ಪ್ರೇಯಸಿಗೆ ಕೋಟಿ ಬೆಲೆಯ ಚಿನ್ನ ಖರೀದಿಸಲು ಎ ಟಿ ಎಮ್ ಹಣ ಎಗರಿಸಿದ ಪ್ರೇಮಿ

 | 
ಗೀ
ಪ್ರೇಯಸಿಗಾಗಿ ಎಟಿಎಂ ಇಂದ ಹಣ ಎಗರಿಸಿ ಈದೀಗ ಪೋಲೀಸರ ಪಾಲಾಗಿದ್ದಾನೆ ಬ್ಯಾಂಕ್ ನೌಕರ. ಹೌದು ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗತ್ತೆ ಟಿಎಲ್ ಎಂಟರ್‌ಪ್ರೈಸಸ್‌ ಎಜೆನ್ಸಿಯು ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಹಣ ತುಂಬುವ ಟೆಂಡರ್​ ಪಡೆದಿತ್ತು. ಈ ಏಜೆನ್ಸಿಯಲ್ಲಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿ ಕೆಲಸ ಮಾಡುತ್ತಿದ್ದರು. ಗದ್ದಿಗೆ ಗ್ರಾಮದ ಎಟಿಎಂಗೆ ಹಣ ತುಂಬಲು ಇಬ್ಬರನ್ನು ಕಳುಹಿಸಲಾಗಿತ್ತು. 
ಈ ವೇಳೆ ಇಬ್ಬರು 5 ಲಕ್ಷದ 80 ಸಾವಿರ ರೂ. ಹಣವನ್ನು ಎಟಿಎಂಗೆ ತುಂಬದೆ, ಅದನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ .ಏಜೆನ್ಸಿ ಆಡಿಟ್​ನಲ್ಲಿ ಇಬ್ಬರು ಹಣ ತೆಗೆದುಕೊಂಡು ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರ ವಿರುದ್ದ ಏಜೆನ್ಸಿಯವರು ಬಿಳಿಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. 
ಇನ್ನು ಇಬ್ಬರು ಆರೋಪಿಗಳು ಚಿನ್ನದ ಅಂಗಡಿಗೆ ಹೋಗಿ ಕದ್ದ ಹಣದಲ್ಲಿ ಚಿನ್ನ ಖರೀದಿ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯಾಕೆಂದು ಕೇಳಿದರೆ ಪ್ರೇಯಸಿಗಾಗಿ ಎಂದು ಹೇಳಿದ್ದಾರೆ.ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಪ್ರತಿಕ್ರಿಯಿಸಿ, ಈ ಬಗ್ಗೆ ಬಿಳಿಕೆರೆ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಆರೋಪಿಗಳ ವಿರುದ್ಧ ಎಫ್ಐ​ಆರ್ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಪ್ರೀತಿಸಿ ಬೇಡ ಅನ್ನೋರು ಯಾರು ಇಲ್ಲ. ಆದರೆ ಇತಿ ಮಿತಿ ಅರಿತು ಪ್ರೀತಿಸಿ. ಪ್ರೇಯಸಿಯ ಮನಸ್ಸನ್ನು ಗೆಲ್ಲಲು ಹೋಗಿ ಚಿನ್ನ , ಹಣ ಕದ್ದು ಜೈಲು ಪಾಲಾದರೆ ಅವಮಾನ ತಪ್ಪಿದ್ದಲ್ಲ. ಹಾಗಾಗಿ ಯೋಚಿಸಿ ಪ್ರೀತಿಸಿ. ಚಿಂತಿಸಿ ಅದರ ಹೊರತಾಗಿ ನನ್ನ ಪ್ರೇಯಸಿ ಎಂದು ಇಂತ ಕೆಲಸಕ್ಕೆ ಕೈ ಹಾಕದಿರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.