ಬಿಡುಗಡೆಯಾದ ಎರಡೇ ದಿನಕ್ಕೆ ಮಾರ್ಟಿನ್ ದಾಖಲೆಯ ಕಲೆಕ್ಷನ್; 1000ಕೋಟಿ ದಾಟ್ಟುತ್ತೆ ಎಂದ ಸಿನಿ ಚೇಂಬರ್
Oct 13, 2024, 14:05 IST
|
ಮೂರು ವರ್ಷಗಳ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾವೊಂದು ರಿಲೀಸ್ ಆಗಿದೆ. 'ಮಾರ್ಟಿನ್' ಸಿನಿಮಾ ನೋಡುವುದಕ್ಕೆ ಕಾದು ಕೂತಿದ್ದ ಧ್ರುವ ಫ್ಯಾನ್ಸ್‌ಗೆ ಕೊನೆಗೂ ಥಿಯೇಟರ್‌ನಲ್ಲಿ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ಅಷ್ಟೊಂದು ರೆಸ್ಪಾನ್ಸ್ ಸಿಗದೇ ಹೋದರೂ, ನೇರವಾಗಿ ಥಿಯೇಟರ್‌ಗೆ ಬಂದು 'ಮಾರ್ಟಿನ್' ನೋಡಿದ್ದಾರೆ.
ಸದ್ಯ ವಿತರಕರ ವಲಯ ಹಾಗೂ ಇಂಡಸ್ಟ್ರಿ ಟ್ರೇಡಿಂಗ್ ವೆಬ್ ಸ್ಟೈಟ್ Sacnilk ಹೆಚ್ಚು ಕಡಿಮೆ ಒಂದೇ ಅಂಕಿ ಸಂಖ್ಯೆಗಳನ್ನು ಕೊಟ್ಟಿದೆ. ಕರ್ನಾಟಕದಲ್ಲಿ ಮಾರ್ಟಿನ್' 6 ರಿಂದ 6.2 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಹಿಸಲಾಗಿದೆ.
ಇನ್ನು ಮಾರ್ಟಿನ್' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ. ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಬ್ಬದ ದಿನವಾಗಿದ್ದರೂ ಕರ್ನಾಟಕದ ಥಿಯೇಟರ್‌ನಿಂದ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ.
ಕರ್ನಾಟಕದಲ್ಲಿಯೇ ಈ ಸಿನಿಮಾ ಹೆಚ್ಚು ಕಡಿಮೆ ಆರರಿಂದ ಏಳು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಸಿನಿಮಾ ನಿಖರವಾದ ಕಲೆಕ್ಷನ್ ಅನ್ನು ಚಿತ್ರತಂಡವೇ ರಿವೀಲ್ ಮಾಡುವ ಸಾಧ್ಯತೆಯಿದೆ.
ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್'ಗೆ ತೆಲುಗು ಹಾಗೂ ತಮಿಳಿನಲ್ಲೂ ನಿರೀಕ್ಷೆಯಷ್ಟೇ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿಯಲ್ಲೂ ಎಕ್ಸ್‌ಪೆಕ್ಟ್ ಮಾಡಿದಷ್ಟು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ತೆಲುಗಿನಲ್ಲಿ ಮೊದಲ ದಿನ 50 ರಿಂದ 60 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಹಾಗೇ ಹಿಂದಿ ಬೆಲ್ಟ್‌ನಲ್ಲಿ 'ಮಾರ್ಟಿನ್' ಸಿನಿಮಾ 25 ರಿಂದ 30 ಲಕ್ಷ ರೂಪಾಯಿ ಮೊದಲ ದಿನದ ಕಲೆಕ್ಟ್ ಮಾಡಿದೆ ಎನ್ನಲಾಗಿದೆ.
ಮಾರ್ಟಿನ್' ಸಿನಿಮಾವನ್ನು ಅದ್ಧೂರಿಯಾಗಿ ಶೂಟಿಂಗ್ ಮಾಡಲಾಗಿದೆ. ಇದು ಕನ್ನಡದ ಬಿಗ್ ಬಜೆಟ್ ಸಿನಿಮಾಗ. ಈ ಬಗ್ಗೆ ಸಿನಿಮಾ ನೋಡಿದ ಪ್ರೇಕ್ಷಕರು ಮಾತಾಡುತ್ತಿದ್ದಾರೆ. ಹೀಗಾಗಿ ಹಬ್ಬದ ಮೂಡಿನಲ್ಲಿರುವ ಜನರು ವೀಕೆಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಸಿನಿಮಾ ನೋಡಿದರೆ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗಬಹುದು. ಒಂದು ಅಂದಾಜಿನ ಪ್ರಕಾರ, 30 ಕೋಟಿವರೆಗೂ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.