ಚೈತ್ರ ಕುಂದಾಪುರ ಬಳಿ ಐಶಾರಾಮಿ ಕಾರು, ಎಲ್ಲಿಂದ ಬಂತು ಹಣದ ಹೊಳೆ

 | 
Hx

ಕಳೆದ ವಿಧಾನಸಭೆ ಚುನಾವಣೆ ವೇಳೆ ಬೈಂದೂರು ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ನೀಡಿಕೆ ವಿಚಾರ ದೊಡ್ಡ ಚರ್ಚೆಯ ವಿಷಯವಾದಾಗ ಇದನ್ನು ಅತ್ಯಂತ ಜಾಣತನದಿಂದ ಬಳಸಿಕೊಂಡು ಟಿಕೇಟ್ ಆಕಾಂಕ್ಷಿಯಾಗಿದ್ದ ಕೋಟ್ಯಾಧಿಪತಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ನಂಬಿಸಿ, ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ.ಗಳನ್ನು ಪಡೆದು ವಂಚಿಸಿದ ಬಹುಕೋಟಿ ಡೀಲ್ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮೂಲತ: ಸಂಘಪರಿವಾರದ ಓರ್ವ ಸಕ್ರಿಯ ಕಾರ್ಯಕರ್ತೆ.

ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ ಎನ್ನಲಾದ ಅವರು ವಿದ್ಯಾಭ್ಯಾಸದ ಬಳಿಕ ಎಬಿವಿಪಿಯಲ್ಲಿ ಜವಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಕೆಲ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದರು. ಮಾಧ್ಯಮದಿಂದ ಹೊರಬಂದ ಬಳಿಕ ಪ್ರಚೋದನಕಾರಿ, ಉಗ್ರ ಭಾಷಣಗಳ ಮೂಲಕ ಕೋಮುಗಳ ನಡುವೆ ಸಾಮರಸ್ಯ ಕದಡುವ ಮಾತನಾಡಿ ಒಂದು ಕೋಮಿನವರನ್ನು ಎತ್ತಿಕಟ್ಟುವ ಬಗ್ಗೆ ಆರೋಪಗಳಿದ್ದು ಈ ಬಗ್ಗೆ ಪ್ರಕರಣಗಳು ಕೂಡ ದಾಖಲಾಗಿರುವ ಮಾಹಿತಿಗಳಿವೆ.

ಈತನ್ಮದ್ಯೆ ಕಳೆದ ಕೆಲ ವರ್ಷಗಳಿಂದ ತಾನು ಪ್ರಖರ ವಾಗ್ಮಿ, ಹಿಂದೂ ಕಾರ್ಯಕರ್ತೆ ಎಂಬ ಸೋಗಿನಲ್ಲಿ ಭಾಷಣಗಳನ್ನು ಮಾಡುತ್ತಿದ್ದ ಈಕೆ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಒಂದಷ್ಟು ಸಮಸ್ಯೆಗಳನ್ನು ಮಾಡಿಕೊಂಡು ಸಂಘಟನೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಬಳಿಕ ಉತ್ತರ ಕರ್ನಾಟಕದ ಒಂದಷ್ಟು ಕಡೆ ಭಾಷಣಕಾರ್ತಿಯಾಗಿ ತೆರಳಿ ಅಲ್ಲಿಗೆ ಸೀಮಿತವಾಗಿದ್ದರು.

ಭಾಷಣಗಾರ್ತಿಯಾಗಿರುವ ಚೈತ್ರಾ ಕುಂದಾಪುರ, ಉತ್ತರ ಕರ್ನಾಟಕ ಭಾಗಗಳಲ್ಲಿ ಸಂಘ ಪರಿವಾರ ಆಯೋಜಿಸುವ ಪ್ರತಿಭಟನಾ ಸಭೆಯಲ್ಲಿ ಪ್ರಮುಖ ಭಾಷಣಗಾರ್ತಿಯಾಗಿ ಹೋಗಿ ಮುಸ್ಲಿಂ ಸಮುದಾಯದ ಬಗ್ಗೆ ತಮ್ಮ ಭಾಷಣಗಳಲ್ಲಿ ಕೆಟ್ಟದಾಗಿ ದ್ವೇಷ ಕಾರುತ್ತಾ, ಮುಗ್ದ ಜನರಲ್ಲಿ ದ್ವೇಷದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದ ಆರೋಪಗಳಿವೆ. ವಂಚನೆ ಪ್ರಕರಣ ಬೆಳಕಿಗೆ ಬರುವ ಮುನ್ನ ಚೈತ್ರಾ ದುಬಾರಿ ಬೆಲೆಯ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದುದು ಬಯಲಾಗಿದೆ.

ವಿಧಾನಸಭಾ ಚುನಾವಣೆ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿರುವುದಾಗಿ ಚೈತ್ರಾ ಸಹಿತ 8 ಮಂದಿಯ ವಿರುದ್ಧ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.