ಪ್ರಿಯಾಂಕಾ ಚೋಪ್ರಾ ಜೊತೆ ಮಾತಾನಾಡಲು ಮುಂಬೈ ಮನೆಯ ಬೇಲಿ ಹಾರಿದ ಯುವಕ

ತನ್ನ ಅಭಿನಯದಿಂದಲೆ ನೋಡುಗರ ಮನ ಗೆದ್ದಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಅವರು ರಾಜಮೌಳಿ ನಿರ್ದೇಶನದ ಸಿನಿಮಾಗೂ ನಾಯಕಿ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಪ್ರಿಯಾಂಕಾ ಅವರ ಜೀವನದಲ್ಲಿ ಹಲವು ಇಂಟರೆಸ್ಟಿಂಗ್ ಘಟನೆಗಳಿವೆ.
ಅವುಗಳ ಬಗ್ಗೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ಇನ್ನೂ ಶಾಲಾ ಬಾಲಕಿ ಆಗಿದ್ದಾಗ ಅವರನ್ನು ಫಾಲೋ ಮಾಡಿಕೊಂಡು ಹುಡುಗರು ಬರುತ್ತಿದ್ದರು. ಒಬ್ಬನಂತೂ ಮನೆ ಬೇಲಿ ಹಾರಿ ಬಂದಿದ್ದ. ಅಷ್ಟು ಕ್ರೇಜ್ ಹುಟ್ಟಿಸುವ ಹುಡುಗಿ ಆಗಿದ್ರಂತೆ ಇವರು.
ಪ್ರಿಯಾಂಕಾ ಚೋಪ್ರಾ ಅವರು 4 ವರ್ಷ ಅಮೆರಿಕದಲ್ಲಿ ಇದ್ದು ಬಂದಿದ್ದರು. ಅವರ ಹಾವ-ಭಾವ, ಭಾಷೆ ಎಲ್ಲವೂ ಬದಲಾಗಿತ್ತು. ಅದರಿಂದ ಹುಡುಗರು ಆಕರ್ಷಿತರಾಗುತ್ತಿದ್ದರು. ಆ ದಿನಗಳನ್ನು ಈಗ ತಾಯಿ ಮಧು ಚೋಪ್ರಾ ನೆನಪಿಸಿಕೊಂಡಿದ್ದಾರೆ. ಪ್ರಿಯಾಂಕಾ ಅಮೆರಿಕದಿಂದ ಬರೇಲಿಗೆ ಬಂದಾಗ ಆಕೆಯ ಡ್ರೆಸ್ಸಿಂಗ್ ಸೆನ್ಸ್ ಭಿನ್ನವಾಗಿತ್ತು. ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದಳು.
ಕಾನ್ವೆಂಟ್ ಶಾಲೆಗೆ ಅವಳನ್ನು ಕಳಿಸಿದ್ದೆವು. ಒಬ್ಬಳೆ ಹೊರಗೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದೆವು. ನಮ್ಮ ಕಾರನ್ನು ಹುಡುಗರು ಫಾಲೋ ಮಾಡುತ್ತಿದ್ದರು ಎಂದಿದ್ದಾರೆ ಮಧು ಚೋಪ್ರಾ.ನಮಗೆ ಇದೆಲ್ಲ ಸುರಕ್ಷಿತ ಅಲ್ಲ ಅನಿಸಲು ಶುರುವಾಯಿತು. ಅವಳನ್ನು ಆರ್ಮಿ ಶಾಲೆಗೆ ಸೇರಿಸಲು ತಂದೆ ನಿರ್ಧರಿಸಿದರು. ಇದೆಲ್ಲದರ ನಡುವೆ ಒಬ್ಬ ಹುಡುಗ ಬೇಲಿ ಹಾರಿ ಮನೆಯ ಒಳಗೆ ಬಂದು ಬಿಟ್ಟಿದ್ದರು. ಆ ಘಟನೆ ಭಯಾನಕವಾಗಿತ್ತು. ಮರುದಿನವೇ ಇಡೀ ಮನೆಯನ್ನು ದೊಡ್ಡ ಸರಳುಗಳಿಂದ ಮುಚ್ಚಿದೆವು ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.