ನಟಿ ಹಂಸಾ ಬಳಿ 'ಅದನ್ನು' ಕೇಳಿದ ಲಾಯರ್ ಜಗದೀಶ್, ಹಿಡಿದು ಬೆಂಡೆತ್ತಿದ ಸಹ ಸ್ಫಧಿ೯ಗಳು

 | 
Hs

 ಬಿಗ್ ಬಾಸ್‌ ಮನೆಯಲ್ಲಿ ಕೆ ಎನ್ ಜಗದೀಶ್ ಅವರು ಆರಂಭದಿಂದಲೂ ಸೌಂಡು ಮಾಡುತ್ತಿದ್ದಾರೆ. ಎಲ್ಲರ ಮೇಲೂ ಮಾತಿನ ಸಮರ ನಡೆಸಿದ್ದಾರೆ. ಇದೀಗ ಅವರು ಮನೆಯ ಕ್ಯಾಪ್ಟನ್ ಆಗಿರುವ ಹಂಸ ಬಗ್ಗೆಯೂ ಜಗದೀಶ್ ಸಿಡಿಮಿಡಿಗೊಂಡಿದ್ದಾರೆ. ಕ್ಯಾಪ್ಟನ್ ಹಂಸ ಅವರಿಗೆ ಧಿಕ್ಕಾರ.. ಧಿಕ್ಕಾರ. ಅಂತ ಹೇಳಿದ್ದಾರೆ. ಅಷ್ಟಕ್ಕೂ ಇಂತಹದ್ದೊಂದು ಬೆಳವಣಿಗೆಗೆ ಕಾರಣವೇನು.

ಬಿಗ್ ಬಾಸ್‌ ಮನೆಯಲ್ಲಿ ಈಗ ಹಂಸ ಅವರದ್ದೇ ಅಡಳಿತ. ಅರ್ಥಾತ್, ಅವರೀಗ ಮನೆಯ ಕ್ಯಾಪ್ಟನ್. ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ಕ್ಯಾಪ್ಟನ್ ಎಂಬ ಖ್ಯಾತಿ ಕೂಡ ಈಗ ಹಂಸಗೆ ಸಿಕ್ಕಿದೆ. ಅಂದಹಾಗೆ, ಮನೆಯೊಳಗೆ ಇರುವ ಮತ್ತೋರ್ವ ಸ್ಪರ್ಧಿ ಕೆ ಎನ್ ಜಗದೀಶ್ ಅವರಿಗೆ ಹಂಸ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಹೊಸ ಪ್ರೋಮೋದಲ್ಲೂ ಅದು ಜಗಜ್ಜಾಹೀರಾಗಿದೆ.

ಈಗಾಗಲೇ ತಮ್ಮ ಮಾತುಗಳಿಂದಲೇ ಮುಜುಗರಕ್ಕೀಡಾಗುತ್ತಿರುವ ಜಗದೀಶ್ ಈಗಲೂ ಅಂಥದ್ದೇ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಈ ಹೊಸ ಪ್ರೋಮೋದಲ್ಲಿ ಏನಿದೆ? "ಕ್ಯಾಪ್ಟನ್ ಹಂಸ ಅವರಿಗೆ ಧಿಕ್ಕಾರ.. ಧಿಕ್ಕಾರ.." ಹಂಸ  ನನ್ನ ಕಾಚ ತೊಗೊಳ್ಳಿ ಎಂದು ಜಗದೀಶ್ ಹೇಳಿದ್ದಾರೆ. ಅಲ್ಲದೆ, ಅವರೀಗ ಸ್ವರ್ಗದಿಂದ ನರಕಕ್ಕೆ ಹೋಗಿದ್ದಾರೆ. ಹಾಗಾಗಿ, ಅವರ ವಸ್ತುಗಳನ್ನು ತಂದುಕೊಡುವ ಜವಾಬ್ದಾರಿ ಕ್ಯಾಪ್ಟನ್ ಮೇಲಿದೆ. ಅದಕ್ಕೋಸ್ಕರ ಹಂಸ ಅವರು ಜಗದೀಶ್ ಬಳಿ ಅವರ ವಸ್ತುಗಳ ಬಗ್ಗೆ ವಿಚಾರಿಸುತ್ತಿದ್ದರು.

ಆಗ ಜಗದೀಶ್, ನನ್ನ ಅಂಡರ್‌ವೇರ್ ಇದೆ. ಅದನ್ನು ನಾನೇ ತೆಗೆದುಕೊಳ್ಳುತ್ತೇನೆ. ನೀವು ಮುಟ್ಟೋದು ಬೇಡ. ನನಗೆ ಅಷ್ಟೆಲ್ಲಾ ಸೇವೆ ಮಾಡಿಸಿಕೊಂಡು ಅಭ್ಯಾಸ ಇಲ್ಲ. ನೀವು ನನ್ನ ಅಂಡರ್‌ವೇರ್ ತರಬೇಡಿ ಪ್ಲೀಸ್.. ಅದು ನನ್ನ ಪ್ರೈವೆಸಿ, ಅದನ್ನು ಮುಟ್ಟುವ ಹಾಗಿಲ್ಲ ನೀವು ಎಂದು ಹೇಳಿದ ಜಗದೀಶ್, ಉಳಿದ ನರಕವಾಸಿಗಳ ಬಳಿ,ಎಷ್ಟು ಹಿಂಸೆ ಕೊಡ್ತಿನಿ ಅಲ್ವಾ ಅಂತ ಕಾಮೆಂಟ್ ಪಾಸ್ ಮಾಡಿದರು.ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ಕಾದುನೋಡಬೇಕು.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.