ಸಂಗೀತ ಹಾಗೂ ಸ್ನೇಹಿತ್.ಗೆ ಲಾಸ್ಟ್ ವಾರ್ನಿಂಗ್ ಕೊಟ್ಟ ಕಿಚ್ಚ, ಮಧ್ಯರಾತ್ರಿ ಆ ಗಿದ್ದೇನು

ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಆರನೇ ವಾರ ಸಂಗೀತಾ - ಕಾರ್ತಿಕ್ - ತನಿಷಾ ಮಧ್ಯೆ ಜೋರು ಗಲಾಟೆ ನಡೆದಿತ್ತು. ಫ್ರೆಂಡ್ ಆಗಿ ಅವಕಾಶವಿದ್ದರೂ ನನ್ನನ್ನ ಸೇಫ್ ಮಾಡಲಿಲ್ಲ ಅಂತ ಪದೇ ಪದೇ ಹೇಳಿ ಕಾರ್ತಿಕ್, ತನಿಷಾ ಅವರನ್ನ ಸಂಗೀತಾ ಚುಚ್ಚಿದ್ದರು. ಫ್ಲಿಪ್, ಹಾರ್ಟ್ ಬ್ರೇಕ್, ಟ್ರಸ್ಟ್ ಇಲ್ಲ ಎಂಬೆಲ್ಲಾ ಪದಬಳಕೆಯನ್ನ ಸಂಗೀತಾ ಮಾಡಿದ್ದರು.
ಈಗ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಮೂವರ ಫ್ರೆಂಡ್‌ಶಿಪ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಇದೇನಾ ಫ್ರೆಂಡ್‌ಶಿಪ್? ಫ್ರೆಂಡ್ ಆಗಿ ನೀವು 100% ಕೊಟ್ಟಿದ್ದೀರಾ? ಅಂತ ಕೇಳಿ ಸಂಗೀತಾ ಕಿವಿ ಹಿಂಡಿದ್ದಾರೆ ಕಿಚ್ಚ ಸುದೀಪ್. ಸಂಗೀತಾರ ಡಾಮಿನೆನ್ಸ್ ಸಹಿಸಿಕೊಂಡು, ಅಡ್ಜಸ್ಟ್ ಮಾಡಿಕೊಳ್ಳುತ್ತಿರುವ ಕಾರ್ತಿಕ್ ಮತ್ತು ತನಿಷಾಗೂ ಕಿಚ್ಚ ಸುದೀಪ್ ಕ್ಲಾಸ್ ತಗೊಂಡಿದ್ದಾರೆ.
ಅವರಷ್ಟೇ ಅಲ್ಲದೆ ಗ್ರೂಪ್ ಮಾಡಿ ಕೊಂಕು ಮಾತಾಡಿ ಎಲ್ಲರಿಗೂ ಹರ್ಟ್ ಮಾಡುತ್ತಿರುವಸ್ನೇಹಿತ ಅವರಿಗೆ ಕೂಡ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾಮಿನೇಷನ್‌ಗಾಗಿ ಬಿಗ್ ಬಾಸ್ ಲೂಡೋ ಟಾಸ್ಕ್ ನೀಡಿದ್ದರು. ಒಂದು ಹಂತದಲ್ಲಿ ಕಾರ್ತಿಕ್ ಮತ್ತು ತನಿಷಾಗೆ ಎದುರಾಳಿ ತಂಡದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಿಕ್ಕಿತ್ತು. ಅವರು ವರ್ತೂರು ಸಂತೋಷ್ ಅವರ ಜೊತೆಗೂಡಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು.
ಎದುರಾಳಿ ತಂಡದಲ್ಲಿದ್ದ ಸಂಗೀತಾ, ತನ್ನನ್ನೇ ಸೇವ್ ಮಾಡ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ! ನಾವು ಎದುರಾಳಿ ತಂಡದಿಂದ ಸಿರಿ ಅವರನ್ನು ಸೇವ್ ಮಾಡುತ್ತೇವೆ ಎಂದು ತನಿಷಾ ಘೋಷಿಸಿದರು. ಆವರೆಗೂ ನಗುನಗುತ್ತಾ ಕುಣಿದಾಡುತ್ತಿದ್ದ ಸಂಗೀತಾ ಮುಖದಲ್ಲಿ ಒಮ್ಮೆಲೇ ಬೇಸರದ ಗೆರೆ ಮೂಡಿತ್ತು. ಇನ್ನು ವರ್ತೂರ್ ಸಂತೋಷ್ ಅವರಿಗೆ ಪ್ರತಾಪ ಅವರನ್ನು ಮುಂದಿಟ್ಟು ನೀವ್ ಆಡಬೇಡಿ ನಿಮ್ಮ ಆಟ ನೀವ್ ಆಡಿ ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.