ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಂಜು ಪಾವಗಡ, ಇಂಥ ಮದುವೆ ಸ್ಟಾರ್ ನಟರೂ ನೋಡಿಲ್ಲ

 | 
Ji
 ಬಿಗ್ ಬಾಸ್‌ ಕನ್ನಡ ಸೀಸನ್ 8ರ ವಿನ್ನರ್ ಆಗಿದ್ದ ಹಾಸ್ಯ ನಟ ಮಂಜು ಅವರಿಗೆ ಕಂಕಣಭಾಗ್ಯ ಕೂಡಿಬಂದಿದೆ. ಹೌದು, ಸದ್ದಿಲ್ಲದೇ ಮಂಜು ಪಾವಗಡ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ, ಮಂಜು ಪಾವಗಡ ಅವರನ್ನು ಕೈಹಿಡಿಯುತ್ತಿರುವ ವಧು ಯಾರು? ಮದುವೆ ಯಾವಾಗ ಬನ್ನಿ ನೋಡೋಣ.
ಮಜಾ ಭಾರತ', 'ಗಿಚ್ಚಿ ಗಿಲಿ ಗಿಲಿ' ಶೋಗಳ ಮೂಲಕ ಜನಪ್ರಿಯರಾಗಿದ್ದ ನಟ ಮಂಜು ಪಾವಗಡ ಅವರು ಆನಂತರ 'ಬಿಗ್ ಬಾಸ್' ಕನ್ನಡ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು. ಬಳಿಕ ಆ ಸೀಸನ್‌ನಲ್ಲಿ ಮಂಜು ವಿನ್ನರ್ ಆಗಿದ್ದರು. ಸದ್ಯ ಮಂಜು ಪಾವಗಡ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಬಿಗ್ ಬಾಸ್ ವಿಜೇತ ಮಂಜು ಪಾವಗಡ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ಅವರ ಎಂಗೇಜ್‌ಮೆಂಟ್ ನಡೆದಿದೆ.
ಕೆಲ ಕಡೆಗಳಲ್ಲಿ ಮದುವೆಯೂ ನಡೆದಿದೆ ಎಂಬ ಸುದ್ದಿ ಓಡಾಡ್ತಾ ಇದ್ದು ಇದನ್ನು ಅವರು ಅಲ್ಲಗಳೆದಿದ್ದು ನಟ ಮಂಜು ಪಾವಗಡ ಅವರು ನಂದಿನಿ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದರ ಪೂರ್ವಭಾವಿಯಾಗಿ ಈಗ ಎಂಗೇಜ್‌ಮೆಂಟ್ ನಡೆದಿದೆ. ನಂದಿನಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 
ಗುರು-ಹಿರಿಯರು ಒಪ್ಪಿಗೆ ಮೇರೆಗೆ ಈ ಮದುವೆ ಮಾತುಕತೆ ನಡೆದಿದೆಯಂತೆ. ಸದ್ಯ ಮಂಜು ಪಾವಗಡ ಮತ್ತು ನಂದಿನಿ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಆಪ್ತರು, ಹಿತೈಷಿಗಳು ಶುಭ ಹಾರೈಸಿದ್ದಾರೆ.
ಇನ್ನು ಮಂಜು ಪಾವಗಡ ಮತ್ತು ನಂದಿನಿ ಅವರ ಮದುವೆಯು ಪಾವಗಡದಲ್ಲಿ ನಡೆಯಲಿದೆ. ನವೆಂಬರ್ 13 ಮತ್ತು 14ರಂದು ಈ ಕಲ್ಯಾಣ ಜರುಗಲಿದೆ ಎಂದು ಆಪ್ತಮೂಲಗಳು ಮಾಹಿತಿ ಹಂಚಿಕೊಂಡಿವೆ. ಈಚೆಗಷ್ಟೇ ಬೆಂಗಳೂರಿನಲ್ಲಿ ಹೊಸ ಮನೆಯೊಂದರ ಗೃಹಪ್ರವೇಶವನ್ನು ಮಂಜು ಮಾಡಿದ್ದರು. 
ಇದೀಗ ಮತ್ತೊಂದು ಶುಭ ಸುದ್ದಿ ಅವರ ಕಡೆಯಿಂದ ಸಿಕ್ಕಿದೆ. 'ಬಿಗ್ ಬಾಸ್‌' ಶೋನಲ್ಲಿ ತಮ್ಮ ಕಾಮಿಡಿ ಮೂಲಕ ಮಂಜು ಪಾವಗಡ ಎಲ್ಲರನ್ನು ನಕ್ಕು ನಗಿಸಿದ್ದರು. ಅದರ ಪರಿಣಾಮ ಅವರಿಗೆ ವಿನ್ನರ್ ಪಟ್ಟ ಸಿಕ್ಕಿತ್ತು.
ಬೆಂಗಳೂರು ಮೂಲದ ನಂದಿನಿ ಅವರ ಜೊತೆ ಮಂಜು ಪಾವಗಡ ಮದುವೆ ಫಿಕ್ಸ್‌ ಆಗಿದೆ.   ಮಂಜು ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದರು. ಇದೀಗ ಮದುವೆ ಕೂಡ ಫಿಕ್ಸ್‌ ಆಗಿದ್ದು, ಫ್ಯಾನ್ಸ್‌ ಖುಷ್‌ ಆಗಿದ್ದಾರೆ. ಮಂಜು ಪಾವಗಡ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.