ಅನೈತಿಕ ಸಂಬಂಧಕ್ಕೆ ಮುದ್ದಾದ ಪತ್ನಿಯನ್ನು ಕೊಂ.ದು ಬಾವಿಗೆ ಹಾಕಿದ ಗಂಡ

 | 
ಲರಸಹರ

ಮಂಗಳೂರಿನಲ್ಲಿ ನಿನ್ನೆ ವಿವಾಹಿತ ಮಹಿಳೆಯ ಶವ ಬಾವಿಯಲ್ಲಿ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ ಸಿಕ್ಕಿದೆ. ಮದುವೆಯಾಗಿ ಮಕ್ಕಳಿದ್ದರೂ ತನ್ನ ಗಂಡ ಬೇರೊಂದು ಯುವತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದನ್ನು ಪ್ರಶ್ನಿಸಿದ ಪತ್ನಿಯ ಮೇಳೆ ಹಲ್ಲೆ ಮಾಡಿ, ನಂತರ ಬಾವಿಗೆ ಬೀಸಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳಾಲು ಗ್ರಾಮದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಚಾರ್‌ನ ಜ್ಯೋತಿ ನಗರದ ಬಾವಿಯೊಂದಲ್ಲಿ ಗೃಹಿಣಿಯ ಶವ ಪತ್ತೆಯಾಗಿತ್ತು. ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸ್ಥಳೀಯರು ಹೇಳಿದ್ದರು. ಆದರೆ, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹವನ್ನು ಹೊರತೆಗೆದು ಪರಿಶೀಲನೆ ಮಾಡಿದ್ದರು. 

ನಂತರ ಸಾವಿಗೆ ಕಾರಣವೇನೆಂದು ತನಿಖೆ ಮಾಡಿದಾಗ ಗಂಡನೇ ತನ್ನ ಹೆಂಡತಿಯನ್ನು ಬಾವಿಗೆ ಬೀಸಾಡಿ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಹೌದು, ಜೀವನಪೂರ್ತಿ ಕಷ್ಟ ಸುಖದಲ್ಲಿ ಜೊತೆಯಾಗಿರುವುದಾಗಿ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡನೇ ಹೆಂಡತಿಯ ಕೊಲೆ ಮಾಡಿದ್ದು ಬಯಲಾಗಿದೆ. ಅನೈತಿಕ ಸಂಬಂಧದ ವಿಚಾರವಾಗಿ ಹೆಂಡತಿಯನ್ನು ಬಾವಿಗೆ ಎಸೆದು ಕೊಲೆ ಮಾಡಿದ ಘಟನೆ ನಡೆದಿದೆ. 

ಶಶಿಕಲಾ  ಶವ ನಿನ್ನೆ ಮನೆ ಬಳಿಯ ಬಾವಿಯಲ್ಲಿ ಪತ್ತೆಯಾಗಿತ್ತು. ಬೆಳಾಲು ಗ್ರಾಮದ ಮಾಚಾರಿನ ಜ್ಯೋತಿ ನಗರದಲ್ಲಿ ನಡೆದಿತ್ತು. ಈ ಕುರಿತಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಮೃತ ಶಶಿಕಲಾಳ ಗಂಡ ಸುಧಾಕರನಿಗೆ ಬೇರೊಂದು ಯುವತಿ ಜೊತೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಗಾಗ ಇಬ್ಬರ ಮಧ್ಯೆ ಜಗಳವೂ ಆಗುತ್ತಿತ್ತು. 

ಶುಕ್ರವಾರವೂ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಆಗ ಗಂಡ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆ. ಆದರೆ, ಆಕೆ ಸಾವನ್ನಪ್ಪದೇ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಗ ತನ್ನ ಹೆಂಡತಿಯದ್ದು ಆತ್ಮಹತ್ಯೆ ಎಂದು ಬಿಂಬಿಸುವ ದೃಷ್ಟಿಯಿಂದ ಪ್ರಜ್ಞೆ ತಪ್ಪಿದ್ದ ಹೆಂಡತಿಯನ್ನು ಎತ್ತಿಕೊಂಡು ಹೋಗಿ ಮನೆಯ ಬಳಿಯ ಬಾವಿಯಲ್ಲಿ ಬೀಸಾಡಿದ್ದಾನೆ. ನಂತರ ಕೊಲೆ ಆರೋಪ ತನ್ನ ಮೇಲೆ ಬರಬಾರದೆಂದು ಸ್ಥಳದಿಂದ ಪರಾರಿ ಆಗಿದ್ದನು. 

ಪೊಲೀಸ್‌ ತನಿಖೆಯಿಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಪೊಲೀಸರ ವಶದಲ್ಲಿದ್ದಾನೆ.
ಅಷ್ಟಕ್ಕೂ ಸುಧಾಕರ್‌ ಹಾಗೂ ಶಶಿಕಲಾ ಕಳೆದ 7 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿದ್ದರು. ಮೊದಲು ಮನೆಯವರ ವಿರೋಧವಿದ್ದರೂ, ಅವರನ್ನು ಒಪ್ಪಿಸಿ ಮದುವೆಯೂ ಆಗಿದ್ದರು. ಆರಂಭದಲ್ಲಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದ ದಂಪತಿಗೆ ಒಂದು ವರ್ಷದಲ್ಲಿಯೇ ಹೆಣ್ಣು ಮಗು ಜನಿಸಿತ್ತು. 

ಆದರೆ, ಕಳೆದೊಂದು ವರ್ಷದಿಂದ ಗಂಡನಿಗೆ ಮತ್ತೆ ಯುವತಿಯರ ಶೋಕಿ ಶುರುವಾಗಿತ್ತು. ಹೀಗಾಗಿ, ಮದುವೆಯಾಗಿ ಮನೆಯಲ್ಲಿ ಮಡದಿ ಹಾಗೀ 6 ವರ್ಷದ ಮಗಳಿದ್ದರೂ ಬೇರೊಂದು ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ಬಗ್ಗೆ ಮನೆಯಲ್ಲಿ ಹೆಂಡತಿ ಪ್ರಶ್ನೆ ಮಾಡಿದ್ದರಿಂದ ಈಗ ಕೊಲೆಯಾಗಿ ಹೋಗಿದ್ದಾಳೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.