ಬೇಡಿದಂತೆ ಭಯಕೆ ಈಡೇರಿಸಿದ ಕೊರಗಜ್ಜ, ಆದರೆ ಖುಷಿಯಲ್ಲಿ ಭಕ್ತ ಕೊಟ್ಟ ಉಡುಗೊರಗೆ ಏನು ಗೊ.ತ್ತಾ

 | 
Hs

ತುಳು ನಾಡಿನಲ್ಲಿ ಪ್ರತಿ ಮನೆಯಲ್ಲಿಯೂ ಕೊರಗಜ್ಜನ ಆರಾಧಿಸುತ್ತಾರೆ. ಹೌದು ತುಳುನಾಡಿನ ಜನರು ಹೆಚ್ಚು ನಂಬಿಕೆ ಇಟ್ಟು ಪೂಜಿಸುವ ದೈವ ಕೊರಗಜ್ಜ. ಯಾವುದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯಲು, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ಸಿಗಲು, ಆರೋಗ್ಯ ಸುಧಾರಿಸಲು ಇನ್ನು ಅನೇಕ ಬೇಡಿಕೆಯೊಂದಿಗೆ ತುಳುನಾಡಿನ ಜನರು ಕೊರಗಜ್ಜನನ್ನು ಪ್ರಾರ್ಥಿಸುತ್ತಾರೆ.

ಅಷ್ಟಕ್ಕೂ ಕೊರಗ ತನಿಯು ಐತಿಹಾಸಿಕ ವ್ಯಕ್ತಿಯೇ ಹೊರತು ಪೌರಾಣಿಕ ಸೃಷ್ಟಿಯಲ್ಲ ಎನ್ನುವ ನಂಬಿಕೆ ಇದೆ. ಹೀಗಾಗಿ ಕೊರಗಜ್ಜನ ಬಳಿ ಕೇಳಿಕೊಂಡ ಬಯಕೆಗಳು ಸಂಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಭಕ್ತರು ಕೊರಗಜ್ಜನಿಗೆ ಚಕ್ಕುಲಿ, ಬೀಡಾ, ವೀಳ್ಯದೆಲೆ, ಮದ್ಯದ ಬಾಟಲಿಗಳನ್ನು ಅರ್ಪಿಸುತ್ತಾರೆ. 

ಇದು ಇಲ್ಲಿಯ ಸಂಪ್ರದಾಯ. ಇದೇ ರೀತಿ ತನ್ನ ಬಯಕೆ ಈಡೇರಿಸಿದ ಕೊರಗಜ್ಜನಿಗೆ ಭಕ್ತರೊಬ್ಬರು ಸಾವಿರಕ್ಕೂ ಹೆಚ್ಚು ಮದ್ಯದ ಪ್ಯಾಕೆಟ್‌ಗಳನ್ನು ಅರ್ಪಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬು ಸ್ವಾಮಿ ಹಾಗೂ ಸ್ವಾಮಿ ಕೊರಗಜ್ಜ ದೇವಸ್ಥಾನ ಕಟಪಾಡಿಯಲ್ಲಿದ್ದು, ಭಕ್ತರ ಆರಾಧ್ಯ ಸ್ಥಳವಾಗಿದೆ. ದಿನನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. 

ಜೊತೆಗೆ ತಮ್ಮ ಬೇಡಿಕೆ ಈಡೇರಿದ್ದರೆ ಹರಕೆ ತೀರಿಸುತ್ತಾರೆ. ಇಲ್ಲಿ ನೂರಾರು ಭಕ್ತರು ಚಕ್ಕುಲಿ, ಬೀಡಾ, ವೀಳ್ಯದೆಲೆ, ಮದ್ಯವನ್ನು ಕೊರಗಜ್ಜನಿಗೆ ಪ್ರತಿನಿತ್ಯ ಅರ್ಪಿಸುತ್ತಾರೆ. ಬಳಿಕ ಸಮರ್ಪಿಸಲಾದ ಮದ್ಯವನ್ನು ಪ್ರಸಾದದ ರೂಪದಲ್ಲಿ ಮದ್ಯ ಸೇವಿಸುವ ಭಕ್ತರಿಗೆ ನೀಡಿ ಕೊರಗಜ್ಜನ ಕೃಪೆಗೆ ಪಾತ್ರರಾಗುತ್ತಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮದ ದಂಪತಿಯು ಮದುವೆಯಾಗಿ ಹಲವು ವರ್ಷಗಳಾಗಿದ್ದು, ಸಂತಾನ ಪ್ರಾಪ್ತಿಯಾಗಿಲ್ಲ ಎಂದು ನೊಂದಿದ್ದರು. ಈ ದಂಪತಿ ಸಂಬಂಧಿಕರೊಬ್ಬರ ಸಲಹೆ ಮೇರೆಗೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜ ದೈವಸ್ಥಾನಕ್ಕೆ ಬಂದು ಕೊರಗಜ್ಜ ಗುಡಿಯ ಮುಂದೆ ಸಂತಾನ ಪ್ರಾಪ್ತಿಯಾದರೆ ಒಂದು ಸಾವಿರದ ಎರಡು ಮದ್ಯದ ಬಾಟಲಿಗಳ ಹರಕೆ ರೂಪದಲ್ಲಿ ನೀಡುತ್ತೇವೆ ಎಂದು ಪ್ರಾರ್ಥನೆ  ಮಾಡಿಕೊಂಡು ಹೋಗಿದ್ದರಂತೆ.

ಹರಕೆ ಹೊತ್ತ ಕೆಲವೇ ಸಮಯದಲ್ಲಿ ದಂಪತಿಗೆ ಸಂತಾನ ಪ್ರಾಪ್ತಿಯಾಗಿದೆ. ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜನ ಮಹಿಮೆಯಿಂದ ತಮ್ಮ ಪ್ರಾರ್ಥನೆ ಫಲಿಸಿದೆ ಎಂದು ತಾನು ಹರಕೆ ಹೊತ್ತಂತೆ, ಒಂದು ಸಾವಿರದ ಎರಡು ಮದ್ಯದ ಬಾಟಲಿಗಳನ್ನು ತಂದು ಕೊರಗಜ್ಜನ ಸನ್ನಿಧಾನಕ್ಕೆ ದಂಪತಿ ಅರ್ಪಿಸಿದ್ದಾರೆ. ಹರಕೆ ಹೊತ್ತ ಕ್ಷಣ ಮಾತ್ರದಲ್ಲಿ ಸ್ವಾಮಿ ಕೊರಗಜ್ಜ ಈಡೇರಿಸುತ್ತಾರೆ ಎನ್ನುವ ಭಕ್ತರ ನಂಬಿಕೆ ಇನ್ನಷ್ಟು ಹೆಚ್ಚಾಗಿದೆ. ಭಕ್ತರ ಬೇಡಿಕೆಗಳನ್ನು ಈಡೇರಿಸುವ ಕೊರಗಜ್ಜನ ಮಹಿಮೆಯೇ ಅಪಾರ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.