ಮಾಲಾಶ್ರೀ ಮಗಳ ಅದ್ಭುತ ಯೋಗ ನೋ ಡಿ ಕನ್ನಡಿಗರು ಫಿದಾ

 | 
Uuu

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಆರಾಧನಾ ರಾಮ್‌ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಯೋಗಾಸನ ಪ್ರದರ್ಶಿಸಿದ್ದಾರೆ. ಈ ಮೂಲಕ ತನ್ನ ಆಕರ್ಷಕ ಮೈಕಟ್ಟಿನ ಗುಟ್ಟು ಯೋಗ ಎಂದು ಸಾಬೀತುಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಾಟೇರ ಸಿನಿಮಾ ನಟಿ ಆರಾಧನಾ ರಾಮ್ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನ ಇಂದಿರಾ ನಗರದ ಕ್ಲಬ್‌ನಲ್ಲಿ ಅಥಾಯೋಗ್ ಲಿವಿಂಗ್ ಆಯೋಜಿಸಿದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆರಾಧನಾ ಎಲ್ಲರ ಜೊತೆ ಯೋಗ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಮಾಲಾಶ್ರಿ ಮತ್ತು ಕೋಟಿ ನಿರ್ಮಾಪಕರೆಂದೇ ಖ್ಯಾತಿ ಪಡೆದ ರಾಮು ಅವರ ಮುದ್ದಿನ ಮಗಳು ಈ ಆರಾಧನಾ ರಾಮ್‌. ಆರಾಧನಾ ರಾಮ್‌ ಅವರ  ಮೊದಲ ಹೆಸರು ಅನನ್ಯ ರಾಮು ಎಂದಿತ್ತು. ಬಳಿಕ ರಾಧನಾ ರಾಮ್‌ ಎಂದು ಬದಲಾಯಿಸಿಕೊಂಡಿದ್ದರು. ಯಾಕೋ ರಾಧನಾ ಹೆಸರೂ ಇಷ್ಟವಾಗದೆ ಆರಾಧನಾ ರಾಮ್‌ ಹೆಸರಿನಲ್ಲಿ ಕಾಟೇರ ಸಿನೆಮಾಕ್ಕೆ ಎಂಟ್ರಿ ನೀಡಿದ್ದರು.

ಆರಾಧನಾ ರಾಮ್‌ಗೆ ಹದಿಮೂರು ವರ್ಷವಾಗಿದ್ದಾಗಲೇ ಸಿನಿಮಾರಂಗದ ಕುರಿತು ಆಸಕ್ತಿ ಇತ್ತು. ಮಗಳ ಸಿನಿ ಪ್ರೀತಿಗೆ ಹೆತ್ತವರು ನಿರೇರೆದಿದ್ದಾರೆ. ಮುಂಬೈನಲ್ಲಿ ಎರಡು ವರ್ಷ ನಟನಾ ತರಬೇತಿ ಪಡೆದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ ಆರಾಧನಾ ರಾಮ್‌.  ದರ್ಶನ್‌ ಮತ್ತು ರಾಕ್‌ಲೈನ್‌ ಜತೆ ಸಿನಿಮಾ ಮಾಡುವ ಅವಕಾಶ ದೊರಕಿದಾಗ ಆರಾಧನಾ ರಾಮ್‌ಗೆ ಶಾಕ್‌ ಆಗಿತ್ತು. 

ಈ ಸುದ್ದಿ ಕೇಳಿದಂದು ರಾತ್ರಿ ನಿದ್ದೆಯೇ ಬಂದಿರಲಿಲ್ಲ. ಈ ಸಿನಿಮಾದಲ್ಲಿ ನಟಿಸಲು ಸರಿಯಾದ ತರಬೇತಿ ಪಡೆದು ಬಂದು ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.