ಮಂಗಳೂರು ಸುಂದರಿ ಮಾನ್ವಿತಾ ಕಾಮತ್ ಮದುವೆ ಫಿಕ್ಸ್; ವರ ಯಾರು ಗೊ.ತ್ತಾ

 | 
Yuu

ಸ್ಯಾಂಡಲ್‌ವುಡ್‌ನ ಟಗರು ಚಿತ್ರ ಖ್ಯಾತಿಯ ನಟಿ ಮಾನ್ವಿತಾ ಕಾಮತ್  ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾರಂಗಕ್ಕೆ ಹತ್ತಿರ ಇರೋ ಮೈಸೂರು ಮೂಲದ ಅರುಣ್ ಜೊತೆಗೆ ವೈವಾಹಿಕ ಜೀವನಕ್ಕೆ ಮಾನ್ವಿತಾ ಹೆಜ್ಜೆ ಇಡುತ್ತಿದ್ದಾರೆ. ಈ ಮದುವೆಯ ಆಮಂತ್ರಣ ಪತ್ರಿಕೆಯನ್ನ ಇದೀಗ ಸ್ವತಃ ಮಾನ್ವಿತಾ ಕಾಮತ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲೂ ಹಂಚಿಕೊಂಡಿದ್ದಾರೆ.

 ಈ ಡಿಜಿಟಲ್ ಆಮಂತ್ರಣ ಪತ್ರಿಕೆ  ತುಂಬಾನೆ ಕ್ರಿಯೇಟಿವ್ ಆಗಿದೆ. ಮಾನ್ವಿತಾ ಮದುವೆ ಆಗೋ ಹುಡುಗನ ಕೆಲಸ ಏನು ಅನ್ನೋದು ಕೂಡ ಇಲ್ಲಿ ರಿವೀಲ್ ಆಗಿದೆ. ಮಾನ್ವಿತಾ ಒಬ್ರು ನಟಿ ಅನ್ನೋದನ್ನ ಇಲ್ಲಿ ತುಂಬಾನೆ ಚೆನ್ನಾಗಿ ತೋರಿದ್ದಾರೆ. ಸ್ಯಾಂಡಲ್‌ವುಡ್‌ನ ಕೆಂಡಸಂಪಿಗೆ ನಟಿ ಮಾನ್ವಿತಾ ಕಾಮತ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಹೌದು, ಮಾನ್ವಿತಾ ಕಾಮತ್ ಈಗ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. 

ಅವರ ಮದುವೆ ದಿನಾಂಕ ಕೂಡ ನಿಗದಿಯಾಗಿದ್ದು, ಮದುವೆಗೆ ಸಂಬಂಧಿಸಿದ ತಯಾರಿಗಳು ಬಿರುಸಿನಿಂದ ಸಾಗಿವೆ. ಅಂದಹಾಗೆ, ಮಾನ್ವಿತಾರನ್ನು ಕೈಹಿಡಿಯುತ್ತಿರುವ ವರ ಯಾರು? ಅರುಣ್ ಕುಮಾರ್. ಹೌದು, ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ ಅರುಣ್ ಕುಮಾರ್ ಅವರು ಮಾನ್ವಿತಾ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ.

ನಟಿ ಮಾನ್ವಿತಾ ಮತ್ತು ಅರುಣ್ ಕುಮಾರ್ ಅವರ ವಿವಾಹವು ಮೇ 1ರಂದು ಮಂಗಳೂರಿನಲ್ಲಿ ಜರುಗಲಿದೆ. ಹಳದಿ ಶಾಸ್ತ್ರವು ಏಪ್ರಿಲ್‌ 29ರಂದು ನಡೆಯಲಿದೆ ಮತ್ತು ಸಂಗೀತ್ ಶಾಸ್ತ್ರವು ಏಪ್ರಿಲ್ 30ರಂದು ನಡೆಯಲಿದೆ. ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಮಾನ್ವಿತಾ ಮತ್ತು ಅರುಣ್ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.