆಗ ಆ ಹುಡುಗಿ ನಾನು ಕೇಳ ಬೇಕಂತಿದ್ದೆ ಆದರೆ ಅವರ ಮನೆಯವರು ಬೇಡ ಅಂತಾ ಹೇಳಿದರು ಅಂದಳು.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,4 Aug 2025