ರಾತ್ರಿ ಮನೆಗೆ ಕುಡಿದು ಬಂದು ಪತ್ನಿಯ ಮುಖ್ಯ ಭಾ.ಗವನ್ನು ಕಚ್ಚಿದ ಗಂಡ, ಆ ರೋಪಿ ಬಂಧನ

 | 
Hb

ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮಗಳ ಮೇಲೆ ಪತಿ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ. ಈ ಘಟನೆಯು ನಿನ್ನೆ ತಡರಾತ್ರಿ ಹೊತ್ತಿಗೆ ನಡೆದಿದೆ. ಸುರೇಶ್ ಗೌಡ ಆರೋಪಿ ಪತಿ ಇವರು ಬಹಳ ವರ್ಷಗಳ ಹಿಂದೆಯೇ ಕುಡಿತದ ದಾಸರಗಿದ್ದರು.

ಇದೀಗ ಶಿಶಿಲ ಕೋಟೆಬಾಗಿಲು ನಿವಾಸಿಯಾಗಿದ್ದ ಸುರೇಶ್ ಗೌಡ ಕುಡಿದ ಮತ್ತಿನಲ್ಲಿ ಆತನ ಹೆಂಡತಿ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಕೋಲಿನಿಂದ ಹೊಡೆದು ಪತ್ನಿಯ ಕಣ್ಣು ಹಾಗೂ ಮುಖದ ಭಾಗಕ್ಕೆ ಕಚ್ಚಿ ಮಾಂಸವನ್ನು ಹೊರ ತೆಗೆದು ವಿಕೃತಿ ಮೆರೆದಿದ್ದಾನೆ. ಪರಿಣಾಮ ಪತ್ನಿಯ ಎಡ ಕಣ್ಣಿಗೆ ಸಂಪೂರ್ಣ ಹಾನಿಯಾಗಿದೆ. 

ಅಮ್ಮನನ್ನು ರಕ್ಷಿಸಲು ಬಂದ ಮಗಳ ಮೇಲೂ ಹಲ್ಲೆ ಮಾಡಿದ್ದಾನೆ. ಕೂಡಲೇ ಅಲ್ಲಿಂದ ತಪ್ಪಿಸಿಕೊಂಡು ಬಂದ ಮಗಳು ನೆರೆ ಹೊರೆಯವರಿಗೆ ವಿಚಾರ ತಿಳಿಸಿದ್ದಾಳೆ. ಈ ಹೊತ್ತಲ್ಲೇ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದ ಪತ್ನಿ ಇಂದು ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದ ಪತಿ ಸುರೇಶ್ ಗೌಡ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಾರಿಯಾಗಿದ್ದ ಆರೋಪಿ ಗಂಡನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.