ಶ್ರೀದೇವಿಯಿಂದ ಮಹಾಮೋಸ, ಇವತ್ತಿಗೂ ಉತ್ತರ ಸಿಗಲಿಲ್ಲ
Feb 11, 2025, 18:58 IST
|

ಒಂದು ಕಾಲದಲ್ಲಿ ಇಡೀ ಇಂಡಸ್ಟ್ರಿಯನ್ನು ಬೆರಳ ತುದಿಯಲ್ಲಿ ಆಡಿಸಿದಾಕೆ, ದಶಕದವರೆಗೆ ನಂಬರ್ 1 ಪಟ್ಟವನ್ನು ಬಿಟ್ಟುಕೊಡದ ಸೌಂದರ್ಯದ ಘನಿ ಶ್ರೀದೇವಿ ದುರಂತ ಅಂತ್ಯಕಂಡು ಇದೀಗ ಏಳು ವರ್ಷ. 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ, ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್ ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ.
ಆದರೆ, ಹೋಟೆಲ್ ಬಾತ್ರೂಮ್ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್ಟಬ್ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್ಟಬ್ನಲ್ಲಿ. ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು.
13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ತಮ್ಮ ನಟನೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆದಿವೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ. 1963ರಲ್ಲಿ ಹುಟ್ಟಿದ್ದ ಈ ತಾರೆ ಬದುಕಿರುತ್ತಿದ್ದರೆ, 62 ವರ್ಷ ವಯಸ್ಸಾಗಿರುತ್ತಿತ್ತು.
ಇಂತಿಪ್ಪ ಶ್ರೀದೇವಿಗೆ ತಂಗಿ ಇದ್ದರಂತೆ ಅಕ್ಕನಂತೆಯೇ ಸಿನಿಮಾದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಈ ಶ್ರೀಲತಾ ಯಾರು ಇವೆಲ್ಲವೂ ಈಗ ಬೆಳಕಿಗೆ ಬಂದಿದೆ. ದಿಢೀರ್ ಎಂದು ಶ್ರೀದೇವಿ ತಂಗಿ ಶ್ರೀಲತಾ ಅವರ ಹೆಸರು ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಯಾರೀ ಶ್ರೀಲತಾ ಎನ್ನುವುದು ಬಹುತೇಕರಿಗೆ ತಿಳಿದಿರಲಿಕ್ಕೇ ಇಲ್ಲ. ಅಷ್ಟಕ್ಕೂ ಇವರು ಶ್ರೀದೇವಿ ಅವರ ತಂಗಿ! ಹೌದು. ಶ್ರೀದೇವಿ ಅವರಂತೆಯೇ ಸಿನಿಮಾದಲ್ಲಿ ಮಿಂಚಬೇಕು ಎಂಬ ಆಸೆ ಇದ್ದರೂ, ಶ್ರೀಲತಾ ಅವರ ಆಸೆ ಈಡೇರಿರಲಿಲ್ಲ.
ಕೊನೆಗೆ ಅಕ್ಕನ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸಿನಿಮಾ ಶೂಟಿಂಗ್ ವೇಳೆ ಶ್ರೀದೇವಿ ಶ್ರೀಲತಾ ಜೊತೆ ಸೆಟ್‌ಗೆ ಬರುತ್ತಿದ್ದರು ಆದರೆ ನಟಿಯಾಗಲಿಲ್ಲ, ಅವರ ನಡುವೆ ಸಾಕಷ್ಟು ಪ್ರೀತಿ ಇತ್ತು ಎಂದೇ ಹೇಳಲಾಗುತ್ತಿದೆ. ಆದರೆ ಶ್ರೀದೇವಿ ಸಾವಿನ ನಂತರದಲ್ಲಿ ಅವರೆ ಹಲವಾರು ಆಸ್ತಿಯ ಒಡೆಯರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.