ರಾಮನ ಮೂತಿ೯ಗೆ ಶಿಲೆ ಕೊಟ್ಟವನಿಗೆ 80ಸಾವಿರ ದಂಡ, ಮಾಡದ ತಪ್ಪಿಗೆ ಕಣ್ಣೀರು ಹಾಕುತ್ತಿರುವ ಗುತ್ತಿಗೆದಾರ

 | 
ರ್

ಮೊನ್ನೆಯಷ್ಟೇ ರಾಮಲಲ್ಲಾ ಮೂರ್ತಿಯ ಉದ್ಘಾಟನೆಯಾಗಿದೆ. ಇಡೀ ವಿಶ್ವದ ಹಿಂದೂಗಳೆಲ್ಲಾ ಹೆಮ್ಮೆ ಪಟ್ಟಿದ್ದಾರೆ. ಕಣ್ಣು ತೆರೆದ ರಾಮಲಲ್ಲಾನನ್ನು ಕಂಡು ಸಂತಸಗೊಂಡಿದ್ದಾರೆ. ಭಕ್ತಿ ಭಾವದಿಂದ ಕಣ್ತುಂಬಿಕೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ರಾಮಲಲ್ಲಾ‌ ಮೂರ್ತಿ ಕೆತ್ತಲು ಕಲ್ಲು ನೀಡಿದ ಗುತ್ತುಗೆದಾರ ಸಂಕಷ್ಟದಲ್ಲಿರುವುದು ಬೆಳಕಿಗೆ ಬಂದಿದೆ.

ಖಾಸಗಿ ಚಾನೆಲ್ ಒಂದು ಮಾಡಿರುವ ಚಿಟ್ ಚಾಟ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಗುತ್ತಿಗೆದಾರ ಶ್ರೀನಿವಾಸ್ ರಾಮಶಿಲೆ ನೀಡಿದ್ದಾರೆ. ಭೂ ಮಾಲೀಕ ರಾಮದಾಸ್ ಅವರು ಭೂಮಿ ಒಳಗಿದ್ದ ಬಂಡೆ ತೆಗೆಯುವಂತೆ ಶ್ರೀನಿವಾಸ್ ಅವರಿಗೆ ಗುತ್ತಿಗೆ ನೀಡಿದ್ದರಂತೆ. ಆ ಕಲ್ಲನ್ನು ಹೊರತೆಗೆದು ಜಮೀನಿನ ಪಕ್ಕದಲ್ಲಿಯೇ ಇಟ್ಟಿದ್ದರಂತೆ. ಅದೇ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಗಣಿಗಾರಿಕೆ ಅಂತ ಹೇಳಿ 80 ಸಾವಿರ ದಂಡ ಹಾಕಿದ್ದಾರಂತೆ. ಮೈಸೂರಿನ ಹಾರೋಹಳ್ಳಿ-ಗುಜ್ಜೆಗೌಡನಪುರ ಗ್ರಾಮದ ನಿವಾಸಿಯಾಗಿರುವ ಗುತ್ತಿಗೆದಾರ ಶ್ರೀನಿವಾಸ್ ಆ ದಂಡವನ್ನು ಕಟ್ಟಿದ್ದಾರಂತೆ.

ರಾಮ ಮಂದಿರದ ಉದ್ಘಾಟನೆ ದಿನವೇ ಇಲಾಖೆಗೆ ದಂಡ ಕಟ್ಟಿರುವ ಶ್ರೀನಿವಾಸ್, ತನ್ನ ಹೆಂಡತಿಯ ಒಡವೆಯನ್ನು ಅಡವಿಟ್ಟು ಹಣ ಒದಗಿಸಿದ್ದರಂತೆ. ಅಂದು ದಂಡ ಕಟ್ಟಿದ್ದ ಶಿಲೆಯ ಇಂದು ರಾಮಲಲ್ಲಾ ಮೂರ್ತಿಯಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಈವರೆಗೂ ಯಾರೂ ಸಹಾಯ ಮಾಡಿಲ್ಲ. ರಾಮಲಲ್ಲಾ ವಿಗ್ರಹಕ್ಕೆ ಶಿಲೆ ತೆಗೆದುಕೊಟ್ಟ ನನ್ನ ಕಷ್ಟ ಇನ್ನು ತೀರಿಲ್ಲ. ಈಗಲಾದರೂ ಯಾರಾದರೂ ಸಹಾಯ ಮಾಡುತ್ತಾರಾ ಎಂಬ ನಿರೀಕ್ಷೆಯಲ್ಲಿದ್ದೀನಿ ಎಂದು ಗುತ್ತಿಗೆದಾರ ಶ್ರೀನಿವಾಸ್, ಖಾಸಗಿ ಚಾನೆಲ್ ಒಂದಕ್ಕೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನನ್ನ  2.14 ಎಕರೆ ಭೂಮಿಯಲ್ಲಿನ ಬಂಡೆಗಳನ್ನು ಕೃಷಿಗಾಗಿ ತೆರವುಗೊಳಿಸಲು ನಾನು ಬಯಸಿದ್ದೆ. ಉತ್ಖನನ ಮಾಡಿದ ಬಂಡೆಗಳು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅವಶ್ಯಕತೆಗೆ ಸರಿಹೊಂದುತ್ತವೆ. ಹೀಗಾಗಿ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ಹೇಳಿದರು.
ನನ್ನ ಜಮೀನಿನಲ್ಲಿ ಸಿಕ್ಕ ಕಲ್ಲಿನಿಂದ ಇಂದು ರಾಮಲಲ್ಲಾ ಉದ್ಭವಿಸಿದ್ದಾನೆ. ಹೀಗಾಗಿ ಗ್ರಾಮದ ಅನೇಕರು ನನ್ನ ಭೂಮಿಯಲ್ಲಿ ರಾಮ ಮಂದಿರವನ್ನು ನೋಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದು ಕೊಟ್ಟಿದ್ದೇನೆ ಆದರೆ ನನಗೇ ಅಯೋಧ್ಯೆಗೆ ಕರೆದಿಲ್ಲ ಎಂದಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.