ಮಾನ್ವಿತಾ ಕಾಮತ್ ಕೈಹಿಡಿಯಲಿದ್ದಾರೆ ಕೋಟಿಯ ಒಡೆಯ ಅರುಣ್ ಮೈಸೂರ್; ಇದೇ ತಿಂಗಳು ಕನ್ನಡಿಗರಿಗೆ ಹಬ್ಬದೂಟ
ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಅವರು ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ಕೈಹಿಡಿಯುತ್ತಿದ್ದಾರೆ. ಮೇ 1ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸದ ವೆಂಕಟರಮಣ ದೇವಸ್ಥಾನದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಿದೆ.
ಅರುಣ್ ಒಬ್ಬ ಐಟಿ ಪ್ರೊಫೆಶನಲ್ ಮತ್ತು ಮ್ಯೂಸಿಕ್ ಪ್ರೊಡ್ಯೂಸರ್. ಏಪ್ರಿಲ್ 29ರಂದು ಹಳದಿ ಶಾಸ್ತ್ರ ನಡೆಯಲಿದೆ. ಸಂಗೀತ ಕಾರ್ಯಕ್ರಮ ಮತ್ತು ಎಂಗೇಜ್‌ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ ಎಂದು ಮಾನ್ವಿತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.ಮದುವೆ ಬಗ್ಗೆ ನಟಿ ಮಾಧ್ಯಮದ ಮುಂದೆ ಹಲವು ವಿಚಾರಗಳನ್ನು ಹೇಳಿದರು. ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎಂದರು.
ಇದು ಲವ್ ಮ್ಯಾರೇಜ್ ಅಲ್ಲ ಎಂದು ನಟಿ ಮಾನ್ವಿತಾ ಕಾಮತ್ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮದು ಅರೇಂಜ್ಡ್ ಮ್ಯಾರೇಜ್. ಮುಂದಿನ 3 ತಿಂಗಳು ಶುಭ ಮುಹೂರ್ತ ಇರಲಿಲ್ಲ. ಹೀಗಾಗಿ, ಮೇ 1ಕ್ಕೆ ಮದುವೆ ಆಗುತ್ತಿದ್ದೇವೆ. ಕನ್ನಡ ಚಿತ್ರರಂಗದ ಕಲಾವಿದರಿಗಾಗಿ ಗೆಟ್ ಟುಗೆದರ್ ಮಾಡುವ ಯೋಜನೆ ಇದೆ ಎಂದು ಮಾನ್ವಿತಾ ಹೇಳಿದ್ದಾರೆ.
ಮಾತ್ರವಲ್ಲ ಮದುವೆ ಬಳಿಕವೂ ಸಿನಿಮಾ ಮಾಡುತ್ತೇನೆ. ವೈಯಕ್ತಿಕ ಬೇರೆ, ಪ್ರೊಫೆಷನಲ್ ಬೇರೆ. ಅದನ್ನು ಮಿಕ್ಸ್ ಅಪ್ ಮಾಡಲ್ಲ ಎಂದರು ಮಾನ್ವಿತಾ. ಇನ್ನು ಅರುಣ್ ಕೂಡ ಮಾನ್ವಿತಾ ಅವರು ಮದುವೆ ಬಳಿಕ ಸಿನಿಮಾ ಮಾಡಿದರೂ ಯಾವುದೇ ಅಭ್ಯಂತರ ಇಲ್ಲ ಎಂದಿದ್ದಾರೆ. ಮೈಸೂರಿನಲ್ಲಿ ಅರುಣ್ ಎಂಜಿನಿಯರಿಂಗ್ ಮಾಡಿದ್ದಾರೆ. ಅವರಿಗೆ ಸಿನಿಮಾ ರಂಗದಲ್ಲಿ ಹೆಚ್ಚು ಆಸಕ್ತಿ ಇಲ್ಲವಂತೆ.
ಮಾನ್ವಿತಾ ಮದುವೆಯಾಗುತ್ತಿರುವ ಅರುಣ್ ಕುಮಾರ್ ಮೈಸೂರಿನವರು. ಕಳಸದಲ್ಲಿಯೇ ಯಾಕೆ ಮದುವೆಯಾಗುತ್ತಿದ್ದೀರಾ ಎಂಬ ಪ್ರಶ್ನೆಗೆ ಮಾನ್ವಿತಾ ಮಾತನಾಡಿ ನಾನು ಹತ್ತನೇ ತರಗತಿವರಗೆ ಕಳಸದಲ್ಲೇ ಕಲಿತದ್ದು. ಈ ಊರಿನೊಂದಿಗೆ ನನಗೆ ನಂಟಿದೆ, ಅಪ್ಪ- ಅಮ್ಮನ ಜೊತೆ ಇಲ್ಲೇ ವಾಸವಿದ್ದೆ.
ಹಾಗಾಗಿ ಮದುವೆ ಇಲ್ಲೇ ಆಗುವುದರ ಬಗ್ಗೆ ಅರುಣ್ ಮತ್ತು ಅವರ ಪೋಷಕರಿಗೆ ತಿಳಿಸಿದಾಗ ಅವರು ಖುಷಿಯಿಂದಲೇ ಒಪ್ಪಿದರು ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.