ಕನ್ನಡ ಧಾರಾವಾಹಿಯಲ್ಲಿ ದೈವ ನರ್ತನ, ಒಮ್ಮೆಲೇ ಸಿಡಿದೆದ್ದ ಮಂಗಳೂರಿನ ದೈವ ಭಕ್ತರು

 | 
Jj

ಧಾರಾವಾಹಿಗಳಲ್ಲಿ ದೈವ ಶೂಟಿಂಗ್ ಮಾಡಿ ಇತ್ತಿಚಿಗೆ ಕಷ್ಟಕ್ಕೆ ಒಳಗಾಗಿದ್ದಾರೆ.ಇತ್ತೀಚಿಗೆ ದೈವಾರಾಧನೆಯನ್ನು ಮನೋರಂಜನೆಗೆ ಬಳಸಲಾಗುತ್ತಿದೆ ಎನ್ನುವ ಆರೋಪವನ್ನು ದೈವಾರಾಧಕರು ಮಾಡುತ್ತಿದ್ದು, ಇದು ನಿಜ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ತುಳುನಾಡಿನ ಜನರ ನಂಬಿಕೆಯನ್ನು ಮನೋರಂಜನೆ ಬಳಸಲಾಗುತ್ತಿದೆ. ನೃತ್ಯಗಳಲ್ಲಿ, ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ, ಧಾರಾವಾಹಿಗಳಲ್ಲಿ ಮನಬಂದಂತೆ ಬಳಸಿಕೊಳ್ಳಲಾಗುತ್ತಿದ್ದು, ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ಖಾಸಗಿ ಚಾನೆಲ್‌ನ ಧಾರವಾಹಿವೊಂದರಲ್ಲಿ ದೈವಾರಾಧನೆಯ ಪ್ರದರ್ಶನ ಮಾಡಲಾಗಿದ್ದು, ದೈವಾರಾಧಕರು ಧಾರವಾಹಿ ತಂಡದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮೀಡಿಯಂ ಧಾರವಾಹಿಯಲ್ಲಿ ದೈವಾರಾಧನೆಯ ಪ್ರದರ್ಶನ ಮಾಡಲಾಗಿದೆ. ದೈವಾರಾಧನೆಯನ್ನು ಬಳಸಿಕೊಂಡು ಮಾಡಿರುವ ಚಿತ್ರೀಕರಣದ ಪ್ರೋಮೋ ಕೂಡ ವೈರಲ್‌ ಆಗಿದೆ.

ಈ ಹಿನ್ನೆಲೆಯಲ್ಲಿ ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಸ್ಥೆ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಮತ್ತು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ದೈವದ ಪಾತ್ರ ಮಾಡಿದ ಪ್ರಶಾಂತ್ ಸಿಕೆ ವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ದೈವಾರಾಧನೆಯ ಚಿತ್ರೀಕರಣ ಪ್ರಸಾರ ಮಾಡದಂತೆ ತಡೆಯುವಂತೆ ದೈವಾರಾಧಕರು ದೂರು ನೀಡಿದ್ದಾರೆ.

ದೈವದ ವೇಷಭೂಷಣ ತೊಟ್ಟು ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಛದ್ಮ ವೇಷದಂತೆ ದೈವದ ವೇಷ ತೊಟ್ಟು ನಂಬಿಕೆಗೆ ಅವಮಾನ ಮಾಡಲಾಗುತ್ತಿದೆ. ದೈವಾರಾಧನೆ ಮಾಡುವ ಸಮುದಾಯದವರಿಗೂ ಅನ್ಯಾಯವಾಗುತ್ತಿದೆ. ಹಿಂದೂ ಧಾರ್ಮಿಕ ನಂಬಿಕೆಗಳನ್ನು ಘಾಸಿ ಮಾಡಿದ ಧಾರವಾಹಿ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.