ಮುಸ್ಲಿಂ ಧರ್ಮದ ಕತ್ರೀನಾ ಕೈಫ್ ಕುಂಭಮೇಳದಲ್ಲಿ‌ ಸ್ನಾನ ಮಾಡಿ ಮಹಾ ಶಿವನಿಗೆ ಕೈಮುಗಿದ ಅದ್ಭುತ ನೋಟ

 | 
Nd
ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಮಹಾ ಕುಂಭಮೇಳಕ್ಕೆ ಹೋಗಿ ಪ್ರಯಾಗ್‌ರಾಜ್‌ನಲ್ಲಿ ಅಮೃತಸ್ನಾನ ಮಾಡಿಕೊಂಡು ಬಂದಿದ್ದಾರೆ. ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಕೂಡ ಈ ಅಮೃತಗಳಿಗೆಗೆ ಸಾಕ್ಷಿಯಾಗಿದ್ದಾರೆ. ಅತ್ತೆ ವೀನಾ ಕೌಶಲ್‌ ಜೊತೆಗೆ ಅವರು ಈ ಸ್ಥಳಕ್ಕೆ ಬೇಟಿ ಕೊಟ್ಟಿ ಕುಂಭ ಮೇಳದಲ್ಲಿ ಭಾಗಿ ಆಗಿದ್ದರು.
ನಾನು ಈ ಬಾರಿಯ ಕುಂಭಮೇಳಕ್ಕೆ ಹೋಗಿರೋದು ಅದೃಷ್ಟ. ನಾನು ತುಂಬ ಖುಷಿಯಾಗಿದ್ದೇನೆ, ಹೆಮ್ಮೆಯೂ ಆಗ್ತಿದೆ. ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ನಾನು ಇಲ್ಲಿಂದಲೇ ಹೊಸ ಅನುಭವ ಪಡೆದುಕೊಂಡೆ, ಇಡೀ ದಿನ ಇಲ್ಲೆ ಸಮಯ ಕಳೆಯುವೆ ಎಂದು ಕತ್ರಿನಾ ಕೈಫ್‌ ಹೇಳಿದ್ದಾರೆ.
ಪ್ರಯಾಗರಾಜ್‌ನಲ್ಲಿ ಗಂಗಾ, ಸರಸ್ವತಿ, ಯಮುನಾ ತ್ರಿವೇಣಿ ಸಂಗಮದಲ್ಲಿ ಅವರು ಪವಿತ್ರ ಸ್ನಾನ ಮಾಡಿದ್ದಾರೆ. ಈ ರೀತಿ ಮಾಡಿದವರಿಗೆ ಮೋಕ್ಷ ಎಂಬ ಪ್ರತೀತಿ ಇದೆ. ಅಕ್ಷಯ್‌ ಕುಮಾರ್‌, ಕ್ರಿಸ್‌ ಮಾರ್ಟಿನ್‌ ಕೂಡ ಮಹಾಕುಂಭದಲ್ಲಿ ಭಾಗಿ ಆಗಿದ್ದಾರೆ. ಕತ್ರಿನಾ ಕೈಫ್‌ ಪತಿ ವಿಕ್ಕಿ ಕೌಶಲ್‌ ಈಗಾಗಲೇ ಕುಂಭಮೇಳದಲ್ಲಿ ಭಾಗಿ ಆಗಿದ್ದರು. ಛಾವ ಸಿನಿಮಾ ಪ್ರಚಾರದ ವೇಳೆ ವಿಕ್ಕಿ ಕೌಶಲ್‌ ಅವರು ತಂಡದ ಜೊತೆಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದರು.
 ಇಶಾ ಗುಪ್ತ, ವಿಜಯ್‌ ದೇವರಕೊಂಡ, ಹೇಮಾ ಮಾಲಿನಿ ಕೂಡ ಭಾಗಿ ಆಗಿದ್ದಾರೆ. ಕುಂಭಮೇಳದ ಅನುಭವ ಪಡೆಯಲು ಈಗಷ್ಟೇ ಆರಂಭಿಸಿದ್ದೇನೆ ಎಂದು ಕತ್ರಿನಾ ಕೈಫ್ ಅವರು ಖಾಸಗಿ ವಾಹಿನಿಗೆ ಹೇಳಿದ್ದಾರೆ.ನಟಿ ಕತ್ರಿನಾ ಕೈಫ್ ಅವರು ಅತ್ತೆ ವೀಣಾ ಕೌಶಲ್ ಅವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಇಬ್ಬರೂ ಪರಮಾರ್ಥ ನಿಕೇತನಕ್ಕೆ ಭೇಟಿ ನೀಡಿ ತಮ್ಮ ಮಹಾಕುಂಭ ಶಿಬಿರದಲ್ಲಿ ತಂಗಿದ್ದ ವೀಡಿಯೋ ಈಗ ಎಲ್ಲರ ಗಮನ ಸೆಳೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.