ಬೆಣ್ಣೆಯಂತಹ ಹುಡುಗಿಯನ್ನು ಮದುವೆಯಾದ ಮಂಜು ಪಾವಗಡ
Nov 15, 2024, 07:20 IST
|
ಕನ್ನಡ ಚಿತ್ರರಂಗದಲ್ಲಿ ಈಗ ಮದುವೆಯ ಸಂಭ್ರಮ. ಹೌದು ಲಾವಣ್ಯ, ಚಂದನಾ ಅನಂತಕೃಷ್ಣ, ಮಾನಸಿ ಜೋಷಿ ಹೀಗೆ ಹಲವಾರು ಸೀರಿಯಲ್ ನಟಿಯರು ಮದುವೆ , ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೇ ಕನ್ನಡ ಕಿರುತೆರೆ ನಟ, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಮೂಲದ ನಂದಿನಿ ಜೊತೆ ಮಂಜು ಪಾವಗಡ ಸಪ್ತಪದಿ ತುಳಿದಿದ್ದಾರೆ.
ಬಿಗ್ಬಾಸ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗುರು ಹಿರಿಯರ ಸಮ್ಮುಖದಲ್ಲಿ ಮಂಜು ಮತ್ತು ನಂದಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಪಾವಗಡದಲ್ಲಿ ಮದುವೆ ಸಮಾರಂಭ ನಡೆದಿದೆ. ನಿನ್ನೆ ಮತ್ತು ಇವತ್ತು ಮದುವೆ ಕಾರ್ಯಕ್ರಮಗಳು ನಡೆದವು. ಇದೀಗ ಮಂಜು ಪಾವಗಡ ಮದುವೆ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು, ಗಣ್ಯರು ಶುಭ ಹಾರೈಸುತ್ತಿದ್ದಾರೆ. ಮಂಜು ಅವರ ಕೈಹಿಡಿದ ಹುಡುಗಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾರೆ.
ಹಾಸ್ಯ ನಟನಾಗಿ ಮಂಜು ಪಾವಗಡ ಅವರು ಕಿರುತೆರೆ ವೀಕ್ಷಕರ ನೆಚ್ಚಿನ ನಟರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಸರಳತೆ, ಹಾಸ್ಯ ಪ್ರಜ್ಞೆಯಿಂದಲೇ ಮನೆ ಮಾತಾಗಿರುವ ನಟ ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಇತ್ತೀಚೆಗೆ ಮಂಜು ಪಾವಗಡ ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.
ಇನ್ನು ಆರತಕ್ಷತೆಯಲ್ಲಿ ಕಪ್ಪು ಬಣ್ಣದ ಡಿಸೈನರ್ ಸೂಟ್‌ನಲ್ಲಿ ಮಂಜು ಕಾಣಿಸಿಕೊಂಡರೆ, ಕೆಂಪು ಬಣ್ಣದ ದುಬಾರಿ ಲೆಹೆಂಗಾದಲ್ಲಿ ನಂದಿನಿ ಸೂಪರ್ ಆಗಿ ಮಿಂಚಿದ್ದಾರೆ. ಮಂಜು ಮದುವೆಯಲ್ಲಿ ಗಣ್ಯರು ಭಾಗಿಯಾಗಿದ್ದರು. ಅದರಲ್ಲೂ ರೀಲ್ಸ್ ರೇಶ್ಮಾ ಆಂಟಿ ಮದುವೆ ಸ್ಟೇಜ್ ಮೇಲೂ ಹಾಯ್ ಫ್ರೆಂಡ್ ಇವತ್ತು ಮಂಜು ಮದುವೆ ಎಂದು ಕೂಗುತ್ತಾ ಮಾಡಿರುವ ರೀಲ್ಸ್ ಸಖತ್ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.