ಮಂಗಳೂರು ಅವಿನಾಶ್ ಶೆಟ್ಟಿ ಸರಿಯಾಗಿ ಧಳಿಸಿದ ವಿನಯ್, ಕ.ಣ್ಣೀರಿಟ್ಟ ಕರಾವಳಿ ಜನರು

 | 
Jb

ಸದ್ಯ ಕನ್ನಡಿಗರ ಕಣ್ಣು ಕಿರುತೆರೆಯಲ್ಲಿ ಮೂಡಿಬರುತ್ತಿರುವ ಬಿಗ್​ ಬಾಸ್ ಸೀಸನ್​ 10ರ ಮೇಲಿದೆ. ದೊಡ್ಮನೆಯ ವಾತಾವರಣ ವೀಕ್ಷಕರನ್ನು ಕುತೂಹಲತೆಗೆ ಕರೆದೊಯ್ದಿದೆ. ಅದರಲ್ಲೂ ಸ್ಪರ್ಧಿಗಳ ಜಗಳ ಕಿತ್ತಾಟ ಟಿವಿ ಪರದೆ ಮುಂದೆ ಹಾಗೆಯೇ ಕುಳ್ಳಿರಿಸುವಂತೆ ಮಾಡಿದೆ. ಅದರಂತೆಯೇ ಇಂದಿನ ಎಪಿಸೋಡ್​ ಕೂಡ ಅದಕ್ಕೆ ಸಾಕ್ಷಿಯಾಗಲಿದೆ ಎಂಬುದನ್ನು ಇಂದಿನ ಪ್ರೊಮೊವೇ ಸಾಕ್ಷಿ ಹೇಳಿದೆ.

ಹೌದು. ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಏನಾದರೊಂದು ಟಾಸ್ಕ್​ ನೀಡುತ್ತಾರೆ. ಅದರಂತೆಯೇ ಈ ಬಾರಿ ಮೀಸಲಿರುವ ಬಟ್ಟೆಗಳನ್ನು ಎದುರಾಳಿ ತಂಡದಿಂದ ರಕ್ಷಿಸಿ ಬಣ್ಣತಾಗದಂತೆ ಶುಭ್ರವಾಗಿ ಇಡುವ ಟಾಸ್ಕ್​ ಅನ್ನು ನೀಡಿದ್ದಾರೆ. ಆದರೆ ಈ ಟಾಸ್ಕ್​ನಲ್ಲಿ ವಿನಯ್​ ಮತ್ತೆ ತಮ್ಮ ಹಳೆಯ ವರ್ತನೆಯನ್ನು ತೋರಿಸಿದ್ದಾರೆ. ವೈಲ್ಡ್​ ಕಾರ್ಡ್​ ಎಂಟ್ರಿ ನೀಡಿದ್ದ ಅವಿನಾಶ್​ ಮತ್ತು ವಿನಯ್​ಗೆ ಟಾಸ್ಕ್​ ವಿಚಾರದಲ್ಲಿ ಕಿತ್ತಾಟ ನಡೆದಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಅವಿನಾಶ್ ಶೆಟ್ಟಿ ಈಗ ವೈಲ್ಡ್ ಆಗಿರುವ ರೀತಿ ಇದೆ. ಈ ಬಾರಿ ಆಟ ಗೆಲ್ಲೋದು ತುಂಬ ಮುಖ್ಯ. ಹೀಗಾಗಿ ಸ್ಪರ್ಧಿಗಳು ಹಠಕ್ಕೆ ಬಿದ್ದು ಆಟ ಆಡಲು ಆರಂಭಿಸಿದ್ದರು. ವಿನಯ್ ಗೌಡ ಹಾಗೂ ಅವಿನಾಶ್ ಶೆಟ್ಟಿ ಇಬ್ಬರೂ ಬೇರೆ ಬೇರೆ ತಂಡದಲ್ಲಿದ್ದಾರೆ. ಇದರ ಜೊತೆಗೆ ಇವರಿಬ್ಬರು ಟಾಸ್ಕ್ ವಿಚಾರವಾಗಿ ಅಗ್ರೆಸ್ಸಿವ್ ಆಗಿ ಆಟ ಆಡಿದ್ದಾರೆ.

ಅವಿನಾಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಅಗ್ರೆಸ್ಸಿವ್ ಅಗಿದ್ದಾರೆ. ವಿನಯ್ ಆನೆ ಆದರೆ ನಾನು ಮಾವುತ ಆಗ್ತೀನಿ ಅಂತ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಅವಿನಾಶ್ ಶೆಟ್ಟಿ ಈ ಬಾರಿ ಮಾವುತ ಆಗೋಕೆ ಹೊರಟಿದ್ದರು. ಕಿತ್ತಾಟದ ಜೊತೆಗೆ ವಿನಯ್​ ತನ್ನ ಎದುರಾಳಿ ಸ್ಪರ್ಧಿ ಅವಿನಾಶ್​​ ಅನ್ನು ಕೈಯಿಂದ ದೂಡಿದ್ದಾರೆ. ಅತ್ತ ಕಾರ್ತಿಕ್​ ಕೂಡ ಮೈಕಲ್​ನನ್ನು ದೂಡಿದ್ದಾರೆ. 

ಬಿಗ್ ಬಾಸ್ ಮನೆಗೆ ಬಂದ ಅವಿನಾಶ್ ಈ ಬಾರಿ ನಾಮಿನೇಟ್ ಕೂಡ ಆಗಿದ್ದಾರೆ. ಅವಿನಾಶ್ ಶೆಟ್ಟಿ ಅವರು ಈ ವಾರ ಉಳಿದುಕೊಳ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.