ಲಕ್ಷ್ಮಿನಿವಾಸ್ ಚಂದನ್ ಅವರ ಗಂಡನ ಕೋಟಿ ಬೆಲೆಯ ಅರಮನೆಗೆ ಮಾರುಹೋದ ಕನ್ನಡಿಗರು
Jan 30, 2025, 17:42 IST
|

2024ರಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದು ಚಂದನಾ ಹಾಗೂ ಪ್ರತ್ಯಕ್ಷ್. ಅದ್ಧೂರಿಯಾಗಿ ಈ ಇಬ್ಬರ ಮದುವೆ ನೆರವೇರಿದೆ. ತುಂಬು ಕಲಾವಿದರ ಕುಟುಂಬದ ಮನೆಗೆ ಸೊಸೆಯಾಗಿ ಚಂದನಾ ಹೋಗಿದ್ದಾರೆ. ಆಕೆಯ ನಟನಾ ಭವಿಷ್ಯಕ್ಕೆ ತುಂಬಾನೇ ಬೆಂಬಲವಿದೆ. ಮದುವೆಯಾದ ಕೆಲವೇ ದಿನಗಳಲ್ಲಿ 'ಲಕ್ಷ್ಮೀ ನಿವಾಸ' ಧಾರಾವಾಹಿಗೆ ಬಂದಿದ್ದನ್ನು ಗಮನಿಸಿದರೇನೆ ಅರ್ಥವಾಗುತ್ತದೆ.
ಚಂದನಾ ಹಾಗೂ ಪ್ರತ್ಯಕ್ಷ್ ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಆದರೂ ಇಬ್ಬರ ಬಾಂಡಿಂಗ್ ನೋಡಿದರೆ ಬಹಳ ವರ್ಷಗಳ ಗೆಳೆತನವೇನೊ ಎಂಬಷ್ಟು ಫೀಲ್ ಆಗುತ್ತದೆ. ಇಬ್ಬರ ಮನಸ್ಥಿತಿ ಒಂದೇ ಆದಾಗ ಇಷ್ಟು ಆತ್ಮೀಯತೆ ಸಹಜವಾಗಿಯೇ ಬರುತ್ತದೆ.ಚಂದನಾ ಮೊದಲೇ ತುಂಟು ಹುಡುಗಿ. ಅವರು ಮಾಡುವ ತಮಾಷೆಯನ್ನೆಲ್ಲ ಪ್ರತ್ಯಕ್ಷ್ ಎಂಜಾಯ್ ಮಾಡುತ್ತಾರೆ. ಹೀಗಾಗಿಯೇ ಇಬ್ಬರು ಗಂಡ - ಹೆಂಡತಿ ಎನ್ನುವುದಕ್ಕಿಂತ ಆತ್ಮೀಯವಾಗಿ ಕಾಣಿಸಿಕೊಳ್ಳುತ್ತಾರೆ.
ಅತ್ತೆ ಸೊಸೆ ಕೂಡ ಕಡಿಮೆ ಏನಿಲ್ಲ. ಚಂದನಾ, ಗಂಡ, ಅತ್ತೆಯ ಜೊತೆಗೆ ಒಂದೊಳ್ಳೆ ಎಂಟರ್ಟೈನಿಂಗ್ ಇಂಟರ್ ವ್ಯೂ ಮಾಡಿದ್ದಾರೆ ಕೀರ್ತಿ ENT ಕ್ಲಿನಿಕ್ ನಲ್ಲಿ. ನಿರೂಪಕ ಕೀರ್ತಿ ಹೊಸದಾಗಿ ಮದುವೆಯಾಗಿರುವ ಚಂದನಾ ಹಾಗೂ ಪ್ರತ್ಯಕ್ಷ್ ಅವರನ್ನ ಸಂದರ್ಶನ ಮಾಡಿದ್ದಾರೆ. ಪ್ರತ್ಯಕ್ಷ್ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಅನ್ನೇ ಬಳಸಿರುವ ಕಾರಣ, ಕಮೆಂಟ್ ಬಾಕ್ಸ್‌ನಲ್ಲಿ ಕನ್ನಡ ಮಾತನಾಡಿ ಎಂಬ ಅಭಿಪ್ರಾಯ ಬರ್ತಿದೆ ಎಂದು ಕೀರ್ತಿ ಹೇಳುತ್ತಾರೆ. ಆಗ ಚಂದನಾ ಅದಕ್ಕೆ ಉತ್ತರಿಸಿದ್ದು, ಅವರು ಓದಿದ್ದೆಲಾ ಪಾಪ ಬಿಷಪ್ ಸ್ಕೂಲ್‌ನಲ್ಲಿ. ಹಾಗಾಗಿ ಇಂಗ್ಲಿಷ್ ಜಾಸ್ತಿ ಬರ್ತಿದೆ ಅಷ್ಟೆ ಎಂದು ಗಂಡನನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಚಂದನಾ ಅವರನ್ನ ನೋಡಿ ರಿಜೆಕ್ಟ್ ಮಾಡಿದ್ರಂತೆ ಪ್ರತ್ಯಕ್ಷ್ ಮೊದಲೇ ಹೇಳಿದಂತೆ ಚಂದನಾ ಹಾಗೂ ಪ್ರತ್ಯಕ್ಷ್ ಅವರದ್ದು ಹಿರಿಯರು ನೋಡಿ, ಒಪ್ಪಿ ಮಾಡಿದ ಮದುವೆ. ಹೀಗಾಗಿ ಮೊದಲಿಗೆ ಪ್ರತ್ಯಕ್ಷ್ ಅವರಿಗೆ ಹೆಣ್ಣು ತೋರಿಸಬೇಕೆಂದಾಗ ಚಂದನಾ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ತೋರಿಸಿದ್ದರಂತೆ. ಅದರಲ್ಲಿನ ಫೋಟೋಗಳನ್ನ ನೋಡಿ. ಈ ಹುಡುಗಿ ಬೇಡ ಅಮ್ಮ ಎಂದಿದ್ದರಂತೆ. ಯಾಕೆ ಅಂದ್ರೆ ಬಾಲ್ಯ ವಿವಾಹ ಆಗೋದು ಕಾನೂನು ಪ್ರಕಾರ ತಪ್ಪು ಅಂತ ಅಂದಿದ್ದರಂತೆ. ಚಂದನಾರನ್ನ ಸಿಕ್ಕಾಪಟ್ಟೆ ರೇಗಿಸಿದ್ದಾರೆ.
ಇನ್ನು ಅತ್ತೆ ಸೊಸೆ ಬಾಂಡಿಂಗ್ ಗಂಡನ ಜೊತೆಗೆ ಮಾತ್ರವಲ್ಲ ಅತ್ತೆ ಸೊಸೆಯ ನಡುವಿನ ಬಾಂಧವ್ಯವೂ ಅದ್ಭುತವಾಗಿದೆ. ಚಂದನಾ ಅವರ ಅತ್ತೆಯ ಹೆಸರು ಲಲಿತಾಂಜಲಿ. ಆದರೆ ಚಂದನಾ ಪ್ರೀತಿಯಿಂದ ಕರೆಯುವುದು ಲಲ್ಲು ಅಂತ. ಆರಂಭದಲ್ಲಿ ಲಲ್ಲು ಅಂತ ಸಾಫ್ಟ್ ಆಗಿ ಕರೆಯುತ್ತಿದ್ದ ಚಂದನಾ ಈಗ ಲಲ್ಲು ಅಂತ ಜೋರಾಗಿ ಕರೀತಾರಂತೆ. ಅವರ ಅತ್ತೆಯೇ ಈ ವಿಚಾರ ಹೇಳಿದ್ದಾರೆ. ಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಇವರ ಸಂದರ್ಶನದ ವಿಡಿಯೋ ಜಸ್ಟ್ ಪ್ರೋಮೋ ಅಪ್ಲೋಡ್ ಮಾಡಿರೋದಷ್ಟೇ. ನೋಡಿದವರು ನಕ್ಕು ನಕ್ಕು ಸುಸ್ತಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.