ಬಿಗ್ ಬಾಸ್ ನಿರೂಪಣೆಯಿಂದ ಕಿಚ್ಚ ಔಟ್; ಈ ವರ್ಷ ರಿಷಭ್ ಶೆಟ್ಟಿಯನ್ನು ಆಯ್ಕೆ ಮಾಡಿಕೊಂಡ ಸಂಸ್ಥೆ?

 | 
G
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌. ಕೋಟ್ಯಂತರ ಪ್ರೇಕ್ಷಕರ ಮೆಚ್ಚಿನ ಶೋನ ಹೊಸ ಆವೃತ್ತಿಗೆ ತೆರೆ ಮರೆಯಲ್ಲಿ ಭರ್ಜರಿ ಸಿದ್ಧತೆ ಆರಂಭವಾಗಿದೆ. ಈಗಾಗಲೇ ಕನ್ನಡದಲ್ಲಿ 10 ಸೀಸನ್‌ಗಳನ್ನು ಮುಗಿಸಿರುವ ಬಿಗ್‌ ಬಾಸ್‌ ರಿಯಾಲಿಟಿ ಶೋ ಸೀಸನ್‌ 11ರ ಸಿದ್ಧತೆಯಲ್ಲಿದೆ. ಇದೇ ಅಕ್ಟೋಬರ್‌ನಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಪ್ರಸಾರ ಶುರುವಾಗಲಿದೆ. ಹೀಗಾಗಿ ತೆರೆ ಮರೆಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಬಿಗ್​ಬಾಸ್​ ತಂಡ ಸ್ಪರ್ಧಿಗಳ ಪಟ್ಟಿ ಸಿದ್ಧಪಡಿಸುತ್ತಿದೆಯಂತೆ. 
ಜೊತೆಗೆ ಈ ಬಾರಿ ಬಹಳಷ್ಟು ಬದಲಾವಣೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಗ್‌ಬಾಸ್‌ ಸೀಸನ್ 10 ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಶೋ ಮುಗಿದು ವರ್ಷ ಕಳೆಯುತ್ತಾ ಬಂದರೂ ಸಹ ಈ ಸೀಜನ್‌ನ ಸ್ಪರ್ಧಿಗಳು ಮಾತ್ರ ಸುದ್ದಿಯಲ್ಲೇ ಇದ್ದಾರೆ. ಹೀಗಾಗಿ ಈ ಬಾರಿಯ ಸೀಸನ್‌ 11ರನ್ನು ದೊಡ್ಡ ಮಟ್ಟದಲ್ಲಿ ಉತ್ತಮವಾಗಿ ಜನರ ಮುಂದೆ ತರಲು ಟೀಂ ಪ್ಲ್ಯಾನ್‌ ಮಾಡುತ್ತಿದೆ. ಹೀಗಾಗಿ ಬೆಸ್ಟ್‌ ಸ್ಪರ್ಧಿಗಳ ಹುಡುಕಾಟದಲ್ಲಿದೆ. 
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಕೂಡ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೇಲೆ‌ ಪ್ರೇಕ್ಷಕರಿಗೂ ಕೂಡ ಅತಿಯಾದ ನಿರೀಕ್ಷೆ ಶುರುವಾಗಿದೆ. ಈ ಬಾರಿ ಬಿಗ್‌ ಬಾಸ್‌ನಲ್ಲಿ ಮನೆ ಸೇರಿದಂತೆ ಬಹಳ ಮುಖ್ಯವಾದ ಬದಲಾವಣೆಗಳನ್ನು ಮಾಡಲು ಸಜ್ಜಾಗುತ್ತಿದೆ. ಈ ಬೆಳವಣಿಗೆಯ ಮಧ್ಯೆ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಇದು ಪ್ರೇಕ್ಷಕರಿಗೆ ಶಾಕ್‌ ಕೊಟ್ಟಿದೆ. ಬಾಸ್‌ ಕನ್ನಡ ಸೀಸನ್‌ 11 ಆರಂಭವಾಗಲು ಕೇವಲ ಒಂದೆರಡು ತಿಂಗಳು ಮಾತ್ರ ಬಾಕಿ ಇದೆ.
 ಈ ಮಧ್ಯ ಈ ಸಲದ ಬಿಗ್‌ ಬಾಸ್‌ನಿಂದ ಕಿಚ್ಚ ಸುದೀಪ್ ಹೊರ ನಡೆಯಲಿದ್ದಾರೆ ಎನ್ನುವ ಶಾಕಿಂಗ್‌ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಕಿಚ್ಚ ಸುದೀಪ್ ಜಾಗಕ್ಕೆ ಬೇರೆ ನಿರೂಪಕ ಬರಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಕನ್ನಡದಲ್ಲಿ ಬಿಗ್‌ಬಾಸ್‌ ಆರಂಭದಿಂದ ಇಲ್ಲಿಯವರೆಗೂ ಕಿಚ್ಚ ಸುದೀಪ್ ತಮ್ಮ ನಿರೂಪಣೆ ಹಾಗೂ ನಾಯಕತ್ವ ಗುಣದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಂಡು ಬಂದಿದ್ದರು. 
ಆದರೆ ಈ ಬಾರಿ ಸುದೀಪ್‌ ಬಾಸ್‌ ಕನ್ನಡ ಸೀಸನ್‌ 11ರ ನಿರೂಪಣೆಯಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಕಿಚ್ಚ ಸುದೀಪ್‌ ಸ್ಥಾನಕ್ಕೆ ಯಾರು ಬರಬಹುದು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.