ಲಕ್ಷ್ಮೀ ಬಾರಮ್ಮ ಕೀತಿ೯ ಹಿನ್ನೆಲೆ, ಇವರ ಗಂಡ ಯಾರು ಗೊತ್ತಾ

 | 
Gu
 ಕಿರುತೆರೆಯ ಸೂಪರ್ ಕ್ವೀನ್ಸ್​ಗಳಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ತನ್ವಿ ರಾವ್ ಕೂಡ ಒಬ್ಬರು. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇವರು ನಟಿಸುತ್ತಿರೋ ಕೀರ್ತಿ ಪಾತ್ರಕ್ಕೆ ಈಗಾಗಲೇ ನೆಟ್ಟಿಗರು ಫಿದಾ ಆಗಿದ್ದಾರೆ. ಕೀರ್ತಿ ಪಾತ್ರದ ಸ್ಟೈಲ್ ಆ್ಯಂಡ್ ಗ್ಲಾಮರಸ್​ ಲುಕ್​ಗೆ ಕರುನಾಡೇ ಫಿದಾ ಆಗಿದೆ.
ರೀಲ್​ ಹಾಗೂ​ ರಿಯಲ್ ಲೈಫಲ್ಲೂ ತನ್ವಿ ರಾವ್ ಅವರು ಸಿಕ್ಕಾಪಟ್ಟೆ ಫ್ಯಾಷನಿಸ್ಟ್. ಆಗಾಗ ಗ್ಲಾಮಸರ್​ ಫೋಟೋಶೂಟ್​ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಌಕ್ಟಿವ್ ಆಗಿರುವ ತನ್ವಿ ರಾವ್ ಅವರು ಆಗಾಗ ಫೋಟೋಶೂಟ್​ ಹಾಗೂ ಡ್ಯಾನ್ಸ್​ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾ ಇರುತ್ತಾರೆ. ಇದೀಗ ತಮ್ಮ ಅದ್ಭುತ ಅಭಿನಯದ ಮೂಲಕ ವೀಕ್ಷಕರ ಗಮನ ಸೆಳೆದಿದ್ದ ನಟಿ ತನ್ವಿ ರಾವ್ ಇದೀಗ ಸತತವಾಗಿ ಎರಡನೇ ಬಾರಿಗೆ ಅವಾರ್ಡ್​ ಅನ್ನು ಗಿಟ್ಟಿಸಿಕೊಂಡಿದ್ದಾರೆ.
ಹೌದು, ಕಲರ್ಸ್ ಕನ್ನಡದಲ್ಲಿ ಅನುಬಂಧ ಕಾರ್ಯಕ್ರಮ ನಡೆಯುತ್ತಿದೆ. ಕಳೆದ 10 ವರ್ಷಗಳಿಂದ ನಡೆಯುತ್ತಾ ಬಂದಿರೋ ಅನುಬಂಧ ಅವಾರ್ಡ್ಸ್​ 2024, 11ನೇ ವರ್ಷಕ್ಕೆ ಕಾಲಿಟ್ಟಿದೆ. ಇದೇ ಅನುಬಂಧ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಸ್ಟೈಲ್​​ ಐಕಾನ್​ ಅವಾರ್ಡ್ಸ್​ ಅನ್ನು ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಳೆದ ಬಾರಿಯ ಅನುಬಂಧ ಅವಾರ್ಡ್ಸ್​ನಲ್ಲೂ ಜನ ಮೆಚ್ಚಿದ ಸ್ಟೈಲ್​​ ಐಕಾನ್​ ತಮ್ಮದಾಗಿಸಿಕೊಂಡಿದ್ದರು. ಇದೀಗ ಎರಡನೇ ಬಾರಿಯೂ ಕೂಡ ಜನ ಮೆಚ್ಚಿದ ಸ್ಟೈಲ್​​ ಐಕಾನ್ ತಮ್ಮದಾಗಿಸಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.
ಇನ್ನು, ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ಕೀರ್ತಿ ಪಾತ್ರದಲ್ಲಿ ನಟಿ ತನ್ವಿ ರಾವ್​ ಅವರು ಅಭಿನಯಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಎಪಿಸೋಡ್​ಗಳಲ್ಲಿ ನಟಿ ತನ್ವಿ ರಾವ್​ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಕಾವೇರಿ ಬಾಯಿಂದ ಸತ್ಯ ಹೊರ ತರಲು ಕೀರ್ತಿ ಹರಸಾಹಸ ಪಟ್ಟಿದ್ದಳು. ಆದರೆ ಕಾವೇರಿ ಕೀರ್ತಿಯನ್ನು ಬೆಟ್ಟದ ಮೇಲಿಂದ ತಳ್ಳಿ ಸಾಯಿಸಿದ್ದಾಳೆ. ಆದರೆ ಇದರ ಮಧ್ಯೆ ಲಕ್ಷ್ಮೀ ಸಖತ್ ಪ್ಲಾನ್​ ಮಾಡಿ ಕೀರ್ತಿ ಆತ್ಮ ಮೈಮೇಲೆ ಬಂದಿದೆ ಅಂತ ನಾಟಕವಾಡುತ್ತಿದ್ದಾಳೆ. ಈ ನಾಟಕ ಮಾಡಲು ಮುಖ್ಯ ಕಾರಣವೇ ಕಾವೇರಿ ಬಾಯಿಂದ ಸತ್ಯ ಆಚೆ ತರುವ ಸಲುವಾಗಿ. ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಅಂತ ಕಾದು ನೋಡಬೇಕಿದೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.