ತುಕಾಲಿ ಸಂತು ಮುಖಕ್ಕೆ ಹಿಗ್ಗಾಮುಗ್ಗಾ ಬೈದ ಮಂಗಳೂರು ಯುವಕ, ಬೆಚ್ಚಿಬಿದ್ದ ಪ್ರೇಕ್ಷಕರು

 | 
Bbv

ಕಾಮಿಡಿ ನಟ ತುಕಾಲಿ ಸಂತೋಷ್​ ಅವರು ಬಿಗ್​ ಬಾಸ್​ ಕನ್ನಡ ಸೀಸನ್​ 10 ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಈ ರೀತಿ ಹೆಸರು ಇಟ್ಟುಕೊಂಡಿದ್ದರ ಬಗ್ಗೆ ಅನೇಕರಿಗೆ ಕೌತುಕ ಇದೆ. ಆ ಬಗ್ಗೆ ಅವರು ಓಪನಿಂಗ್​ ಸಂಚಿಕೆಯಲ್ಲೇ ಮಾಹಿತಿ ನೀಡಿದರು. ಒಂದು ಸ್ಕಿಟ್​ನಲ್ಲಿ ತುಕಾಲಿ ಎಂಬ ಪಾತ್ರ ಮಾಡಿದ ಬಳಿಕ ಅವರ ಹೆಸರಿನ ಜೊತೆ ಆ ವಿಶೇಷಣ ಸೇರಿಕೊಂಡಿತು. 

ಈಗ ಬಿಗ್​ ಬಾಸ್​ ಕೂಡ ಈ ಹೆಸರಿನ ಬಗ್ಗೆ ತಕರಾರು ತೆಗೆದಿದ್ದಾರೆ.ಮೊದಲ ಪದ ಕರೆಯಲು ಅಷ್ಟಾಗಿ ಚೆನ್ನಾಗಿರುವುದಿಲ್ಲ ಎಂಬ ಭಾವನೆ ಬಿಗ್ಬಾಸ್ ಹೊರಹಾಕಿದ್ದಾರೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಮೊದಲ ವಾರದ ಪಂಚಾಯಿತಿಯಲ್ಲಿ ಡ್ರೋಣ್‌ ಪ್ರತಾಪ್‌ ಪರ ಕಿಚ್ಚ ಸುದೀಪ್‌ ಅವರು ನಿಂತರು. ಡ್ರೋಣ್‌ ಪ್ರತಾಪ್‌ ವಿಚಾರದಲ್ಲಿ ತುಕಾಲಿ ಸಂತು ಅವರಿಗೆ ಸುದೀಪ್‌ ಕ್ಲಾಸ್‌ ತೆಗೆದುಕೊಂಡು, ವ್ಯಕ್ತಿತ್ವದ ಕೊಲೆ ಮಾಡೋದು ಸರಿಯಲ್ಲ. 

ಇನ್ನೊಬ್ಬ ವ್ಯಕ್ತಿಯ ಅಳು ನಮ್ಮ ನಗು ಯಾವಾಗ ಆಯ್ತು, ಅದೇಗೆ ಇನ್ನೊಬ್ಬರ ನೋವು ನಮ್ಮ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಭಗವಂತ, ತಪ್ಪಿತಸ್ಥ, ಸಮಾಜದ ಕಥೆ ಹೇಳುವ ಮೂಲಕ ಬಿಗ್‌ ಬಾಸ್‌ ಮನೆಯಲ್ಲಿ ಡ್ರೋಣ್‌ ಪ್ರತಾಪ್‌ ಪರಿಸ್ಥಿತಿಯನ್ನು ವಿವರಿಸಿದ ಕಿಚ್ಚ ಸುದೀಪ್‌ ತುಕಾಲಿ ಸಂತು ಅವರಿಗೆ ಇನ್ನೊಬ್ಬ ವ್ಯಕ್ತಿಯನ್ನು ತಮಾಷೆ ಮಾಡಿ ನಗಿಸೋದು ಜೋಕರ್‌ ಅಲ್ಲ, ಬ್ಯಾಟ್‌ಮ್ಯಾನ್‌ ಜೋಕರ್‌ ಎಂದು ಹೇಳಿದರು.

ಅದಲ್ಲದೇ ನೀವೇ ತಪ್ಪು, ಸುಳ್ಳು ಹೇಳೋದ್ರಲ್ಲಿ 10ಕ್ಕೆ ಎರಡು ಅಂಕ ಕೊಟ್ಟುಕೊಂಡಿದೀರಿ, ಅದ್ಹೇಗೆ ಬೇರೆಯವರ ಬಗ್ಗೆ ಮಾತಾಡ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಭಗವಂತ, ತಪ್ಪಿತಸ್ಥ, ಸಮಾಜದ ಕಥೆ ಹೇಳಿ ಇದು ನಿಮ್ಮ ಮನೆಯಲ್ಲಿ ಯಾರಿಗೆ ಅನ್ವಯ ಆಗುತ್ತದೆ ಎಂದು ಕಿಚ್ಚ ಸುದೀಪ್‌ ಪ್ರಶ್ನಿಸಿದಾಗ ತುಕಾಲಿ ಸಂತು ಉತ್ತರಿಸಲು ತಡಕಾಡಿದರು. ಇನ್ನು ಡ್ರೋನ್ ಪ್ರತಾಪ್ ಗುರಿಯಾಗಿಸಿಕೊಂಡು ತುಕಾಲಿ ಸಂತೋಷ್ ಮಾಡಿದ್ದು ಸರಿಯಲ್ಲ ಎಲ್ಲರಿಗೂ ಮನಸ್ಸಿರುತ್ತದೆ ಎಂದು ಮಂಗಳೂರಿನ ವ್ಯಕ್ತಿಯೊಬ್ಬ ಕಿಡಿಕಾರಿದ್ದಾರೆ.

ನೀವು ಎಷ್ಟೇ ದೊಡ್ಡ ಹಾಸ್ಯ ನಟ ಇರಬಹುದು ಆದರೆ ಇನ್ನೊಬ್ಬರನ್ನು ಅಡಿಕೊಳ್ಳಬೇಡಿ ಅವರು ಸುಳ್ಳು ಹೇಳಿರಬಹುದು, ತಪ್ಪು ಮಾಡಿರಬಹುದು ಅದರ ಹೊರತಾಗಿ ಅವರು ಮನುಷ್ಯರು. ಹಾಗಾಗಿ ಮನುಷ್ಯ ರ ರೀತಿಯಲ್ಲಿ ಕಾಣಿ ಎಂದು ಯೂಟ್ಯೂಬ್ ನಲ್ಲಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.