ಉಡುಪಿಯ ಹುಲಿ ಶೋಭಾಕ್ಕನ ಕಾರಿಗೆ ವ್ಯಕ್ತಿ ಬ.ಳಿ; ಶೋಭಾಕ್ಕನ ಕೈಯಿಂದ ದೊಡ್ಡ ಎಡವಟ್ಟು

 | 
Hji

ಲೋಕ ಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು ಅದಕ್ಕಾಗಿ ಅಬ್ಬರದ ಪ್ರಚಾರ ಕಾರ್ಯದ ನಡುವೆ ಸಾವೊಂದು ಸಂಭವಿಸಿ ನೋವನ್ನು ನೀಡಿದೆ.ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ - ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರಿನ ಬಾಗಿಲು ದ್ವಿಚಕ್ರ ವಾಹನಕ್ಕೆ ತಾಗಿ ಸಂಭವಿಸಿದ ಅಪಘಾತದಲ್ಲಿ ಪ್ರಕಾಶ್‌ ಎಂಬ ಬಿಜೆಪಿ ಕಾರ್ಯಕರ್ತ ಮೃತಪಟ್ಟಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಕೆ.ಆರ್‌.ಪುರ ಬಳಿಯ ದೇವಸಂದ್ರಕ್ಕೆ ಬಂದಿದ್ದ ಸಂದರ್ಭದಲ್ಲಿ ಸೋಮವಾರ ಈ ದುರ್ಘಟನೆ ನಡೆದಿದೆ. ದೇವಸಂದ್ರ ವಿನಾಯಕ ದೇವಸ್ಥಾನದ ಬಳಿ ರಸ್ತೆ ಬದಿಯಲ್ಲಿ ಶೋಭಾ ಕರಂದ್ಲಾಜೆ ಅವರ ಕಾರನ್ನು ನಿಲುಗಡೆ ಮಾಡಲಾಗಿತ್ತು. ಈ ವೇಳೆ ಕಾರಿನ ಚಾಲಕ ಏಕಾಏಕಿ ವಾಹನದ ಬಾಗಿಲು ತೆರೆದಿದಿದ್ದ. ಅದೇ ಸಮಯಕ್ಕೆ ಹಿಂದಿನಿಂದ ಬಂದ ಪ್ರಕಾಶ್‌ರ ದ್ವಿಚಕ್ರ ವಾಹನಕ್ಕೆ ಕಾರಿನ ಬಾಗಿಲು ತಗುಲಿ ಬಿದ್ದಿದ್ದಾರೆ.

ಅದೇ ವೇಳೆ ಹಿಂದಿನಿಂದ ಬಂದ ಖಾಸಗಿ ಬಸ್‌ ಅವರ ಮೇಲೆ ಹರಿದು ಹೋಗಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಆಟೋದಲ್ಲಿಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕಾಶ್‌ ಸಾವು ದುಃಖ ತಂದಿದೆ. ನಾವು ಅವರ ಕುಟುಂಬದ ಜತೆಗಿದ್ದೇವೆ. ಕುಟುಂಬಕ್ಕೆ ಪರಿಹಾರ ಮತ್ತು ಅಗತ್ಯ ಸವಲತ್ತು ಕಲ್ಪಿಸುತ್ತೇವೆ ಎಂದು ಸಚಿವೆ ಶೋಭಾ ಭರವಸೆ ನೀಡಿದರು.

ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಳಜಿಯಿಂದ ನಾವು ಪ್ರಚಾರ ಕಾರ್ಯದಲ್ಲಿ ತೊಡಗುತ್ತೇವೆ ಎಂದು ಶೋಭಾ ಕರಂದ್ಲಾಜೆ ಕೇಳಿಕೊಂಡಿದ್ದಾರೆ. ಮೃತ ಪ್ರಕಾಶ್‌ ಅವರು ಬಿಜೆಪಿ ಕಾರ್ಯಕರ್ತರಾಗಿದ್ದು, ಪ್ರಚಾರ ಸಭೆಗೆ ಹೋಗುವುದಾಗಿ ಕುಟುಂಬ ಸದಸ್ಯರಿಗೆ ಹೇಳಿ ದೇವಸಂದ್ರಕ್ಕೆ ಬಂದಿದ್ದರು. '' ಸಹೋದರ ಪ್ರಕಾಶ್‌ ಆರೋಗ್ಯವಾಗಿದ್ದ. ಅವಘಡದಲ್ಲಿ ಈಗ ಮೃತಪಟ್ಟಿದ್ದಾನೆ, ಎಂದು ಮೃತರ ತಂಗಿ ಶಾಂತಾ ಮೇರಿ ಕಣ್ಣೀರಿಟ್ಟಿದ್ದಾರೆರಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkaarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.