ವಿದೇಶಿ ಇಂಗ್ಲಿಷರ ಭಯಕೆ ಈಡೇರಿಸಿದ ಕೊರಗಜ್ಜ, ಬಹಳ ಭಕ್ತಿಯಿಂದ ಅಜ್ಜನ ಜರಕೆ ಈ.ಡೇರಿಸಿದ ಕುಟುಂಬ

 | 
ರರಹ

ತನ್ನನ್ನು ಭಕ್ತಿಯಿಂದ ಪ್ರಾರ್ಥಿಸಿದವರಿಗೆ ಕ್ಷಿಪ್ರ ಫಲಿತಾಂಶ ಪರಿಹಾರವನ್ನು ಒದಗಿಸುವ ಮೂಲಕ ‌ಕಾರಣಿಕ ಶಕ್ತಿಯನ್ನು ‌ಮೆರೆಯುತ್ತಿರುವ ಕೊರಗಜ್ಜನ ಪವಾಡಕ್ಕೆ ಬೇಕಾದಷ್ಟು ನಿದರ್ಶನಗಳು ‌ಸಿಕ್ಕಿವೆ. ಇದೀಗ ಮಗನ ಅನಾರೋಗ್ಯದ ಹಿನ್ನೆಲೆ ಕೊರಗಜ್ಜನಿಗೆ ಹರಕೆ ಹೇಳಿದ ವಿದೇಶಿ ಕುಟುಂಬದ ಸಂಕಷ್ಟವನ್ನು ಪರಿಹರಿಸಿ ಕೊರಗಜ್ಜ ಪವಾಡ ಮೆರೆದಿದ್ದಾರೆ. ಇದರಿಂದ ಸಂತಸಗೊಂಡ ಉಕ್ರೇನ್ ದಂಪತಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿ ಹರಕೆಯನ್ನೂ ತೀರಿಸಿದ್ದಾರೆ.

ಉಕ್ರೇನ್ ದಂಪತಿಯ ಮಗ ಮ್ಯಾಕ್ಸಿಂ 6 ವರ್ಷದ ಬಾಲಕ. ಈ ಮಗು ಹೈ ಶುಗರ್ ನಿಂದ ಬಳಲುತ್ತಿದ್ದು ಹತ್ತಾರು ಕಡೆ ಚಿಕಿತ್ಸೆ ಮಾಡಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಮಗನ ಅನಾರೋಗ್ಯದ ಹಿನ್ನೆಲೆ 3 ತಿಂಗಳ ಹಿಂದೆ ಉಕ್ರೇನ್ ನಿಂದ ಭಾರತ ಪ್ರವಾಸ ಕೈಗೊಂಡ ಕುಟುಂಬವು ನಾಡಿ ನೋಡಿ ಔಷಧಿ ಕೊಡುವ ಮಂಗಳೂರಿನ ಭಕ್ತಿ ಭೂಷಣ್ ದಾಸ್ ಅವರನ್ನು ಭೇಟಿ ಮಾಡಿತ್ತು.

ಮಂಗಳೂರು ಹೊರವಲಯದ ಬಂಟ್ವಾಳದ ಪುದು ಗ್ರಾಮದ ಬ್ರಹ್ಮಗಿರಿ ಗೋವಿನತೋಟ ಎಂಬಲ್ಲಿರುವ ಶ್ರೀ ರಾಧಾ ಸುರಭಿ ಗೋಶಾಲೆಯಲ್ಲಿ ಮ್ಯಾಕ್ಸಿಂಗೆ ಚಿಕಿತ್ಸೆ ನೀಡಲಾಗುತ್ತಿತ್ತು. ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ನೀಡಿದ್ದರು. ಈ ವೇಳೆ ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ದಂಪತಿ ಪ್ರಾರ್ಥಿಸಿದ್ದರು.

 ಜೊತೆಗೆ ಸಮಸ್ಯೆಗೆ ಪರಿಹಾರ ದೊರೆತರೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಈ ವೇಳೆ ಮಗನ ಅನಾರೋಗ್ಯ ದೂರ ಮಾಡುವ ಅಭಯ ನೀಡಿದ್ದ ಕೊರಗಜ್ಜ ಪವಾಡ ತೋರಿದ್ದಾರೆ‌. ಕೆಲವೇ ದಿನಗಳಲ್ಲಿ ಮ್ಯಾಕ್ಸಿಂಗೆ ಕಾಣಿಸಿಕೊಂಡಿದ್ದ ಹೈಶುಗರ್ ಕಡಿಮೆಯಾಗಿದೆ. ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆಯಲ್ಲಿ ಕುಟುಂಬ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. 

ಸದ್ಯ ಉಕ್ರೇನ್ ಗೆ ಮರಳಿರುವ ಈ ಫ್ಯಾಮಿಲಿ ಕೆಲವು ತಿಂಗಳುಗಳ ಬಳಿಕ ಮತ್ತೆ ಭಾರತಕ್ಕೆ ಬರಲಿದ್ದಾರಂತೆ.ಈ ನಿದರ್ಶನದ ಮೂಲಕ ಕೊರಗಜ್ಜನ ಪವಾಡ ಮತ್ತೊಮ್ಮೆ ಜಗಜ್ಜಾಹೀರಾಗಿದ್ದು, ಭಕ್ತರು ಇದನ್ನು ನೋಡಿ ಭಾವಪರವಶರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.