ಕುಟ್ಟಿ ರಾಧಿಕಾ ಸ್ಯಾಂಡಲ್‌ವುಡ್‌ನ ಶ್ರೀಮಂತ ನಟಿ; 34 ಸಿನಿಮಾಗಳ ನಾಯಕಿ ಎಷ್ಟು ಕೋಟಿ ಒಡತಿ?

 | 
Hu

ಸ್ಯಾಂಡಲ್‌ವುಡ್‌ ಬ್ಯೂಟಿಫುಲ್ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಿಗೆ ಸಿನಿಮಾ ಮತ್ತು ವಿವಾದವಾಗಿರುತ್ತದೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ರಾಧಿಕಾ ಎಂಟ್ರಿ ಕೊಟ್ಟಿದ್ದು 2002ರಲ್ಲಿ. ನಿನಗಾಗಿ ಚಿತ್ರದಿಂದ ಎಂಟ್ರಿ ಕೊಟ್ಟು ಚಿನ್ನಾರಿ ಮುತ್ತ ಚಿತ್ರದ ಮೂಲಕ ಹಿಟ್ ನಾಯಕಿಯಾಗಿಬಿಟ್ಟರು.

ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳುವಷ್ಟು ಜನಪ್ರಿಯರಾಗಿದ್ದರು. ಸ್ಟಾರ್ ನಟರೊಂದಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ, ಮದುವೆಯ ಒಂದು ನಿರ್ಧಾರ ಇವರನ್ನು ಸಿನಿಮಾರಂಗದಿಂದ ದೂರ ಉಳಿಸಿತ್ತು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಜೊತೆಗಿನ ರಹಸ್ಯ ಮದುವೆ ನಟಿಯ ವೃತ್ತಿ ಬದುಕಿಗೆ ಹಿನ್ನೆಡೆಯಾಗಿತ್ತು.

2010ರಲ್ಲಿ ರಾಧಿಕಾ ಕುಮಾರಸ್ವಾಮಿ ತನ್ನ ವಿಷಯವನ್ನು ಬಹಿರಂಗ ಪಡಿಸಿದ್ದರು. 2006ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಯನ್ನು ಮದುವೆ ಆಗಿದ್ದಾಗಿ, ರಾಧಿಕಾ ಕುಮಾರಸ್ವಾಮಿ 2010ರಲ್ಲಿ ಬಹಿರಂಗವಾಗಿ ಹೇಳಿದ್ದರು. ಇವರಿಗೆ ಶಮಿಕಾ ಕುಮಾರಸ್ವಾಮಿ ಎಂಬ ಮಗಳಿದ್ದಾಳೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕೂಡ ಎರಡನೇ ಮದುವೆ ಆಗಿದ್ದನ್ನು ಓಪನ್ ಆಗಿ ಒಪ್ಪಿಕೊಂಡಿದ್ದರು. 

ರಾಧಿಕಾ ಕುಮಾರಸ್ವಾಮಿ ಮದುವೆ ಆದಾಗ ಅವರಿಗೆ ಕೇವಲ 27 ವರ್ಷ ಆಗಿತ್ತು. ಚಿತ್ರರಂಗದಲ್ಲಿ ಇನ್ನೂ ಒಂದಿಷ್ಟು ವರ್ಷಗಳ ಕಾಲ ನಟಿಸುವುದಕ್ಕೆ ಅವಕಾಶಗಳು ಇದ್ದವು. ಅಷ್ಟರಲ್ಲಿಯೇ ರಾಧಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯ ಎರಡನೇ ಪತ್ನಿಯಾಗಿದ್ದರು.ಸದ್ಯ ರಾಧಿಕಾ ಕುಮಾರಸ್ವಾಮಿ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿದ್ದಾರೆ. 

ಆಯ್ಕೆ ಮಾಡಿಕೊಂಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಇನ್ನೂ ಮೆರೆಯಬೇಕಾಗಿದ್ದ ರಾಧಿಕಾ ಇಂದು ಕನ್ನಡ ಚಿತ್ರರಂಗದ ಅತೀ ಶ್ರೀಮಂತ ನಟಿ. ಸಿನಿಮಾದ ನಟನೆ, ನಿರ್ಮಾಣದ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿರುವ ನಟಿಯ ಒಟ್ಟು ಆಸ್ತಿ 124 ಕೋಟಿ ರೂಪಾಯಿ. ಆಗ ಎಚ್‌ಡಿ ಕುಮಾರಸ್ವಾಮಿ ಆಸ್ತಿ 181 ಕೋಟಿ ರೂಪಾಯಿ ಎಂದು ಡಿಎನ್‌ಎ ವೆಬ್‌ಸೈಟ್ ವರದಿ ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.