ನನ್ನ ಕೋಟಿ ಬೆಲೆಯ ಹೊಸ ಕಾರು ಅಪಘಾತವಾಗುವುದಕ್ಕೆ ಕಾರಣ ಅನ್ನ ಹೆಂಡತಿ, ಮೌನ ಮುರಿದ ಕಿಚ್ಚ ಸುದೀಪ್

 | 
ವರಹ
ನಟ ಕಿಚ್ಚ ಸುದೀಪ್ ಸಕಲಕಲಾವಲ್ಲಭ ಎನಿಸಿಕೊಂಡಿದ್ದಾರೆ. ನಟನಾಗಿ ಮಾತ್ರವಲ್ಲದೇ ತಮ್ಮ ಗಾಯನ, ನಿರೂಪಣೆಯಿಂದಲೂ ಮೋಡಿ ಮಾಡಿದ್ದಾರೆ. ಪಾಕ ಪ್ರವೀಣರು ಕೂಡ. ಇನ್ನು ಕ್ರಿಕೆಟ್ ಬಗ್ಗೆ ಒಲವು ಮಾತ್ರವಲ್ಲ, ರಾಜ್‌ ಕಪ್, ಸಿಸಿಎಲ್, ಕೆಸಿಸಿ ಟೂರ್ನಿಗಳಲ್ಲಿ ಆಡಿದ್ದಾರೆ. ಈಗ ಕಾರ್ ರೇಸ್ ಪ್ರಪಂಚಕ್ಕೆ ಅಡಿ ಇಟ್ಟಿದ್ದಾರೆ.ಇದೀಗ ನಟ ಸುದೀಪ್ ಇಂಡಿಯನ್ ಕಾರ್‌ ರೇಸ್ ಫೆಸ್ಟಿವಲ್‌ನಲ್ಲಿ ಭಾಗಿ ಆಗುತ್ತಿದ್ದಾರೆ. ಟೂರ್ನಿಗೆ ಬೆಂಗಳೂರು ತಂಡವನ್ನು ಖರೀದಿಸಿದ್ದಾರೆ. 4 ದಿನಗಳ ಹಿಂದೆಯೇ ಈ ಬಗ್ಗೆ ಫಿಲ್ಮಿ ಬೀಟ್ ಕನ್ನಡ ಸುದ್ದಿ ಮಾಡಿತ್ತು. ಇದೀಗ ಆ ಸುದ್ದಿ ನಿಜವಾಗಿದೆ. ಈ ಬಗ್ಗೆ ಸುದೀಪ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪತ್ನಿ ಪ್ರಿಯಾ ಜೊತೆ ಸುದೀಪ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಎಂದು ನಾಮಕರಣ ಮಾಡಲಾಗಿದೆ. ಕಳೆದ ಬಾರಿ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕೊಲ್ಕತ್ತಾ ರಾಯಲ್ ಟೈಗರ್ಸ್, ತೆಲುಗು ನಟ ನಾಗಚೈತನ್ಯಾ ಹೈದರಾಬಾದ್ ಬ್ಲ್ಯಾಕ್ ಬರ್ಡ್ಸ್ ಹಾಗೂ ಬಾಲಿವುಡ್ ನಟ ಅರ್ಜುನ್ ಕಪೂರ್ ಸ್ಪೀಡ್ ಡೆಮೊನ್ಸ್ ಡೆಲ್ಲಿ ಸಹ ಮಾಲೀಕರಾಗಿ ತಂಡಗಳನ್ನು ಬೆಂಬಲಕ್ಕೆ ನಿಂತಿದ್ದರು. ಈ ಬಾರಿ ಅವರೊಟ್ಟಿಗೆ ಬೆಂಗಳೂರು ತಂಡವನ್ನು ಕಿಚ್ಚ ಹುರಿದುಂಬಿಸಲಿದ್ದಾರೆ.
ಮುಂದಿನ ತಿಂಗಳು ಇಂಡಿಯನ್ ಕಾರ್‌ ರೇಸ್ ಫೆಸ್ಟಿವಲ್‌ನಲ್ಲಿ ರೇಸ್ ನಡೆಯಲಿದೆ. ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ, ಬೆಂಗಳೂರು, ದೆಹಲಿ ಫ್ರಾಂಚೈಸಿಗಳ ಮಧ್ಯೆ ರೇಸ್ ಇರಲಿದೆ. ಲೈಸೆನ್ಸ್ ಇದ್ದವರು ಮಾತ್ರ ರೇಸ್‌ನಲ್ಲಿ ಕಾರ್ ಒಳಗೆ ಕೂತು ಕಾರ್ ಚಲಾಯಿಸಬೇಕು. ಕಾರಣ ತಮ್ಮ ಬಳಿ ಆ ಲೈಸೆನ್ಸ್ ಇಲ್ಲ ಎಂದಿದ್ದಾರೆ. ಬಿಡ್ಡಿಂಗ್ ಮೂಲಕ ಓನರ್‌ಶಿಪ್ ಆಯ್ಕೆ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ RPPLನ ಅಧ್ಯಕ್ಷ ಅಖಿಲೇಶ್ ರೆಡ್ಡಿ ಹಾಗೂ ಹ್ಯಾರಿಸ್ ನಲಪಾಡ್ ಸಹ ಭಾಗಿ ಆಗಿದ್ದರು. 
ಪ್ರಿಯಾ ಸುದೀಪ್ ತಂಡದ ಲೋಗೊ ಅನಾವರಣ ಮಾಡಿದ್ದರು. ತಂಡದ 2 ಕಾರುಗಳನ್ನು ಪ್ರದರ್ಶಿಸಲಾಯಿತು. ಎಷ್ಟೇ ದುಬಾರಿ ಕಾರುಗಳು ತಮ್ಮ ಬಳಿ ಇದ್ದರೂ ಮಾರುತಿ 800 ತಮ್ಮ ಇಷ್ಟದ ಕಾರು ಎಂದು ಸುದೀಪ್ ಹೇಳಿದ್ದಾರೆ. ಅದು ತಮ್ಮ ತಂದೆಯವರ ಕಾರು. ಅದೇ ಕಾರಿನಲ್ಲಿ ಒಮ್ಮೆ ಡ್ರೈವಿಂಗ್ ಕಲಿಯಲು ಹೋಗಿ ಅಪಘಾತ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಇನ್ನು ಮತ್ತೊಮ್ಮೆ ಪ್ರಿಯಾ ಜೊತೆ ಇರುವಾಗ ಅಪಘಾತ ಆಗಿತ್ತು. ಅದು ಆಗಲು ಮೂಲ ಕಾರಣ ಪ್ರಿಯಾ ಎಂಬ ಶಾಕಿಂಗ್ ಸತ್ಯ ಕೂಡ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.