ಮಾಲಾಶ್ರೀ ಜೀವನದ ಕೊನೆಯ ಆಸೆ ಈಡೇರಿಸಿದ ಕೊರಗಜ್ಜ, ದಿಢೀರನೆ ಅಜ್ಜನನ್ನು ನೋಡಲು ಬಂದ ಕುಟುಂಬ

 | 
Bvv

ನಟಿ ಮಾಲಾಶ್ರೀ ಬದುಕಿನಲ್ಲೂ ಕರಾವಳಿಯ ಕಾರ್ಣಿಕ ದೈವ ಕೊರಗಜ್ಜ ಪವಾಡ ಮೆರೆದಿದ್ದು, ಬೇಡಿಕೆ ಈಡೇರಿಸಿದ ಕೊರಗಜ್ಜನ ಸನ್ನಿಧಾನಕ್ಕೆ ಆಗಮಿಸಿ ಅವರು ಹರಕೆ ತೀರಿಸಿದ್ದಾರೆ. ನಟಿ ಮಾಲಾಶ್ರೀ ಬದುಕಿನಲ್ಲೂ ಕರಾವಳಿಯ ಕಾರ್ಣಿಕ ದೈವ ಕೊರಗಜ್ಜ ಪವಾಡ ಮೆರೆದಿದ್ದು, ಬೇಡಿಕೆ ಈಡೇರಿಸಿದ ಕೊರಗಜ್ಜನ ಸನ್ನಿಧಾನಕ್ಕೆ ಆಗಮಿಸಿ ಅವರು ಹರಕೆ ತೀರಿಸಿದ್ದಾರೆ. ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ನಟಿ ಮಾಲಾಶ್ರೀ ಹಾಗೂ ಅವರ ಪುತ್ರಿ ಅನನ್ಯಾ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. 

ದೈವಬಲದಿಂದ ಅಂದುಕೊಂಡ ಎಲ್ಲಾ ಕಾರ್ಯ ನಡೆದಿದೆ. ಕ್ಷೇತ್ರದ ಶಕ್ತಿಯನ್ನು ಹೇಳತೀರದು ಎಂದು ಸಂತಸ ವ್ಯಕ್ತಪಡಿಸಿದರು. ಮೂರು ತಿಂಗಳ ಹಿಂದೆಯಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆ, ಎಲ್ಲವೂ ಅಚಾತುರ್ಯವೆಂಬಂತೆ ನಡೆಯಿತು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ ಎಂದು ಮಾಲಾಶ್ರೀ ತಿಳಿಸಿದ್ದಾರೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ ಎಂದರು. ಈ ಕ್ಷೇತ್ರಕ್ಕೆ ಮುಂದೆಯೂ ಬರುತ್ತಿರುತ್ತೇನೆ ಎಂದು ಮಾಲಾಶ್ರೀ ಹೇಳಿದರು. 

ಈ ವೇಳೆ ನಟಿ ಮಾಲಾಶ್ರೀ ಹಾಗೂ ಪುತ್ರಿಯನ್ನು ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟಿಗಳು ಸನ್ಮಾನಿಸಿದರು. ಇನ್ನು ನಟಿ ಮಾಲಾಶ್ರೀ ಹಾಗೆ ತಾಯಿ, ಅಕ್ಕ, ಮಗ ಆರ್ಯನ್ ಹಾಗೂ ಮಗಳು ಆರಾಧನಾ ಅವರೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದರು.ಮುಖ್ಯಪ್ರಾಣರ ದರ್ಶನ ಪಡೆದರು. ಕೃಷ್ಣ ಮಠಕ್ಕೆ ಆಗಮಿಸಿ ಕೃಷ್ಣ,ಮುಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಶ್ರೀಗಳಿಂದ ಹಾಗೂ ಕಾಣಿಯೂರು ಮಠಾಧೀಶರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಮಾಲಾಶ್ರೀ ಒಬ್ಬರೇ ಅಲ್ಲ ಈ ಹಿಂದೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪತ್ನಿ ಗೀತಾ ಹಾಗೂ ಕುಟುಂಬ ಸಮೇತ ಮಂಗಳೂರಿನ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ್ದರು. ಹಾಗೇ ರಕ್ಷಿತಾ ಪ್ರೇಮ್ ಬೇಡಿಕೆ ಈಡೇರಿದ್ದಕ್ಕೆ ಬಂದು ಹರಕೆ ತೀರಿಸಿ ಕೊರಗಜ್ಜನ ಮಹಿಮೆಯನ್ನು ಹೊಗಳಿಕೊಂಡಾಡಿದ್ದರು. ಕೆಲವು ತಿಂಗಳ ಹಿಂದಷ್ಟೇ ನಟಿ ಪ್ರೇಮ ಇದೇ ಸ್ಥಳಕ್ಕೆ ಭೇಟಿ ನೀಡಿ ಕೋರಿಕೆ ಸಲ್ಲಿಸಿದ್ದರು.

ಕೊರಗಜ್ಜನ ಮಹಿಮೆಯನ್ನು ಜಗತ್ತಿಗೆ ತಿಳಿಸಲೆಂದೇ ಸ್ಯಾಂಡಲ್‌ವುಡ್‌ನ ನಿರ್ದೇಶಕ ಸುಧೀರ್ ಅತ್ತಾವರ್ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.