ಬಿಗ್ಬಾಸ್ ಗೆ ನಿಂದನೆ ಮಾಡಿದ ನಟಿ, ಕಿಚ್ಚ ಸುದೀಪ್ ಖಡಕ್ ಉತ್ತರ
Sep 28, 2024, 18:32 IST
|
ಸುದೀಪ್ ಅನ್ನಿಸಿದ್ದನ್ನು ನೇರವಾಗಿ ಹೇಳುವ ನಟ. ಹೌದು ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದ ಲಾಂಚ್ ಎಪಿಸೋಡ್ ವಿಶೇಷವಾಗಿ ನಡೆದಿತ್ತು. ಸ್ಪರ್ಧಿಗಳಿಗೆ ವೋಟ್ ಮಾಡುವ ಅಧಿಕಾರ ಲೈವ್ ಆಡಿಯೆನ್ಸ್‌ಗೆ ನೀಡಲಾಗಿತ್ತು. ಲೈವ್ ವೋಟಿಂಗ್‌ನಲ್ಲಿ 80%ಗೂ ಅಧಿಕ ವೋಟಿಂಗ್ ಪಡೆದ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿತ್ತು.
80% ರಿಂದ 40% ವೋಟಿಂಗ್ ಪಡೆದ ಸ್ಪರ್ಧಿಗಳನ್ನ ಅಸಮರ್ಥರು ಎಂದು ಬ್ರ್ಯಾಂಡ್ ಮಾಡಲಾಗಿತ್ತು. 40% ಗಿಂತ ಕಡಿಮೆ ವೋಟಿಂಗ್ ಪಡೆದ ಇಬ್ಬರು ಸ್ಪರ್ಧಿಗಳನ್ನು ಔಟ್ ಮಾಡಲಾಗಿತ್ತು. ಆ ಇಬ್ಬರೂ ಸ್ಪರ್ಧಿಗಳೇ ಸುರಸುಂದರ ಅವಿನಾಶ್ ಹಾಗೂ ಚಿತ್ರಾಲ್ ರಂಗಸ್ವಾಮಿ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ವೇದಿಕೆಯಿಂದಲೇ ಔಟ್ ಆದ ಸುರಸುಂದರ ಅವಿನಾಶ್ ಮತ್ತು ಚಿತ್ರಾಲ್ ರಂಗಸ್ವಾಮಿ ಮಾಧ್ಯಮಗಳ ಮುಂದೆ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು. ‘ಬಿಗ್ ಬಾಸ್’ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಇದೇ ವಿಚಾರದ ಬಗ್ಗೆ ಬಿಗ್ ಬಾಸ್ ಕನ್ನಡ 11 ಪ್ರೆಸ್‌ಮೀಟ್ ವೇಳೆ ಪ್ರಶ್ನೆ ತೂರಿಬಂತು. ಅದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ ಕಳೆದ ಸೀಸನ್‌ನಲ್ಲಿ ಸ್ಟೇಜ್‌ನಿಂದಲೇ ಸ್ಪರ್ಧಿಗಳನ್ನ ವಾಪಸ್ ಕಳುಹಿಸಿದ್ರಿ. ಆ ಸ್ಪರ್ಧಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಬಾರಿಯೂ ಸ್ಟೇಜ್‌ನಲ್ಲಿ ಎಲಿಮಿನೇಷನ್ ಇದ್ಯಾ? ಸೆಲೆಕ್ಟ್ ಆಗಿರುವ ಎಲ್ಲರೂ ‘ಬಿಗ್ ಬಾಸ್’ ಮನೆಯೊಳಗೆ ಹೋಗ್ತಾರಾ? ಎಂಬ ಪ್ರಶ್ನೆ ಪ್ರೆಸ್‌ಮೀಟ್ ವೇಳೆ ತೂರಿಬಂತು.
ಅದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್, ಕಳೆದ ವರ್ಷ.. ಯಾರಿಗಾದರೂ ನೋವಾಗಿದ್ದರೆ, ಬೇಜಾರಾಗಿದ್ದರೆ.. ಖಂಡಿತವಾಗಿಯೂ ಅದು ಚಾನೆಲ್‌ನ ಉದ್ದೇಶ ಅಲ್ಲ. ಅವರನ್ನ ನೋಯಿಸುವ ಉದ್ದೇಶ ಚಾನೆಲ್‌ಗೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.ಈಗ ಒಂದು ಸಿನಿಮಾ ರಿಲೀಸ್ ಆದಾಗ.. ಅದು ಚೆನ್ನಾಗಿ ಹೋಗಿಲ್ಲ ಅಂದ್ರೆ ನನಗೆ ವೀಕ್ಷಕರು ಅವಮಾನ ಮಾಡಿದರು, ವಿಮರ್ಶೆ ಸರಿಯಾಗಿ ಬರೆಯಲಿಲ್ಲ ಅನ್ನೋಕ್ಕಾಗುತ್ತಾ? .
ಅದರಲ್ಲೂ ಬಿಗ್ ಬಾಸ್‌ಗೆ ಬಂದ್ಮೇಲೆ ಅದರದ್ದೇ ಆದ ಕೆಲ ರೂಲ್ಸ್ ಇರುತ್ತವೆ. ಅದು ಗೊತ್ತಿದ್ದೂ ಬಂದ ಮೇಲೆ.. ಗೊತ್ತಿದ್ದೂ ವೇದಿಕೆ ಮೇಲೆ ಬಂದ್ಮೇಲೆ, ಸಹಿಸಿಕೊಳ್ಳೋಕೆ ಆಗಲಿಲ್ಲ ಅಂದ್ರೆ ಹೇಗೆ? ಅದನ್ನ ಅವಮಾನವಾಗಿ ತೆಗೆದುಕೊಳ್ಳೋದು, ಬಿಡೋದು ವೈಯಕ್ತಿಕ. ಆದರೆ ಸಂಸ್ಥೆ ಮೇಲೆ ಆಪಾದನೆ ಹೊರೆಸೋದು ಸರಿಯಲ್ಲ. ಯಾಕಂದ್ರೆ ರೂಲ್ಸ್ ಹೇಳದೆ ಯಾರೂ ಕರ್ಕೊಂಡು ಬಂದಿಲ್ಲ. ಫಾರ್ಮ್ಯಾಟ್ ಗೊತ್ತಿದ್ದೂ ಪಾಲಿಸ್ತೀವಿ ಅಂತಲೇ ಬಂದಿರುತ್ತಾರೆ. ಆಮೇಲೆ ಮಾತಾಡಿದರೆ ಏನೂ ಮಾಡೋಕೆ ಆಗಲ್ಲ ಎಂದಿದ್ದಾರೆ ಕಿಚ್ಚ ಸುದೀಪ್.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.