12 ವರ್ಷ ಪ್ರೀತಿನೇ ಮಾಡಿದ್ದು ನಾವು, ಇದೀಗ ಮದುವೆಗೆ ಆಗಿ ಸಂಸಾರ ಮಾಡುತ್ತಿದ್ದೇವೆ ಎಂದ ಕಾವ್ಯ ಶಾ

 | 
Bs
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ನಟಿ ಕಾವ್ಯಾ ಶಾ ಅವರ ವಿವಾಹ ಮಹೋತ್ಸವ ಏಪ್ರಿಲ್ ತಿಂಗಳಿನಲ್ಲಿಯೇ ನಡೆಯಬೇಕಿತ್ತು. ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಕಾವ್ಯಾ ಶಾ ಹಾಗೂ ವರುಣ್ ಕುಮಾರ್ ಗೌಡ ಅವರ ಕಲ್ಯಾಣ ಅದ್ಧೂರಿಯಾಗಿ ಜರುಗಬೇಕಿತ್ತು. ಆದರೆ, ಮದುವೆ ನಡೆಯುವ ಮುನ್ನವೇ ವರುಣ್ ಕುಮಾರ್ ಗೌಡ ಅವರ ತಂದೆ ಮಂಜುನಾಥ್ ವಿಧಿವಶರಾದರು. ಹೀಗಾಗಿ ಅಂದು ನಡೆಯಬೇಕಿದ್ದ ಮದುವೆ ಮುಂದೂಲ್ಪಟ್ಟಿತ್ತು.
ಅಂದು ಪೋಸ್ಟ್ ಪೋನ್ ಆಗಿದ್ದ ಕಾವ್ಯಾ ಶಾ ಹಾಗೂ ವರುಣ್ ಕುಮಾರ್ ಗೌಡ ಅವರ ಕಲ್ಯಾಣ ಮಹೋತ್ಸವ ಇದೀಗ ಗ್ರ್ಯಾಂಡ್ ಆಗಿ ನೆರವೇರಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಕಾವ್ಯಾ ಶಾ ಹಾಗೂ ವರುಣ್ ಕುಮಾರ್ ಗೌಡ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಆ ಮೂಲಕ ಅಧಿಕೃತವಾಗಿ ವರುಣ್ ಕುಮಾರ್ ಗೌಡ ಹಾಗೂ ಕಾವ್ಯಾ ಶಾ ಮಿಸ್ಟರ್ ಅಂಡ್ ಮಿಸಸ್ ಆಗಿದ್ದಾರೆ. ಸಖತ್ ಆಗಿ ರೀಲ್ಸ್ ಮಾಡಿಕೊಂಡು ಆರಾಮಾಗಿ ಇದ್ದಾರೆ.
ಕಾವ್ಯಾ ಶಾ ಹಾಗೂ ವರುಣ್ ಕುಮಾರ್ ಗೌಡ ಅವರ ಮದುವೆಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಲೂಸ್ ಮಾದ ಯೋಗಿ, ಧನಂಜಯ್, ನಿರ್ದೇಶಕ ಸಂತೋಷ್ ಆನಂದ್‌ರಾಮ್, ಯುವ ರಾಜ್‌ಕುಮಾರ್ ಸೇರಿದಂತೆ ಹಲವು ತಾರೆಯರು ಆಗಮಿಸಿದ್ದರು. ನವದಂಪತಿಗೆ ಎಲ್ಲರೂ ಶುಭ ಹಾರೈಸಿದ್ದರು.
ವರುಣ್ ಕುಮಾರ್ ಗೌಡ ಕೂಡ ಮಾಧ್ಯಮ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. 11 ವರ್ಷಗಳ ಹಿಂದೆ ಬ್ಯೂಟಿ ಪೇಜೆಂಟ್ ಕಾರ್ಯಕ್ರಮವೊಂದರಲ್ಲಿ ವರುಣ್ ಕುಮಾರ್ ಗೌಡ ಅವರಿಗೆ ಕಾವ್ಯಾ ಶಾ ಅವರ ಪರಿಚಯ ಉಂಟಾಗಿತ್ತು. ಪರಿಚಯದಿಂದ ಸ್ನೇಹ ಚಿಗುರಿತು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಅರಳಿತು. ಕಳೆದ 10 ವರ್ಷಗಳಿಂದ ವರುಣ್ ಕುಮಾರ್ ಗೌಡ ಹಾಗೂ ಕಾವ್ಯಾ ಶಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದರು. ಇಂದು ಇಬ್ಬರ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಿದೆ.
ಕನ್ನಡ ನಟ ನಾಗೇಂದ್ರ ಶಾ ಅವರ ಪುತ್ರಿ ಕಾವ್ಯಾ ಶಾ. ಕನ್ನಡದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ,ಮೂಕಜ್ಜಿಯ ಕನಸು, ಮುಗಿಲ್ ಪೇಟೆ ಸಿನಿಮಾಗಳಲ್ಲಿ ಕಾವ್ಯಾ ಶಾ ಅಭಿನಯಿಸಿದ್ದರು. ‘ಬಂಗಾರ’, ‘ಚಿ ಸೌ ಸಾವಿತ್ರಿ’ ಧಾರಾವಾಹಿಗಳಲ್ಲೂ ಕಾವ್ಯಾ ಶಾ ನಟಿಸಿದ್ದರು. ತಮಿಳಿನ ಸಿನಿಮಾಗಳಲ್ಲೂ ಕಾವ್ಯಾ ಶಾ ಮಿಂಚಿದ್ದಾರೆ. ಹೆಲ್ತ್ ಕೋಚ್ ಆಗಿಯೂ, ನಿರೂಪಕಿಯಾಗಿಯೂ ಕಾವ್ಯಾ ಶಾ ಗುರುತಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub