ನಿಮಗೆಲ್ಲಾ ಮನುಷತ್ವನೇ ಇಲ್ವಾ, ತಂದೆಯ ಫ್ಯಾನ್ಸ್ ವಿರುದ್ಧ ರೊಚ್ಚಿಗೆದ್ದ ಕಿಚ್ಚ ಸುದೀಪ್ ಮಗಳು
Oct 21, 2024, 18:42 IST
|

ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ನಟ ಸುದೀಪ್ ತಾಯಿ ಸರೋಜಾ ಸಂಜೀವ್ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಕುಟುಂಬ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಸಂಜೆ ವೇಳೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸರೋಜಾ ಸಂಜೀವ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿತು. ಸುದೀಪ್ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ಸುದೀಪ್ ನೆರವೇರಿಸಿದ್ದರು.
ತಾಯಿಯನ್ನು ಕಳೆದುಕೊಂಡು ಸುದೀಪ್ ಆಘಾತಗೊಂಡಿದ್ದರು. ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ವೇಳೆ ಬಿಕ್ಕಿ ಬಿಕ್ಕಿ ಅತ್ತರು. ಚಿತ್ರರಂಗದ ಹಲವರು ಸರೋಜಾ ಸಂಜೀವ್ ಅಂತಿಮ ದರ್ಶನ ಪಡೆದರು. ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ಅವರ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.
ತಾಯಿಯನ್ನು ಕಳೆದುಕೊಂಡು ಸುದೀಪ್ ಜೊತೆ ಸಹೋದರಿಯರ ಆಕ್ರಂದನ ಮುಗಿಲು ಮುಟ್ಟಿತ್ತು. ಅಜ್ಜಿಯ ಅಗಲಿಕೆಗೆ ಸುದೀಪ್ ಮಗಳು ಸಾನ್ವಿ ಕಣ್ಣೀರಾದರು. ಅಂತ್ಯಕ್ರಿಯೆ ಬಳಿಕ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅಜ್ಜಿಯ ಅಂತಿಮಯಾತ್ರೆ ಮತ್ತು ಅಂತ್ಯಕ್ರಿಯೆ ವೇಳೆ ನಡೆದ ಘಟನೆಗಳ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
ಇಂದು ನಮ್ಮ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ನಮ್ಮ ಮನೆ ಮುಂದೆ ಸೇರಿದ್ದ ಜನರು ಜೋರಾಗಿ ಕಿರುಚುತ್ತಿದ್ರು. ನಮ್ಮ ಮುಖಕ್ಕೆ ಕ್ಯಾಮೆರಾ ಇಡಲು ಕಷ್ಟಪಡ್ತಿದ್ರು. ಕೆಲವರು ಮನುಷ್ಯತ್ವ ಇಲ್ಲದವರಂತೆ ನಡೆದುಕೊಂಡಿದ್ದಾರೆ. ನನ್ನ ತಂದೆ ಅವರ ತಾಯಿಗಾಗಿ ಕಣ್ಣೀರು ಹಾಕ್ತಿದ್ರು. ಆದ್ರೆ ಜನರು ನಮ್ಮನ್ನು ತಳ್ಳಿ-ನೂಕ್ಕಿದ್ದಾರೆ ಎಂದು ಸಾನ್ವಿ ಬರೆದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.