ಸಿನಿಮಾ ಚಾನ್ಸ್ ಕೇಳಿಕೊಂಡು ಡೈರೆಕ್ಟರ್ ಬಳಿ ಹೋದಾಗ ಆದ ಕಹಿ ಘಟನೆಯನ್ನು ಹೊರಹಾಕಿದ ಲಕ್ಷ್ಮೀ ಬಾರಮ್ಮ ನಟಿ

 | 
Jjj

      ಖ್ಯಾತ ಕಿರುತೆರೆ, ಹಿರಿತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಅವರು 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ, ಖಳನಟಿ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಬಳಿಕ ಸಿನಿಮಾಗಳಲ್ಲಿಯೂ ಮಿಂಚಿರುವ ಅವರು ತಮ್ಮ ಕಲಾಪ್ರತಿಭೆಯಿಂದ ಕನ್ನಡಿಗರ ಮನೆಮಾತಾಗಿದ್ದಾರೆ. 

     ಜನಪ್ರಿಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಲಕ್ಷ್ಮಿ ಅವರು ಸೀರಿಯಲ್‌ಗೆ ಬರುವ ಮುನ್ನವೇ ಸಿನಿಮಾರಂಗಕ್ಕೆ ಹೋಗಬೇಕು ಎನ್ನುವ ಕನಸು ಕಂಡಿದ್ದವರು. 
     ಆದರೆ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕಾಗ ಆದ ಕಹಿ ಘಟನೆಯೊಂದನ್ನು ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.ನಾನು ಸೀರಿಯಲ್‌ಗೆ ಬರುವ ಮುನ್ನ ಸಿನಿಮಾಗಳಿಗೆ ಪ್ರಯತ್ನಪಟ್ಟಿದ್ದೆ. ಆಗ ನನಗೆ ಕೆಲ ಕೆಟ್ಟ ಅನುಭವಗಳಾಯಿತು. 
     ಹೆಣ್ಣುಮಕ್ಕಳು ಅಂದ್ರೆ ಅಲ್ಲಿ ಕಮಿಟ್‌ಮೆಂಟ್‌ ಇರಬೇಕು ಅಂತ ನೇರವಾಗಿ ಹೇಳಿದ್ರು. ಡೈರೆಕ್ಟರ್‌ ಜೊತೆ, ಪ್ರೊಡ್ಯೂಸರ್‌, ಕ್ಯಾಮರಾಮನ್‌ ಜೊತೆ ಅಂತೆಲ್ಲ ಡೈರೆಕ್ಟಾಗಿ ಹೇಳಿದ್ರು. ಆಗ ನಾನಿನ್ನೂ ಸಣ್ಣವಳು. ಆಗ ನಾನು ಅದೆಲ್ಲ ಆಗಲ್ಲ ಅಂತ ಸಿನಿಮಾ ಆಸೆಯನ್ನೇ ಬಿಟ್ಟೆ. ಆ ಮೇಲೆ ಸೀರಿಯಲ್‌ಗಳಿಗೆ ಬಂದಾಗ ತುಂಬಾ ಇಷ್ಟ ಆಯ್ತು.ಅದೊಂದು ಫ್ಯಾಮಿಲಿ ತರ ಅನಿಸಿತು. ಹಾಗಾಗಿ ಅಲ್ಲೇ ಮುಂದುವರಿದೆ' ಎಂದಿದ್ದಾರೆ.