20KG ತೂಕ ಇಳಿಸಿದ ಖುಷ್ಬೂ, ಫಿಗರ್ ನೋಡಿ ಹಿಂದೆ ಬಿದ್ದ ನಿರ್ಮಾಪಕರು

 | 
Nx
ದಕ್ಷಿಣ ಭಾರತದಲ್ಲಿ ಹಲವು ದಶಕಗಳಿಂದ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಖುಷ್ಬು. ಪ್ರಸ್ತುತ ರಾಜಕೀಯದಲ್ಲೂ ಮುಂಚೂಣಿಯಲ್ಲಿರುವ ಈ ನಟಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ದೇಹ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಈ ಹಿಂದೆಯೇ ನಟಿ ತಿಳಿಸಿದ್ದರು. ಇದೀಗ 20 ಕೆಜಿ ತೂಕ ಇಳಿಸಿಕೊಂಡಿರುವ ಖುಷ್ಬು ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿವೆ.
ನಟಿ ಖುಷ್ಬೂ ಅವರು ತಮ್ಮ 54ನೇ ವಯಸ್ಸಿನಲ್ಲಿ ಖುಷ್ಬು ಸುಂದರ್ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಖುಷ್ಬು ಅವರ ವರ್ಕೌಟ್ ಪ್ರಯಾಣ ಆರಂಭವಾಯಿತು. ಆಗ ನಟಿಯ ತೂಕ 93 ಕೆಜಿ ಇತ್ತು. ಕೇವಲ ಒಂಬತ್ತು ತಿಂಗಳಲ್ಲಿ ಇಷ್ಟು ತೂಕ ಇಳಿಸಿಕೊಂಡಿದ್ದೇನೆ ಎಂದು ಟೆಲ್ ಮೈ ಸ್ಟೋರಿ ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಖುಷ್ಬು ಹೇಳಿದ್ದಾರೆ. ಅಧಿಕ ತೂಕದಿಂದಾಗಿ ತುಂಬಾ ತೊಂದರೆ ಆಗುತ್ತಿತ್ತು. ದೇಹ ತೂಕದಿಂದ ಉಂಟಾಗಿದ್ದ ಕೀಲು ನೋವು ಈಗ ಕಡಿಮೆಯಾಗಿದೆ ಎಂದು ನಟಿ ಹೇಳುತ್ತಾರೆ.
ನಟಿ ಖುಷ್ಬು ಅವರನ್ನು ಹೊಗಳುತ್ತಾ ಅನೇಕರು ಪೋಸ್ಟ್‌ಗಳ ಕೆಳಗೆ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಒಂದು ಟೀಕಾತ್ಮಕ ಕಾಮೆಂಟ್‌ಗೆ ಖುಷ್ಬು ನೀಡಿದ ಉತ್ತರವೂ ಸಾಕಷ್ಟು ಗಮನ ಸೆಳೆಯುತ್ತಿದೆ. ಟೈಪ್-2 ಮಧುಮೇಹ ಇರುವವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮೌಂಜಾರೊ ಇಂಜೆಕ್ಷನ್ ಅನ್ನು ಖುಷ್ಬು ತೆಗೆದುಕೊಂಡಿದ್ದಾರೆ ಎಂದು ಈ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಇದು ಮೌಂಜಾರೊ ಇಂಜೆಕ್ಷನ್‌ನ ಮ್ಯಾಜಿಕ್. ಈ ವಿಷಯ ನಿಮ್ಮ ಅನುಯಾಯಿಗಳಿಗೂ ತಿಳಿಯಲಿ. ಆಗ ಅವರೂ ಇಂಜೆಕ್ಷನ್ ತೆಗೆದುಕೊಳ್ಳಬಹುದು ಎಂದು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.
ಇನ್ನು ನಟಿ ಖುಷ್ಬೂ ಅತಿಯಾದ ವರ್ಕೌಟ್‌ನಿಂದಾಗಿ ಸ್ನಾಯು ಅಲರ್ಜಿ ಕಾಯಿಲೆಗೆ ತುತ್ತಾಗಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಇನ್ನು ಈ ಸ್ನಾಯು ಅಲರ್ಜಿ ಸಾಮಾನ್ಯವಾಗಿ ಕ್ರೀಡಾಪಟುಗಳನ್ನು ಬಾಧಿಸುತ್ತದೆ. ಕಾರಣ, ಅವರು ಮಿತಿಮೀರಿದ ವ್ಯಾಯಾಮ ಮಾಡುತ್ತಾರೆ. ಸಾಮಾನ್ಯವಾಗಿ ನಟಿಯರು ಹೆಚ್ಚಿನ ವ್ಯಾಯಾಮ ಮಾಡುವುದಿಲ್ಲ. ಆದರೆ, ನಟಿ ಖುಷ್ಬೂಗೆ ಯಾಕೆ ಈ ಕಾಯಿಲೆ ಬಂತೋ ಗೊತ್ತಿಲ್ಲ. 
ಆದರೆ, ಸ್ಯಾಯು ಅಲರ್ಜಿಯಿಂದ ಬಳಲುತ್ತಿರುವ ಅವರು ಸಣ್ಣಗಾದರೂ ಅದರ ಖುಷಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಸ್ಲಿಮ್ ಆಗಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಸ್ಲಿಮ್ ಏನೋ ಆಗಿದ್ದಾರೆ, ಆದರೆ ಆರೋಗ್ಯ ಕೈ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.