ಹೆಂಡತಿ ಬೇಡ ಎಂದಿದ್ದ ಕಿಚ್ಚ; ಒಮ್ಮೆಲೇ ಬೇಕು ಎಂದಿದ್ದು ಯಾ ಕೆ ಗೊ ತ್ತಾ

 | 
Gh

ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಕೂಡ ಅನೇಕ ನಟ-ನಟಿಯರು ವಿಚ್ಛೇಧನ ಪಡೆದಿದ್ದರು, ಕೆಲವರು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿ ತಮ್ಮ ನಿರ್ಧಾರವನ್ನು ಬದಲಾಯಿಸಿದ ಘಟನೆಗಳು ಕೂಡ ನಡೆದಿದ್ದವು. ಈ ಪೈಕಿ ನಟ ಕಿಚ್ಚ ಸುದೀಪ್‌ ಕೂಡ ಒಬ್ಬರು. ಈ ಹಿಂದೆ ಅಂದರೆ ಸುಮಾರು ಒಂಬತ್ತು ವರ್ಷಗಳ ಹಿಂದೆ ನಟ ಕಿಚ್ಚ ಸುದೀಪ್‌ ಹಾಗೂ ಅವರ ಪತ್ನಿ ಪ್ರಿಯಾ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಆ ಒಬ್ಬ ವ್ಯಕ್ತಿಯಿಂದ ಇಬ್ಬರು ಮತ್ತೆ ಒಂದಾಗಿದ್ದರು.

ಜೊತೆಯಾಗಿ ಬಾಳಲು ಎರಡನೇ ಅವಕಾಶ ಪಡೆದ ಕಿಚ್ಚ ಸುದೀಪ್‌ ಹಾಗೂ ಪ್ರಿಯಾ ಸುದೀಪ್‌ ಅಂದಿನಿಂದ ಇಂದಿನವರೆಗೆ ವಿಚ್ಛೇದನದ ಬಗ್ಗೆ ಮಾತುಗಳನ್ನು ಆಡಿಲ್ಲ. ಎಲ್ಲಾ ಸಮಯದಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುವ ಸುದೀಪ್‌-ಪ್ರಿಯಾ ಅವರ ಅನ್ಯೋನ್ಯತೆಯನ್ನು ಈಗ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಜೊತೆಗೆ ಕಿಚ್ಚ ಸುದೀಪ್‌ ಕೂಡ ತಮ್ಮ ಯಶಸ್ಸಿನಲ್ಲಿ ಪ್ರಿಯಾ ಅವರ ಪಾತ್ರದ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ.

ಅಷ್ಟಕ್ಕೂ ಕಿಚ್ಚ ಸುದೀಪ್‌-ಪ್ರಿಯಾ 2015ರಲ್ಲಿ ವಿಚ್ಛೇಧನ ಪಡೆಯಲು ಮುಂದಾಗಿದ್ದರು. ಈ ಮೂಲಕ ಸುಮಾರು 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ಸಜ್ಜಾಗಿದ್ದರು. ಸುದೀಪ್ ದಂಪತಿ ಪರಸ್ಪರ ಒಪ್ಪಿ ದೂರವಾಗಲು ತೀರ್ಮಾನಿಸಿ, ಇಬ್ಬರೂ ಒಟ್ಟಿಗೆ ಸೇರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದರು.ಇಬ್ಬರ ನಡುವೆ ಹೊಂದಾಣಿಕೆ ಇಲ್ಲ, ಭಿನ್ನಾಭಿಪ್ರಾಯ ಹೆಚ್ಚುತ್ತಿದೆ. 

ಸಣ್ಣ ಪುಟ್ಟ ವಿಚಾರಗಳಿಗೂ ವೈಮನಸ್ಯ ಉಂಟಾಗುತ್ತಿದೆ. ಇಬ್ಬರಿಗೂ ತಾವು ಒಟ್ಟಾಗಿ ಬಾಳ್ವೆ ನಡೆಸಲು ಸಾಧ್ಯವಿಲ್ಲ ಎಂದು ಸುದೀಪ್ ದಂಪತಿ ಈ ನಿರ್ಧಾರ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಕಾನೂನು ಪ್ರಕಾರ ಪುತ್ರಿ ಸಾನ್ವಿಯನ್ನು ಪ್ರಿಯಾ ಸುಪರ್ದಿಗೆ ನೀಡಲು ಸುದೀಪ್ ಸಮ್ಮತಿಸಿ, 19 ಕೋಟಿ ನೀಡಲು ಸಹ ಅಂದು ಸುದೀಪ್ ಒಪ್ಪಿದ್ದರು ಎಂದು ಸುದ್ದಿಯಾಗಿತ್ತು.

ಆದರೆ ಕೆಲ ವರ್ಷಗಳ ಬಳಿಕ ನಟ ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಅವರ ವಿವಾಹ ವಿಚ್ಛೇದನ ಪ್ರಕರಣವು ಸುಖಾಂತ್ಯ ಕಂಡಿತ್ತು. ಚಿತ್ರರಂಗದ ಹಿರಿಯ ನಟರ ಬುದ್ಧಿ ಮಾತುಗಳನ್ನು ಕೇಳಿದ ನಂತರ ತಮ್ಮ ಪುತ್ರಿ ಸಾನ್ವಿಗಾಗಿ ಈ ಜೋಡಿ ಮತ್ತೆ ಒಂದಾಗಿದ್ದರು. ತಮ್ಮ ಮಗಳು ಸಾನ್ವಿಯ ಭವಿಷ್ಯದ ಸಲುವಾಗಿ ಜೀವನದಲ್ಲಿ ಎರಡನೇ ಅವಕಾಶವನ್ನು ಸುದೀಪ್‌-ಪ್ರಿಯಾ ದಂಪತಿ ಪಡೆದುಕೊಂಡರು. ಬಳಿಕ ನ್ಯಾಯಾಲಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊಂಡರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.