ಬಹುಕೋಟಿ ಸಂಭಾವನೆಗೆ ಒಪ್ಪಿಕೊಂಡ ಬಳಿಕ ಬಿಗ್ ಬಾಸ್ ಹೋಸ್ಟ್ ಒಪ್ಪಿಕೊಂಡ ಕಿಚ್ಚ ಸುದೀಪ್
Jul 1, 2025, 20:30 IST
|

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ಬಾಸ್.. ಕಳೆದ 11 ಸೀಸನ್ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ ಕಿಚ್ಚ ಸುದೀಪ್. ಆದ್ರೆ ಬಿಗ್‌ಬಾಸ್ ಸೀಸನ್ 11 ನಡೆಯುತ್ತಿದ್ದಾಗಲೇ ಕಿಚ್ಚ ಸುದೀಪ್ ಅವರು ವಿದಾಯ ಹೇಳಿದ್ದರು. ಇದು ನನ್ನ ಕೊನೆಯ ಶೋ ಅಂತ ಹೇಳಿ ಶಾಕ್ ಕೊಟ್ಟಿದ್ದರು. ಈ ಮಾತು ಅಭಿಮಾನಿಗಳ ಕಿವಿಗೆ ಬಿಳುತ್ತಿದ್ದಂತೆ ತೀವ್ರವಾಗಿ ಬೇಸರಗೊಂಡಿದ್ದರು.
ಅಲ್ಲದೇ ಮುಂದಿನ ಸೀಸನ್ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡ್ಬೇಕು, ಇಲ್ಲವಾದರೇ ನಾವು ಬಿಗ್‌ಬಾಸ್ ನೋಡೋದಿಲ್ಲ ಅಂತ ಅಭಿಮಾನಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಈ ಬಾರಿ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ ಅನ್ನೋದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಹೋಸ್ಟ್ ಆಗಿ ವಾಪಸ್ ಬರ್ತಾರಾ? ಅಥವಾ ಇಲ್ವಾ ಎಂಬ ಡೌಟ್ ವೀಕ್ಷಕರಿಗೆ ಕಾಡುತ್ತಿತ್ತು.
ಅಲ್ಲದೇ ವಾಹಿನಿ ಕಡೆಯಿಂದ ಎಷ್ಟೇ ಮನವೊಲಿಸುವ ಪ್ರಯತ್ನ ನಡೆದಿದ್ರೂ ಕಿಚ್ಚ ಒಪ್ಪಿಲ್ಲ ಎಂಬ ಮಾತುಗಳು ಕೆಳಿ ಬಂದಿದ್ದವು. ಇದೀಗ ಕೊನೆಗೂ ಬಿಗ್‌ಬಾಸ್ ವೀಕ್ಷಕರಿಗೆ ಖುಷಿ ಸುದ್ದಿ ಕೊಟ್ಟಿದೆ ತಂಡ. ಈ ಬಾರಿಯ ಬಿಗ್‌ಬಾಸ್ ಸೀಸನ್ 12 ನಿರೂಪಣೆ ಸಾರಥ್ಯವನ್ನು ಕಿಚ್ಚ ಸುದೀಪ್ ಅವರೇ ವಹಿಸಿಕೊಳ್ಳುತ್ತಿದ್ದಾರೆ. ಇದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ, ಬಿಗ್‌ಬಾಸ್ ವೀಕ್ಷಕರಿಗೆ ಖುಷಿ ಕೊಟ್ಟಿದೆ
ಹೌದು, ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ 12 ಸೀಸನ್ ಆರಂಭಕ್ಕೆ ಸಜ್ಜಾಗಿದ್ದು, ಸದ್ಯ ಡೇಟ್ ರಿಲೀಸ್ ಬಗ್ಗೆ ಬಿಗ್‌ಬಾಸ್ ತಂಡ ಬಿಟ್ಟು ಕೊಟ್ಟಿಲ್ಲ. ಇನ್ನು, ಬಿಗ್‌ಬಾಸ್ ಹೊಸ ಸೀಸನ್ ಆರಂಭಕ್ಕೆ 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಬಿಗ್‌ಬಾಸ್ ತಂಡ ನಿನ್ನೆ ಆಯೋಜನೆ ಮಾಡಿದ ಪ್ರೆಸ್ ಮೀಟ್ನಲ್ಲಿ ಮುಂದಿನ ಸೀಸನ್ ಅನ್ನು ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯಲಿದ್ದಾರೆ ಎಂದು ಅನೌನ್ಸ್ ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.