ಸುಳ್ಳು‌ ಹೇಳಿಎರಡನೇ ಮದುವೆ ಮಾಡಿಕೊಂಡು ಮಂಗಳೂರಿನಲ್ಲಿ ಹನಿಮೂ‌ನ್ ಮುಗಿಸಿದ ಗಂಡ; ಎರಡೇ ದಿನಕ್ಕೆ‌ ಡಿವೋರ್ಸ್ ಕೊಟ್ಟೆ

 | 
Bx

ವೀಕ್ಷಕರೆ ನಟಿ ವಾಣಿಶ್ರೀ, ಕನ್ನಡದ ಹಲವು ಧಾರಾವಾಹಿಗಳು ಮತ್ತು ಸಿನಿಮಾದಲ್ಲಿ ನಟಿಸಿ ಪ್ರಖ್ಯಾತಿ ಪಡೆದಿದ್ದಾರೆ. ವಾಣಿಶ್ರೀ ಅವರು ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದು, ಕಿರುತೆರೆ ವೀಕ್ಷಕರಿಗೆ ಇವರು ಚಿರಪರಿಚಿತರು. ವಾಣಿಶ್ರೀ ಅವರ ಗಂಡ ಯಾರು ಅನ್ನೋ ಕುತೂಹಲ ಹಲವರಿಲ್ಲಿತ್ತು. ಈ ಬಗ್ಗೆ ಮೊದಲ ಬಾರಿಗೆ ವಾಣಿಶ್ರೀ ಮನಬಿಚ್ಚಿ ಮಾತನಾಡಿದ್ದು, ಡಿವೋರ್ಸ್‌ ಆಗಿದ್ದೇಕೆ ಎಂಬುದನ್ನು ರಿವೀಲ್‌ ಮಾಡಿದ್ದಾರೆ.

ವೀಕ್ಷಕರೆ 90ರ ದಶಕದಲ್ಲೇ ವಾಣಿಶ್ರೀ ಕನ್ನಡ ಸಿನಿಮಾಗಳಲ್ಲಿ ಮಿಂಚಿದವರು.. ದೂರದರ್ಶನದ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇದರ ಜೊತೆಗೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಟಾಪ್ ನಟಿಯಾಗಿ ಮಿಂಚುತ್ತಿದ್ದರು. ಇನ್ನು ನಟಿ ತಮ್ಮ ಬಣ್ಣದ ಬದುಕು ಹಾಗೂ ವೈಯಕ್ತಿಕ ಜೀವನದ ಬಗ್ಗೆ ವಿವರಿಸಿದ್ದಾರೆ. ಪೋಷಕರು ನೋಡಿ ಮಾಡಿದ ಮದುವೆ ತನ್ನ ಜೀವನದಲ್ಲಿ ಸಮಸ್ಯೆ ಎದುರಾದಾಗ ಪತಿಯಿಂದ ದೂರಾಗಿ ಸ್ವತಂತ್ರವಾಗಿ ಮಗಳನ್ನು ಸಾಕಿ ಬೆಳೆಸಿದ್ದಾರೆ. ಈ ವಿಚಾರವನ್ನು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.
ಅದಾಗಲೇ ಒಂದು ಮದುವೆ ಆಗಿದ್ದರೂ ಸುಳ್ಳು ಹೇಳಿ ತಮ್ಮನ್ನು ಆ ವ್ಯಕ್ತಿ ಮದುವೆ ಆಗಿದ್ದರು ಎಂದು ತಿಳಿಸಿದ್ದಾರೆ. ನನ್ನ ಮಗಳಿಗೆ ಈಗ 21 ವರ್ಷ, ಆದರೆ ಈವರೆಗೆ ಆಕೆಯ ಮುಖವನ್ನು ನನ್ನ ಮಾಜಿ ಪತಿ ನೋಡಿಲ್ಲ ಎಂದು ವಾಣಿಶ್ರೀ ಹೇಳಿದ್ದಾರೆ.