ತ್ರಿವಿಕ್ರಮ್ ಮೇಲೆ ಕೈಮಾಡಿದ ಮಂಜಣ್ಣ, ಮನೆಯಿಂದ ಎಲಿಮಿನೇಟ್ ಆದ ಮಂಜ

 | 
Hz
ಕನ್ನಡದ ಸೂಪರ್ ಡೂಪರ್ ಶೋ ಅಂತಲೇ ಕರೆಸಿಕೊಳ್ಳುವ ಬಿಗ್ಬಾಸ್ ಶೋ ಅಂತಿಮ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿನ್ನರ್ ಯಾರು ಅಂತ ಎಲ್ಲರಿಗೂ ತಿಳಿಯಲಿದೆ. ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿಯುವ ಹಂತ ತಲುಪುತ್ತಿದ್ದಂತೆ ಮನೆಯಲ್ಲಿ ಸ್ಪರ್ಧಿಗಳಿಗೆ ಆಟ ಕಠಿಣವಾಗುತ್ತಿದೆ. ಪ್ರಸ್ತುತ ಮನೆಯಲ್ಲಿ ಒಂಬತ್ತು ಜನ ಮಾತ್ರ ಉಳಿದುಕೊಂಡಿದ್ದು ನೇರ ಜಿದ್ದಾಜಿದ್ದಿ ಶುರುವಾಗಿದೆ. ಪ್ರತಿಯೊಬ್ಬರ ಶಕ್ತಿ, ಸಾಮಾರ್ಥ್ಯ, ಜಾಣ್ಮೆ ಎಲ್ಲವನ್ನೂ ಬಿಗ್ ಬಾಸ್ ಅಳಿಯಲು ಶುರುಮಾಡಿದ್ದಾರೆ. ಹೀಗಾಗಿ ಇನ್ಮುಂದಿನ ಟಾಸ್ಕ್ ಸ್ಪರ್ಧಿಗಳಿಗೆ ಬಿಸಿ ತುಪ್ಪವಾಗಲಿದೆ. 
ಅಂದಹಾಗೆ ಇಂದು ಕಲರ್ಸ್ ಕನ್ನಡ ವಾಹಿನಿ ಬಿಗ್‌ಬಾಸ್‌ ಮನೆಯ ಒಂದು ವೀಡಿಯೋ ಕ್ಲಿಪ್‌ ಅನ್ನು ಹಂಚಿಕೊಂಡಿದೆ. ಇದರಲ್ಲಿ ಫಿನಾಲೆ ಟಿಕೆಟ್‌ಗಾಗಿ ಬಿಗ್‌ಬಾಸ್‌ ಮನೆಯಲ್ಲಿ ಮಾರಾಮಾರಿ ನಡೆದಿದೆ. ಹೌದು... ಇಂದು ಕಲರ್ಸ್‌ ಕನ್ನಡ ವಾಹಿನಿ ವೀಡಿಯೋವೊಂದನ್ನು ಹಂಚಿಕೊಂಡಿದೆ. ಈ ವೀಡಿಯೋ ಅದ್ಭುತವಾಗಿದೆ. ಈ ವೀಡಿಯೋಕ್ಕೆ 'ಯಾರ ಸ್ಥಾನ ಖಾತರಿ ಯಾರ ಸ್ಥಾನಕ್ಕೆ ಕತ್ತರಿ' ಎನ್ನುವ ಕ್ಯಾಪ್ಶನ್ ಕೂಡ ನೀಡಲಾಗಿದೆ. ಈ ವೀಡಿಯೋದಲ್ಲಿ ಬಿಗ್‌ಬಾಸ್‌ 'ಸ್ಪರ್ಧಿಗಳಿಗೆ ಸರಣಿ ಆಟ ಶುರುವಾಗುತ್ತದೆ. ಯಾರು ಆಟ ಚೆನ್ನಾಗಿ ಆಡ್ತಾರೆ ಅವರು ಫಿನಾಲೆಗೆ ಹೋಗಬಹುದು. ಆಟ ಚೆನ್ನಾಗಿ ಆಡದೇ ಇರುವವರು ಫಿನಾಲೆಯಲ್ಲಿ ಭಾಗವಹಿಸುವುದನ್ನು ಕಳೆದುಕೊಳ್ಳುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸ್ನೇಹಿತರೇ..ಇದಕ್ಕಾಗಿ ಟಾಸ್ಕ್‌ವೊಂದನ್ನು ಬಿಗ್‌ಬಾಸ್‌ ಮನೆಯ ಎಲ್ಲಾ ಸ್ಪರ್ಧಿಗಳಿಗೆ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ಗೌತಮಿ ವಿರುದ್ಧ ಭವ್ಯಾ, ಹನುಮಂತು ವಿರುದ್ಧ ಧನ್‌ರಾಜ್, ಚೈತ್ರಾ ವಿರುದ್ಧ ಮೋಕ್ಷಿತಾ, ಉಗ್ರಂ ಮಂಜು ವಿರುದ್ಧ ತ್ರಿವಿಕ್ರಮ್ ಅವರು ಆಟ ಆಡುತ್ತಿದ್ದಾರೆ. ಈ ಆಟ ತುಂಬಾ ಚೆನ್ನಾಗಿದ್ದು, ಪ್ರತಿಯೊಬ್ಬ ಸ್ಪರ್ಧಿಗಳ ಶಕ್ತಿ ಹಾಗೂ ಜಾಣ್ಮೆಯನ್ನು ತೋರಿಸುತ್ತದೆ.
ಸ್ನೇಹಿತರೇ...ಫಿನಾಲೆ ಟಿಕೆಟ್‌ಗಾಗಿ ಬಿಗ್‌ಬಾಸ್‌ ಮನೆಯಲ್ಲಿ ಬಿಗ್‌ ಫೈಟ್ ಆರಂಭವಾಗಿದೆ.ಟಾಸ್ಕ್ ಏನು ಅಂದರೆ ಒಂದು ಕೈಯಲ್ಲಿ ಕೋಲು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ನೀರು ತುಂಬಿದ ಬಾಟಲಿಯನ್ನು ಹಿಡಿದುಕೊಂಡಿರಬೇಕು. ಕೋಲಿನಿಂದ ಎದುರಾಳಿ ಸ್ಪರ್ಧಿಯ ಬಾಟಲಿಯನ್ನು ಒಡೆದು ನೀರು ಚೆಲ್ಲುವ ಮೂಲಕ ಸ್ಪರ್ಧಿಗಳು ತಮ್ಮ ಕೈಯಲ್ಲಿ ಇರುವ ನೀರು ಕೆಳಗೆ ಚೆಲ್ಲದಂತೆ ನೋಡಿಕೊಳ್ಳಬೇಕು. ಹೀಗೆ ಆಟದ ಕೊನೆಯಲ್ಲಿ ಯಾರ ಕೈಯಲ್ಲಿ ನೀರು ಕೆಳಗೆ ಚೆಲ್ಲದಂತೆ ಉಳಿದಿರುತ್ತೋ ಅವರು ಈ ಆಟದಲ್ಲಿ ಜಯ ಸಾಧಿಸುತ್ತಾರೆ.
ಇನ್ನು ಇನ್ನೂ ವೀಡಿಯೋದಲ್ಲಿ ನೋಡುವುದಾದರೆ ಗೌತಮಿ ವಿರುದ್ಧ ಭವ್ಯಾ ಗೆಲ್ಲಬಹುದು ಎಂದು ಅನಿಸುತ್ತದೆ. ಆ ನಂತರ ಧನ್‌ರಾಜ್ ವಿರುದ್ಧ ಹನುಮಂತ ಗೆಲ್ಲಬಹುದು ಹಾಗೆ ಚೈತ್ರಾ ವಿರುದ್ಧ ಮೋಕ್ಷಿತಾ ಗೆಲ್ಲಬಹುದು ಅನಿಸುತ್ತದೆ. ಇನ್ನೂ ವೀಡಿಯೋದ ಕೊನೆಯಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಪೈಟ್‌ ಮಾಡುವುದು ಕಂಡು ಬರುತ್ತದೆ. 
ಇನ್ನೂ ಈ ಟಾಸ್ಕ್ ಮಾತ್ರ ತುಂಬಾನೇ ಅದ್ಭುತವಾಗಿದೆ. ಪ್ರತಿಯೊಬ್ಬರ ಸಾಮಾರ್ಥ್ಯ ಅರ್ಥವಾಗಲಿದೆ. ಒಟ್ಟಿನಲ್ಲಿ ಯಾರು ಎಷ್ಟು ಬಲಿಷ್ಟರು, ಎಷ್ಟು ಜಾಣರು ಅನ್ನೋದು ಕೂಡ ಈ ಟಾಸ್ಕ್‌ನಿಂದ ಅರ್ಥವಾಗಲಿದೆ. ಹೀಗಾಗಿ ಇಂದಿನ ವೀಡಿಯೋ ಭಾರೀ ಕೂತೂಹಲವನ್ನು ಮೂಡಿಸಿದ್ದು, ಇದರಲ್ಲಿ ಯಾರು ವಿನ್ ಆಗ್ತಾರೆ ಅನ್ನೋದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.