ಲಾರಿ ಡ್ರೈವರ್ ಅಜು೯ನ್ ಅಂತ್ಯಕ್ರಿಯೆ, ನೋಡಿದ್ರೆ ಕರುಳು ಕಿತ್ತು ಬರುತ್ತೆ

 | 
Nd
 ಮನುಷ್ಯ ಮುನಿದರೆ ಕೋಪ ಕಡಿಮೆ ಆಗಬಹುದು. ಆದರೆ ಪ್ರಕೃತಿಯೇ ಮುನಿದರೆ ಏನೂ ಮಾಡಲು ಸಾಧ್ಯವಿಲ್ಲ. ಹೌದು ಮಳೆಯ ಆರ್ಭಟಕ್ಕೆ ಜುಲೈ 16 ರಂದು ಶಿರೂರು ಅಂಕೋಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಲಾರಿ ಸಮೇತ ಕೊಚ್ಚಿಹೋಗಿದ್ದ ಚಾಲಕ ಅರ್ಜುನ್ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 28, ಶನಿವಾರದಂದು ಅವರ ಹುಟ್ಟೂರಾದ ಕನ್ನಡಿಗರಲ್ಲಿ ನೆರವೇರಿತು.
ಇನ್ನು ಅಂತಿಮ ವಿದಾಯ ಹೇಳಲು ಸಾವಿರಾರು ಮಂದಿ ಜಮಾಯಿಸಿ, ಗಂಟೆಗಟ್ಟಲೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ನಮನ ಸಲ್ಲಿಸಿದರು.ಸಾರ್ವಜನಿಕ ದರ್ಶನಕ್ಕೂ ಕೂಡಾ ಇಡಲಾಗಿತ್ತು. ಇನ್ನು ಕೆಪಿ ಮಹಮ್ಮದ್ ರಿಯಾಸ್ , ಸಂಸದ ಕೆ ರಾಘವನ್ ಸೇರಿದಂತೆ ಕರ್ನಾಟಕದ ಕಾರವಾರದ ಶಾಸಕ ಸತೀಶ್ ಸೈಲ್ ಕೂಡ ಆಗಮಿಸಿ 5 ಲಕ್ಷದ ಚೆಕ್ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಜುಲೈ ತಿಂಗಳಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಅರ್ಜುನ್ ಹಾಗೂ ಅವರು ಚಲಾಯಿಸುತ್ತಿದ್ದ ಲಾರಿ ನಾಪತ್ತೆಯಾಗಿತ್ತು. ಈ ಘಟನೆ ನಡೆದು ಎರಡು ತಿಂಗಳ ನಂತರ ಶವ ಸಿಕ್ಕಿದ್ದು ಬೇಸರ ಮುಡಿಸಿದರು ಕಡೆ ಪಕ್ಷ ಅಂತಿಮ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಂಟಾಗಿದೆ. ಪುಟ್ಟ ಮಗು ಹಾಗೂ ಕುಟುಂಬವನ್ನು ಹೊಂದಿದ್ದ ಅರ್ಜುನ್ ಕುಟುಂಬಕ್ಕೆ ಈ ಸಾವು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಆಂಬ್ಯುಲೆನ್ಸ್​ ಟೋಲ್ ಬೂತ್ ದಾಟಿ ನಂತರ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಹೂಗುಚ್ಛಗಳನ್ನು ಮೃತದೇಹದ ಮೇಲೆ ಇಡುವ ಮೂಲಕ ಅಂತಿಮ ದರ್ಶನ ಪಡೆದುಕೊಂಡು ಗೌರವ ಸಲ್ಲಿಸಿದರು. ಇದೇ ವೇಳೆ ಆಂಬ್ಯುಲೆನ್ಸ್​​ನಲ್ಲಿದ್ದ ಸಮಾಜಸೇವಕ, ಅರ್ಜುನ್​ಗಾಗಿ ಜೀವದ ಹಂಗು ತೊರೆದು ನೆರೆ ನೀರಿನ ನಡುವೆ ನದಿಯಾಳಕ್ಕೆ ಮುಳುಗಿ ಹುಡುಕಾಡಿದ ಆಪದ್ಬಾಂಧವ ಈಶ್ವರ್ ಮಲ್ಪೆ ಅವರಿಗೂ ಗಡಿಭಾಗದ ಜನತೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.