ದರ್ಶನ್ ಜೊತೆ ಸ್ನೇಹಿ ಬೆಳೆಸಲು ಕಿಚ್ಚ ಸುದೀಪ್ ಅಸ್ತು, ಮೀಡಿಯಾ ಮುಂದೆ ದಾಸನ ಬಗ್ಗೆ ಕಿಚ್ಚನ ಅದ್ಭುತ ಮಾತು

 | 
ಪು

ಸುಮಲತಾ ಬರ್ತ್​ಡೇ ಪಾರ್ಟಿಯ ಘಟನೆ ಅವರ 6 ವರ್ಷಗಳ ಮುನಿಸು ಕೊನೆಯಾಗುವ ಸಿಗ್ನಲ್ ಕೊಟ್ಟಿತ್ತು. ಇದೀಗ ಅಂದುಕೊಂಡಂತೆಯೇ ಆಗಿದೆ. ಕೊನೆಗೂ ದರ್ಶನ್ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಸ್ಯಾಂಡಲ್​ವುಡ್​ನ ಸ್ಟಾರ್ ನಟರ ಮುನಿಸು ಕೊನೆಯಾಗಿದ್ದ ಬಗ್ಗೆ ಕಳೆದೊಂದು ವಾರದಿಂದ ಭಾರೀ ಅಪ್ಡೇಟ್ ಬರುತ್ತಲೇ ಇದೆ. ಸಂಸದೆ, ನಟಿ ಸುಮಲತಾ ಅಂಬರೀಷ್ ಅವರ ಬರ್ತ್​ಡೇ ಪಾರ್ಟಿಯಲ್ಲಿ ದರ್ಶನ್ ಹಾಗೂ ಸುದೀಪ್ ಭಾಗಿಯಾಗಿದ್ದರು.

ಈ ಒಂದು ಘಟನೆ ಅವರ 6 ವರ್ಷಗಳ ಮುನಿಸು ಕೊನೆಯಾಗುವ ಸಿಗ್ನಲ್ ಕೊಟ್ಟಿತ್ತು. ಇದೀಗ ಅಂದುಕೊಂಡಂತೆಯೇ ಆಗಿದೆ. ಕೊನೆಗೂ ದರ್ಶನ್ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಸುಮಲತಾ ಅವರ ಬರ್ತ್​ಡೇ ಪಾರ್ಟಿ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು, ಸುಮಲತಾ ಪಾರ್ಟಿಗೆ ಹೋಗಿದ್ದೆ. ಮುಂಚೆನೇ ದರ್ಶನ್ ಇರುತ್ತಾರೆ ಅಂತ ನಂಗೂ ಗೊತ್ತಿತ್ತು. ಕಿತ್ತಾಡಿಕೊಂಡರೂ, ಜಗಳ ಮಾಡಿಕೊಂಡರು ಅನ್ನೋದು ಕಲ್ಪನೆ ಎಂದಿದ್ದಾರೆ.

ಗೋಡೆ ಮುರಿಯಬೇಕು, ಆದರೆ ಕಲ್ಪನೆ ಇರಬಾರದು. ನನ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದರೆ ಒಪ್ಪುತ್ತೇನೆ. ಪ್ರಶ್ನೆಗಳು ಬರುತ್ತದೆ, ಒಳ್ಳೇದು, ಕೆಟ್ಟದು ಇರುತ್ತವೆ. ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ ಎಂದಿದ್ದಾರೆ. ಇಬ್ರು ಮೆಚ್ಯೂರ್ಡ್ ಇದ್ದೇವೆ. ಎಲ್ಲವೂ ಸರಿ ಹೋಗಬೇಕು ಅಂದಾಗ ಸರಿ ಹೋಗುತ್ತದೆ ಎಂದು ಇತ್ತೀಚೆಗೆ ನಡೆದ ಬೆಳವಣಿಗೆಗಳ ಬಗ್ಗೆ ಹೀಗೆ ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ ಕಿಚ್ಚ ಸುದೀಪ್. 

ನನ್ನ ಶೋಗೂ ಒಂದು ತೂಕ ಸಿಕ್ತು, ಅರ್ಥ ಸಿಕ್ತು. ಮನೆಯಲ್ಲಿರೋರು ನಮ್ಮನ್ನ ಗೌರವಿಸ್ತಾರೆ. ನನ್ನ ಕ್ಷಣವನ್ನ ಎಲ್ಲರೂ ಸೆಲೆಬ್ರೆಟ್ ಮಾಡಿದ್ದಾರೆ. ಪ್ರೀತಿ ತೋರಿಸೋಕೆ ಒಂದು ರೀತಿ ಇರುತ್ತದೆ. ನಿಮ್ಮಿಂದಲೇ ತಾಳ್ಮೆ ಕಲಿತಿದ್ದೀನಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.