ಸಣ್ಣ ವಯಸ್ಸಿನಲ್ಲೇ ಮದುವೆ ಎರಡು ಮಕ್ಕಳು; ಬಿಡುವಿನ ಸಮಯದಲ್ಲಿ IPS ಪರೀಕ್ಷೆ ಬರೆದು ಇಡೀ ರಾಜ್ಯಕ್ಕೆ ಮೊದಲು

 | 
H

ತಮಿಳುನಾಡಿನ ಎನ್. ಅಂಬಿಕಾಗೆ ಮದುವೆಯಾದಾಗ ಕೇವಲ 14 ವರ್ಷ. ಬಾಲ್ಯ ವಿವಾಹವದು. ಪತಿ ಪೊಲೀಸ್ ಪೇದೆಯಾಗಿದ್ದರು. ನಂತರ, 18ನೇ ವಯಸ್ಸಿಗೆ ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು ಅಂಬಿಕಾ. ಆದ್ರೆ ಇಂದು ಐಪಿಎಸ್​ ಅಧಿಕಾರಿಯಾಗಿದ್ದಾರೆ. 

ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಮ್ಮ ನಡುವಿನ ಅದೆಷ್ಟೋ ಮಂದಿ ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇರುತ್ತಾರೆ. ಅದರಲ್ಲೂ ಮಹಿಳೆಯರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಎಂದರೆ ತಪ್ಪಾಗಲಿಕ್ಕಿಲ್ಲ ಮೊನ್ನೆ ಹೊರಬಿದ್ದ ರಾಜ್ಯದ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನೇ ನೋಡಿ. ಎಂದಿನಂತೆ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಮಹಿಳೆಯರೇ ಸ್ಟ್ರಾಂಗ್ ಎಂದು ಮತ್ತೊಮ್ಮೆ ನಿರೂಪಿತವಾಗಿದೆ.

ವಿದ್ಯೆಯಿಂದ ಹಿಡಿದು ಉದ್ಯೋಗದವರೆಗೂ ಅದೆಷ್ಟೇ ಅಡೆ-ತಡೆಗಳು ಎದುರಾದರೂ ಅದನ್ನು ಮೀರಿ, ಸಾಧನೆಗಳನ್ನು ಸಾಧಿಸುತ್ತಲೇ ಸಾಗಿದ್ದಾಳೆ, ಮಹಿಳೆ. ಹೌದು, ಮಹಿಳೆಯರು ಕೇವಲ ಮನೆಕೆಲಸ ಎಂಬ ಚೌಕಟ್ಟಿನಿಂದ ಹೊರಬಂದು ಸಾಕಷ್ಟು ಕಾಲಗಳೇ ಆಯಿತು. ತಾನು ಕಾಲಿಡುವ ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಲೇ ಇದ್ದಾಳೆ.

ತಮಿಳುನಾಡಿನ ಎನ್. ಅಂಬಿಕಾಗೆ ಮದುವೆಯಾದಾಗ ಕೇವಲ 14 ವರ್ಷ. ಬಾಲ್ಯ ವಿವಾಹವದು. ಪತಿ ಪೊಲೀಸ್ ಪೇದೆಯಾಗಿದ್ದರು. ನಂತರ, 18ನೇ ವಯಸ್ಸಿಗೆ ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು ಅಂಬಿಕಾ. ಜೀವನವೇನೋ ಸುಖವಾಗಿ ಸಾಗುತ್ತಿತ್ತು. ಆದರೆ, ಅಂಬಿಕಾಗೆ ಏನೋ ಒಂದು ಅತೃಪ್ತಿ.

ಅಂದಹಾಗೆ ಅಂಬಿಕಾ ಒಮ್ಮೆ ತಮ್ಮ ಪತಿಯೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಅವರ ಪತಿ ಯಾರೋ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದರು. ಇದನ್ನು ಗಮನಿಸಿದ ಅಂಬಿಕಾ ಮನೆಗೆ ಬಂದ ನಂತರ ತಮ್ಮ ಪತಿಯನ್ನು ಸೆಲ್ಯೂಟ್ ಹೊಡೆದಿದ್ದು ಉನ್ನತ ಅಧಿಕಾರಿಗೆ ಎಂಬುದನ್ನು ಕೇಳಿ ತಿಳಿದುಕೊಂಡರು. ಇದೇ ಅವರ ಜೀವನದ ದಿಕ್ಕು ಬದಲಾಯಿಸಿದ್ದು,ಇದೇ ಅವರು ಐಪಿಎಸ್ ಅಧಿಕಾರಿಯಾಗಬೇಕೆಂಬ ಛಲ ಹುಟ್ಟಿಸಿತು. ಅದೇ ಛಲದಲ್ಲಿ ಅಧಿಕಾರಿ ಕೂಡಾ ಆದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.