ಸೀರೆ ಉಟ್ಟು ಸಾಕ್ಷಾತ್ ದೇವತೆಯಂತೆ ನಡೆದಾಡಿಕೊಂಡು ಬಂದ ಕಿಚ್ಚ ಸುದೀಪ್ ಮಗಳು ಸಾನ್ವಿ

 | 
Bh
ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಈಗ ಎಲ್ಲರಿಗೂ ಪರಿಚಿತೆ. ಗಾಯಕಿಯಾಗಿ ಗುರುತಿಸಿಕೊಂಡಿರುವ ಈ ಸ್ಟಾರ್ ಕಿಡ್ ಕನ್ನಡ ಚಿತ್ರರಂಗದ ಖ್ಯಾತ ನಟನ ಪುತ್ರಿ. ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ಚಂದದ ಫೋಟೋಸ್ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಸಾನ್ವಿ ಸುದೀಪ್ ಅವರು ಅಜ್ಜಿಯ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. 
ನಟಿ ಆಕರ್ಷಕವಾಗಿ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಸಾನ್ವಿ ಸುದೀಪ್ ಕ್ಯೂಟ್ ಆಗಿ ಕಾಣಿಸಿದ್ದಾರೆ.  ಅವರ ಫೊಟೋಗೆ ಫ್ಯಾನ್ಸ್ ರೆಡ್ ಹಾರ್ಟ್ ಎಮೋಜಿಗಳನ್ನು ಕಮೆಂಟ್ ಮಾಡಿ ಪ್ರೀತಿ ತೋರಿಸುತ್ತಿದ್ದಾರೆ. ನನ್ನ ಅಮ್ಮಮ್ಮ ಯಾವಾಗಲೂ ನನ್ನನ್ನು ಸೀರೆಯಲ್ಲಿ ನೋಡಬೇಕೆಂದು ಬಯಸುತ್ತಿದ್ದರು. ಇವತ್ತು ಅವರ ಸೀರೆ ಉಡಲು ಹೆಮ್ಮೆ ಎನಿಸುತ್ತದೆ ಎಂದು ಸಾನ್ವಿ ಸುದೀಪ್ ತಮ್ಮ ಪೋಸ್ಟ್​ಗೆ ಕ್ಯಾಪ್ಶನ್ ಬರೆದಿದ್ದಾರೆ. 
ಅಷ್ಟೇ ಅಲ್ಲದೆ ಎರಡು ರೆಡ್​ ಹಾರ್ಟ್ ಎಮೋಜಿಗಳನ್ನು ಕುಡಾ ಸೇರಿಸಿದ್ದಾರೆ. ನಿಮ್ ಅಜ್ಜಿ ಸರೋಜಮ್ಮ ರವರ ತರ ಇದ್ದೀರಾ ಮೇಡಂ ಎಂದಿದ್ದಾರೆ ನೆಟ್ಟಿಗರು. ಇನ್ನೂ ಕೆಲವರು ನಿಮ್ಮಜ್ಜಿಗೆ ಹೆಮ್ಮೆಯಾಗಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು ನಮ್ಮ ಚಿಕ್ಕ ಹುಡುಗಿ ಬೆಳೆದುಬಿಟ್ಟಳು ಎಂದಿದ್ದಾರೆ. ಮುದ್ದು ಬಂಗಾರ ನಮ್ಮ ಸಾನ್ವಿ ದೇವತೆ ನೀನು ನಮ್ಮ ಕಿಚ್ಚ ಬಾಸ್ ಮುದ್ದುನ ಮಗಳು ನೀನು ಶುಭವಾಗಲಿ ನಿನ್ನ ಎಲ್ಲ ಕೆಲಸಗಳಲ್ಲಿ ಸಾನ್ವಿ ಎಂದಿದ್ದಾರೆ.
ಕೆಲವರು ಕಮೆಂಟ್ ಮಾಡಿ ಸೇಮ್ ಸರೋಜಮ್ಮ ಎಂದಿದ್ದಾರೆ. ಈ ಸುಂದರಿ ಯಾರು ಎಂದಿದ್ದಾರೆ ಇನ್ನೊಬ್ಬರು. ಸೇಮ್ ಟು ಸೇಮ್ ನಿಮ್ಮಜ್ಜಿ ಸರೋಜಮ್ಮ ಅವರ ಹಾಗೆಯೇ ಇದ್ದೀರಿ ಮೇಡಂ ಎಂದಿದ್ದಾರೆ ಇನ್ನೊಬ್ಬರು. ಸೂಪರ್ ಕ್ಯೂಟ್ ಸಾನ್ವಿ ಎಂದು ಅಭಿಮಾನಿಗಳು ರೆಡ್ ಹಾರ್ಟ್ ಎಮೋಜಿಗಳನ್ನು ಹಾಕಿ ಕಮೆಂಟ್ ಮಾಡಿದ್ದಾರೆ. 
ಸಾನ್ವಿ ಅವರು ಶೇರ್ ಮಾಡಿದ ಫೋಟೋಗಳಿಗೆ 2 ಗಂಟೆಯಲ್ಲಿ 34 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸಾನ್ವಿ ಸುದೀಪ್ ಅವರು ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಈವರೆಗೂ 124 ಪೋಸ್ಟ್ ಹಾಕಿದ್ದಾರೆ. ಅವರು 437 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.