ದರ್ಶನ್ ತಪ್ಪು ಮಾಡಿದ್ದಾನೆ ಶಿಕ್ಷೆ ಅನುಭವಿಸಲಿ; ಅದರಲ್ಲಿ ತಪ್ಪೇನಿದೆ ಎಂದ ಕಿಚ್ಚ ಸಿದ್ಧಾಂತದ
Sep 1, 2024, 07:37 IST
|
ಇಂದು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ಕರೆದಿದ್ದರು. ಮುಂದಿನ ತಿಂಗಳು ಬರುವ ಹುಟ್ಟುಹಬ್ಬದ ವಿಚಾರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು. ಈ ವೇಳೆ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಪಾಲಾಗಿರುವ ದರ್ಶನ್ ಬಗ್ಗೆಯೂ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್, ನಾವು ಮಾತೇ ಆಡ್ತಿಲ್ಲ ಅಲ್ವಾ?. ನಾವಿಬ್ಬರು ಒಟ್ಟಿಗೆ ಸರಿ ಇಲ್ಲ. ಸೂರ್ಯ- ಚಂದ್ರ ಬೆಳಗ್ಗೆ-ರಾತ್ರಿ ಇದ್ರೆನೆ ಚೆಂದ. ಒಟ್ಟಿಗೆ ಬಂದ್ರೆ ಸಮಸ್ಯೆ. ಹಾಗಂತ ಸಮಾಜಕ್ಕೆ ಹೆದರಿ ಇರಲ್ಲ. ಮನಸ್ಸಿಗೆ ಬಂದ್ರೆ ನಾನು ಮಾಡ್ತೀನಿ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 2ರಂದು ನಟ ಕಿಚ್ಚ ಅವರ ಬರ್ತ್ ಡೇ. ಹೀಗಾಗಿ ಬೇರೆ ಬೇರೆ ಊರುಗಳಿಂದ ಬರುವ ಅಭಿಮಾನಿಗಳಿಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ಸೆಪ್ಟೆಂಬರ್ 2ರಂದು ಬೆಳ್ಳಗೆ 10 ಗಂಟೆಯಿಂದ 12ರವರಗೆ ಜಯನಗರದ MES ಗ್ರೌಂಡ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬವನ್ನು ಸೆಲೆಬ್ರೆಟ್ ಮಾಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಬಾರಿಯ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ನಡೆದ ಗಲಾಟೆ ಬಗ್ಗೆ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಕಳೆದ ಬಾರಿ ನಡೆದ ಗಲಾಟೆಯಂತೆ ಈ ಸಲ ನಡೆಯುವುದು ಬೇಡ ಎಂದಿದ್ದಾರೆ.
ದರ್ಶನ್ ಅವರನ್ನು ಭೇಟಿಯಾಗ್ಬೇಕು ಎಂದು ನಿಮಗೆ ಅನಿಸಲೇ ಇಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ನಾನು ಅವರ ಜೊತೆ ಚೆನ್ನಾಗಿ ಮಾತಾಡಿಕೊಂಡು ಇದ್ದಿದ್ರೆ ಖಂಡಿತಾ ನಾನು ಹೋಗಿ ಮಾತಾಡಿಸಿ ಬರ್ತಿದೆ. ಆದ್ರೆ ನಾವು ಮಾತಾಡೋದೆ ಇಲ್ಲ ಎಂದ ಮೇಲೆ ಅನಿಸೋದು ಹೇಗೆ ಎಂದ್ರು ಸುದೀಪ್.
ನನ್ನ ಫ್ಯಾನ್ಸ್ ತಪ್ಪು ಮಾಡಿದ್ರೆ ಕರೆದು ಯಾಕ್ರಪ್ಪ ಈ ರೀತಿ ಮಾಡ್ತೀರಾ ಎಂದು ಬುದ್ದಿ ಹೇಳಬಹುದು. ಆದ್ರೆ ಬೇರೆಯವರಿ ಬುದ್ದಿ ಹೇಳಲು ಆಗಲ್ಲ. ಯಾರು ಮಾಡಿದ್ದು ತಪ್ಪು ಅಂತನೂ ನಾನು ಹೇಳೋದಿಲ್ಲ ಎಂದು ಸುದೀಪ್ ಖಡಕ್ ಆಗಿ ಮಾತಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.