ಮದುವೆಯಾಗಿ ಗಭಿ೯ಣಿ ಆದ ಲಕ್ಷ್ಮಿ ಬಾರಮ್ಮ ನಟಿ ರಶ್ಮಿ ಪ್ರಭಾಕರ್, ಮನೆಯಲ್ಲಿ ನಡೆಯಿತು ಸರಳ ಸೀಮಂತ
| Jul 28, 2025, 14:57 IST
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಾಯಕಿ ಲಚ್ಚಿ ಪಾತ್ರದಲ್ಲಿ ಕಾಣಿಸಿಕೊಂಡವರು ನಟಿ ರಶ್ಮಿ ಪ್ರಭಾಕರ್. ‘ಶುಭ ವಿವಾಹ’, ‘ಮನಸ್ಸೆಲ್ಲಾ ನೀನೇ’ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಶ್ಮಿ ಪ್ರಭಾಕರ್ ಇದೀಗ ತುಂಬು ಗರ್ಭಿಣಿ.
ನಟಿ ರಶ್ಮಿ ಪ್ರಭಾಕರ್ - ನಿಖಿಲ್ ಭಾರ್ಗವ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಏಪ್ರಿಲ್ 25, 2022 ರಂದು ರಶ್ಮಿ ಪ್ರಭಾಕರ್ - ನಿಖಿಲ್ ಭಾರ್ಗವ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮೂರು ವರ್ಷಗಳ ಬಳಿಕ ದಂಪತಿ ಪುಟಾಣಿ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ರಶ್ಮಿ ಪ್ರಭಾಕರ್ ಅವರ ಸೀಮಂತ ಶಾಸ್ತ್ರ ಮನೆಯಲ್ಲಿ ಸರಳವಾಗಿ ನಡೆಯಿತು.