// custom css

ವಿನಯ್ ಬಗ್ಗೆ ಹೊರಬಿತ್ತು ಸ್ಫೋ.ಟಕ ಸುದ್ದಿ, ಬೆ.ಚ್ಚಿಬಿದ್ದ ಕಿಚ್ಚ ಸುದೀಪ್

 | 
V

ಕಿರುತೆರೆ ನಟ ವಿನಯ್ ಗೌಡ 'ಬಿಗ್ ಬಾಸ್‌' ಮನೆಗೆ ಕಾಲಿಟ್ಟ ದಿನದಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ನೆಗೆಟಿವ್ ಕಾರಣಗಳಿಗೆ ವಿನಯ್ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದೀಗ ಕಿರುತೆರೆ ನಟಿ ಇಳಾ ವಿಟ್ಲಾ ಅವರು ವಿನಯ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಿನಯ್ ಅವರಿಂದಾಗಿ ತಮ್ಮ ಪತಿಯ ದವಡೆ ಹಲ್ಲು ಮುರಿಯಿತು ಎಂದಿದ್ದಾರೆ ಇಳಾ.

ಬಿಗ್ ಬಾಸ್' ಮನೆಯಲ್ಲಿ ಆನೆ ಎಂದು ಕರೆಸಿಕೊಳ್ಳುವ ವಿನಯ್ ಗೌಡ ಸಾಕಷ್ಟು ಕಾರಣಗಳಿಗೆ ಸುದ್ದಿಯಾಗುತ್ತಿದ್ದಾರೆ. ಇದೀಗ ಕಿರುತೆರೆ ನಟಿ ಇಳಾ ವಿಟ್ಲಾ ಅವರು ಒಂದಷ್ಟು ಗಂಭೀರ ಆರೋಪಗಳನ್ನು ವಿನಯ್ ಮೇಲೆ ಮಾಡಿದ್ದಾರೆ. 2015ರಲ್ಲಿ ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ವಿನಯ್ ದಂಪತಿ ಮತ್ತು ಇಳಾ ದಂಪತಿ ಕೂಡ ಭಾಗಿಯಾಗಿದ್ದರು. ಆಗ ನಡೆದ ಒಂದು ಕಹಿ ಘಟನೆಯನ್ನು ಇಳಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ನಾನೊಬ್ಬಳು ಕಲಾವಿದೆ. ರಿಯಾಲಿಟಿ ಶೋಗಳನ್ನ ಮಾಡಿದ್ದಕ್ಕೆ ಹಾಗೂ ಬಿಗ್ ಬಾಸ್' ನೋಡುತ್ತಿರುವುದರಿಂದ ವಿನಯ್ ಅವರನ್ನ ಹತ್ತಿರದಿಂದ ನೋಡಿ, ಅನುಭವಿಸಿರುವುದಕ್ಕೆ ಈ ಪೋಸ್ಟ್ ಮಾಡುತ್ತಿದ್ದೇನೆ. ವಿನಯ್ ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಅಂತಾನೇ ಇರ್ತಾರಲ್ವಾ? ಆದ್ರೆ ಅವರಿಂದ ಬೇರೆಯವರಿಗೆ ತೊಂದರೆ ಆದ್ರೆ ಏನ್ ಮಾಡ್ಬೇಕಿತ್ತು? ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತದೆ. 

ಸ್ವಲ್ಪ ಗಾಯಗಳು ಆಗೋದು ಸಾಮಾನ್ಯ. ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ. ನಾನು ಗೆಲ್ಲಲೇಬೇಕು ಅನ್ನೋ ಮನಸ್ಥಿತಿ ಇರೋರು ಯಾವತ್ತಿಗೂ ಉದ್ಧಾರ ಆಗಿಲ್ಲ ಎಂದು ಇಳಾ ವಿಟ್ಲಾ ಬರೆದುಕೊಂಡಿದ್ದಾರೆ. ಬಿಗ್ ಬಾಸ್ ಶೋ ಎಂದರೆ ನನಗೆ ಮೊದಲಿಂದಲೂ ಇಷ್ಟ. ಕಿರುತೆರೆ ಅಂತ ತಾತ್ಸಾರ ಮಾಡಿದವರನ್ನು ಕಿರುತೆರೆಗೆ ಕರೆದುಕೊಂಡ ಬಂದಿರುವ ಹೆಮ್ಮೆಯ ಶೋ. ಕಿಚ್ಚ ಸುದೀಪ್ ಅವರು ಹೇಳುವ ಬುದ್ಧಿಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. 

ಇದೇ ವಿನಯ್ ಸೂಪರ್ ಜೋಡಿ ಟೈಮ್‌ನಲ್ಲಿ ನನ್ನ ಕಣ್ಣೆದುರಿಗೆ ಪ್ಲ್ಯಾನ್ ಮಾಡ್ಕೊಂಡು ಬಂದು, ನನಗೇನಾದ್ರೂ ಆದ್ರೆ, ನಾನ್ ಯಾರನ್ನೂ ಸುಮ್ಮನೆ ಬಿಡಲ್ಲ. ಅಂತ ನಮ್ಮ ಹತ್ತಿರ ಹೇಳುತ್ತ ಹೆದರಿಸುತ್ತಿದ್ದರು. ಅವತ್ತು ನಮ್ಮೆಜಮಾನರ ಜೊತೆ ವಿನಯ್ ಆಟ ಆಡುವಾಗ, ದವಡೆ ಹಲ್ಲು ಮುರಿದರು. ಅಷ್ಟು ಸಾಲದೆಂಬಂತೆ, ರಿಬ್ ಫ್ರ್ಯಾಕ್ಚರ್ ಮಾಡಿದ್ದರು. 

ಆದರೂ ಅವರಿಗೆ ನಾವು ಒಂದು ಮಾತನ್ನೂ ಹೇಳಲಿಲ್ಲ. ಶೋ ಮುಗಿದಮೇಲೆ ನೋವು ಜಾಸ್ತಿ ಆಯ್ತು. ಆರು ತಿಂಗಳು ಸರಿಯಾಗಿ ಕೆಲಸ ಮಾಡಕ್ಕಾಗದೇ ಆರ್ಯನ್ ಒದ್ದಾಡಿದ್ದಾರೆ. ಡಾಕ್ಟರ್ ಏನು ಮಾಡಬಾರದು, ರೆಸ್ಟ್ ಮಾಡಿ ಅಂತ ಸೂಚಿಸಿದ್ದರು ಎಂದು ಇಳಾ ವಿಟ್ಲಾ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.