ಬಿಗ್ ಬಾಸ್ ಸ್ಪರ್ಧಿ ಪ್ರತಾಪ್ ಮೇಲೆ ಕೋರ್ಟ್ ನೋ.ಟಿಸ್, ತ.ಲೆಕೆಡಿಸಿಕೊಂಡ ಕಿಚ್ಚ ಸುದೀಪ್

 | 
ರೀೀ

ಅದ್ಯಾಕೋ ಗೊತ್ತಿಲ್ಲ ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋ ಕಂಪ್ಲೆಂಟ್, ಅರೆಸ್ಟ್, ನೋಟಿಸ್ನಿಂದಲೇ ಭಾರೀ ಸುದ್ದಿ ಆಗ್ತಿದೆ. ವರ್ತೂರು ಸಂತೋಷ್ ಅರೆಸ್ಟ್ ಆಯ್ತು ತನಿಷಾ ಮೇಲೆ ಎಫ್ಐಆರ್ ಕೂಡ ಆಯ್ತು ಇದೀಗ ಡ್ರೋನ್ ಪ್ರತಾಪ್​ಗೆ ಲೀಗಲ್ ನೋಟಿಸ್ ಬಂದಿದೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಡ್ರೋನ್ ಪ್ರತಾಪ್ ಗೆ ಫ್ಯಾನ್ ಫಾಲೋವರ್ಸ್ ಹೆಚ್ಚಿದ್ದಾರೆ. ತನ್ನದೇ ರೀತಿಯಲ್ಲಿ ಆಟವಾಡ್ತಾ ಡ್ರೋನ್ ಪ್ರತಾಪ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಎಲ್ಲ  ಹಳೆಯ ಸಂಗತಿಗಳನ್ನು ಜನ ಮರೆತಿದ್ದಾರೆ ಎನ್ನುವಷ್ಟರಲ್ಲಿ ಬಿಗ್ ಬಾಸ್ ಮನೆಯಲ್ಲಿರೋ ಡ್ರೋನ್ ಗೆ ಇದೀಗ ಲೀಗಲ್ ನೋಟಿಸ್ ಬಂದಿದೆ.

ಬಿಗ್ ಬಾಸ್ ಮನೆಯಲ್ಲಿರೋ ಡ್ರೋನ್ ಪ್ರತಾಪ್ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಅಧಿಕಾರಿಯಾಗಿರುವ ಡಾ. ಪ್ರಯಾಗ್ ಆರೋಪಿಸಿದ್ರು. ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಡ್ರೋನ್ ಪ್ರತಾಪ್ ಹೇಳಿದ್ದೆಲ್ಲಾ ಸುಳ್ಳು ನಾನು ಡ್ರೋನ್ ಗೆ ಯಾವುದೇ ತೊಂದರೆ ನೀಡಿಲ್ಲ ಎಂದಿದ್ದ ಡಾ. ಪ್ರಯಾಗ್ ತಮ್ಮ ವಕೀಲರ ಮೂಲಕ ಡ್ರೋನ್ ಪ್ರತಾಪ್ಗೆ ನೋಟಿಸ್ ಕಳುಹಿಸಿದ್ದಾರೆ.

ಈ ನೋಟಿಸ್ ತಲುಪಿದ 1 ತಿಂಗಳ ಒಳಗೆ ಡ್ರೋನ್ ಪ್ರತಾಪ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಇಲ್ಲವಾದ್ರೆ ಕಾನೂನು ಕ್ರಮ ತೆಗೆದುಕೊಳ್ಳೋದಾಗಿ ತಿಳಿಸಲಾಗಿದೆ. ತಿಂಗಳ ಒಳಗೆ ಕ್ಷಮೆ ಕೇಳದೇ ಹೋದ್ರೆ ಡ್ರೋನ್ ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಡಾ. ಪ್ರಯಾಗ್ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ.

ಈ ಹಿಂದೆ ಕೊರೊನಾ ಕಾಲದಲ್ಲಿ ನೋಡಲ್ ಅಧಿಕಾರಿಯೊಬ್ಬರು ಕೊರೊನಾ ಕಾಲದಲ್ಲಿ ನನ್ನನ್ನು ಮಾನಸಿಕ ರೋಗಿ ಎಂದು ಕರೆದ್ರು. ನನ್ನ ತಲೆಗೆ ಹೊಡೆದಿದ್ದರು ಎಂದು ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಹೇಳಿಕೊಂಡಿದ್ರು.ಬಿಗ್ ಬಾಸ್ ಶೋ ವೇಳೆ ಡ್ರೋನ್ ಪ್ರತಾಪ್, ಡಾ. ಪ್ರಯಾಗ್ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಪ್ರಯಾಗ್ ವಕೀಲರು ಆರೋಪಿಸಿ ನೋಟಿಸ್ ನೀಡಿದ್ದಾರೆ. 

ಈ ಆರೋಪಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಪ್ರತಾಪ್ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.