ಮಂಡ್ಯ ರಾಜಕೀಯದಲ್ಲಿ ತಲ್ಲಣ, ಸುಮಲತಾ ಹೊಸ ತಂತ್ರಕ್ಕೆ ಕುಮಾಣ್ಣ ಫಿದಾ

 | 
J

ಮಂಡ್ಯದ ಸೊಸೆ ಸುಮಲತಾಗೆ ಮೋಸ ಹೌದು ಮದ್ದೂರಿನ ಮಾಜಿ ಶಾಸಕ ದೇವೇಗೌಡರ ಸಂಬಂಧಿಕ ಡಿ.ಸಿ.ತಮ್ಮಣ್ಣ ನಿಖಿಲ್ ಕುಮಾರಸ್ವಾಮಿಯ ಸ್ಪರ್ಧೆಯ ಸುಳಿವು ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರೆ ಅನ್ನೋ ಸುಳಿವು ಸುಮಲತಾರಿಗೂ ಸಿಕ್ಕಿದೆ ಅನ್ನಿಸುತ್ತಿದೆ. ಮೈತ್ರಿ ಭಾಗವಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುತ್ತೆ ಎಂಬ ವಿಷಯ ಗೊತ್ತಾಗ್ತಿದ್ದಂತೆ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ವರಿಷ್ಠರನ್ನ ಭೇಟಿಯಾಗಿದ್ದಾರೆ ಎನ್ನಲಾಗಿದೆ. 

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿಎಲ್​ ಸಂತೋಷ್  ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಸುಮಲತಾ ಅಂಬರೀಶ್ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಮಂಡ್ಯ ಟಿಕೆಟ್​​ ವಿಷಯದಲ್ಲೇ ಚರ್ಚೆ ಮಾಡಿದ್ದು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು ಅಂತ ಅರ್ಜಿ ಹಾಕಿದ್ದಾರೆ ಅಂತ ಗೊತ್ತಾಗಿದೆ.

ಕಳೆದ ವಾರವಷ್ಟೇ ಸುಮಲತಾ ಬೆಂಗಳೂರು ನಿವಾಸದಲ್ಲಿ ಮಂಡ್ಯ ಬೆಂಬಲಿಗರ ಸಭೆ ನಡೆಸಿದ್ದರು. ಆಗ ಬಿಜೆಪಿ ನಾಯಕ ಮಾಜಿ ಸಚಿವ ನಾರಾಯಣಗೌಡರು ಬಂದಿದ್ದರು. ಸುಮಲತಾಗೆ ಬಿಜೆಪಿ ಟಿಕೆಟ್​ ಕೊಡಬೇಕು ಎಂದು ಹೇಳಿದ್ದರು.ಆದ್ರೀಗ ಸುಮಲತಾರಿಗೆ ಬಿಜೆಪಿ ಟಿಕೆಟ್​ ಸಿಗುತ್ತಾ ಇಲ್ವಾ ಖಾತರಿಯಿಲ್ಲ. ಇದರ ಮಧ್ಯಯೇ ನಾರಾಯಣಗೌಡರು ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ. 

ಸುಮಲತಾಗೆ ಬಿಜೆಪಿ ಟಿಕೆಟ್​ ಮಿಸ್​ ಆದ್ರೇ ಕಾಂಗ್ರೆಸ್​​ನಿಂದ ಟಿಕೆಟ್​​ ಕೊಡಿಸೋಕೆ ಲಾಬಿ ನಡೆಸಿದ್ರಾ ಅನ್ನೋ ಚರ್ಚೆ ಶುರುವಾಗಿದೆ. ಇನ್ನು ಕೆಲ ಮೂಲಗಳ ಪ್ರಕಾರ ಸುಮಲತಾ ಜೆಡಿಎಸ್ ಸೇರುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಅದೂ ಕೂಡ ಸುಳ್ಳು ಎಂದು ಸಾಬೀತಾಗಿದೆ. ಸುಮಲತಾ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಲಿದೆ ಎಂಬ ಕುರಿತು ಮಂಡ್ಯ ಜೆಡಿಎಸ್‌ನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಸರ್ವೆ ವರದಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಂತರೆ ಮಂಡ್ಯದಲ್ಲಿ ಗೆಲುವು ಫಿಕ್ಸ್ ಎಂದು ರಿಪೋರ್ಟ್ ಬಂದಿದೆ. 

ಇದರಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಳಪತಿಗಳು ಪಕ್ಷ ಸಂಘಟನೆಯ ಕೆಲಸ ಆರಂಭಿಸಿದ್ದಾರೆ. ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಕೂಡ ಒತ್ತಡ ಹೇರುತ್ತಿದೆ ಎಂದು ತಿಳಿದುಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.