ದರ್ಶನ್ ಮುಖ ನೋಡಿ ಕಣ್ಣು ‌ಹೊಡೆದ ಮಾಲಾಶ್ರೀ ಮಗಳು, ದ.ರ್ಶನ್ ಪತ್ನಿ ವಿಜಯಲಕ್ಷ್ಮಿ ಗರಂ

 | 
ರಾ

ದರ್ಶನ್‌ ನಾಯಕರಾಗಿರುವ ಕಾಟೇರ ಚಿತ್ರ ಇದೇ ಡಿಸೆಂಬರ್ 29ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌, ಹಾಡುಗಳು ಹಿಟ್‌ ಲಿಸ್ಟ್‌ಗೆ ಸೇರುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ. ಹುಬ್ಬಳ್ಳಿಯಲ್ಲಿ ಅದ್ಧೂರಿ ಯಾಗಿ ಟ್ರೇಲರ್‌ ರಿಲೀಸ್‌ ಮಾಡಿ, ಅಲ್ಲಿನ ಮಂದಿಗೆ ದರ್ಶನ ಭಾಗ್ಯ ನೀಡಿದ ದರ್ಶನ್‌ ಈಗ ಮಂಡ್ಯದತ್ತ ಮುಖ ಮಾಡಿದ್ದಾರೆ.

ಹೌದು, ಈ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಇಂದು ಮಂಡ್ಯ ನಗರದ ಬಾಯ್ಸ ಕಾಲೇಜು ಮೈದಾನದಲ್ಲಿ ನಡೆದಿದೆ. ಈಗಾಗಲೇ ಸಿದ್ದವಾಗಿದ್ದ ಕಲರ್‌ ಫ‌ುಲ್‌ ವೇದಿಕೆ ಮೇಲೆ ಸಿನಿಮಾದಲ್ಲಿ ನಟಿಸಿದ ತಾರೆಯರೆಲ್ಲಾ ಈ ವೇದಿಕೆಯಲ್ಲಿ ದರ್ಶನ ನೀಡಿದ್ದಾರೆ .ಈ ಮೂಲಕ ಮಂಡ್ಯ ನಿನ್ನೆ ಜಗಮಗಿಸಿದೆ.

ದೊಡ್ಡಮಟ್ಟದಲ್ಲಿಯೇ ಈ ಒಂದು ಇವೆಂಟ್ ಪ್ಲಾನ್ ಮಾಡಲಾಗಿತ್ತು. ಈ ಮೂಲಕ ರೈತರ ದಿನಾಚರಣೆಯನ್ನ ಕೂಡ ಅದ್ಭುತವಾಗಿಯೇ ಮಾಡಲಾಯಿತು.ಜೊತೆಗೆ ಕಾಟೇರ ಚಿತ್ರವೂ ರೈತರ ಕಥೆಯನ್ನೆ ಆಧರಿಸಿದೆ. ಹಾಗಾಗಿಯೇ ಕಾಟೇರ ಇಡೀ ಟೀಮ್ ಈ ಒಂದು ಇವೆಂಟ್‌ ಅನ್ನ ಭರ್ಜರಿಗಿಯೆ ಪ್ಲಾನ್ ಮಾಡಿತ್ತು.

ಕಾಟೇರ ಸಿನಿಮಾ ತಂಡ ಈ ಒಂದು ಇವೆಂಟ್‌ಗೆ ರೆಡಿ ಆಗಿತ್ತು. ಎಲ್ಲ ರೀತಿಯ ತಾಲೀಮು ಕೂಡ ಮಾಡಿಕೊಂಡಿತ್ತು. ಸಂಜೆ ಕೇವಲ ರೈತರ ಹಾಡು ರಿಲೀಸ್ ಆಗಲಿಲ್ಲ ಬದಲಾಗಿ ಸಿನಿಮಾದ ನಟರು-ನಟಿಯರು ಇಲ್ಲಿ ಮನರಂಜನಾ ಕಾರ್ಯಕ್ರಮಗಳನ್ನೂ ಕೊಟ್ಟಿದ್ದಾರೆ.ಅದಕ್ಕಾಗಿಯೇ ಸೂಕ್ತ ತಾಲೀಮು ಕೂಡ ಮಾಡಿಕೊಂಡಿದ್ದರು. ಪಸಂದಾಗವನೆ ಹಾಡಿಗೆ ಹೆಜ್ಜೆ ಹಾಕಿದ ನಟಿ ಆರಾಧನಾ ಡ್ಯಾನ್ಸ್ ಮಾಡುತ್ತ  ಕಣ್ಣು ಹೊಡೆದು ದರ್ಶನ ಅವರಿಗೆ ಸ್ಟೇಜ್ ಗೆ ಕರೆದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.