ಕೇವಲ ಎರಡು ಗಂಟೆಗೆ 13 ಲಕ್ಷ ಡಿಮಾಂಡ್ ಮಾಡಿದ ಮೀನಾ, 'ಮತ್ತೊಂದು ನಟಿಯ ಬಂಡವಾಳ ಬಯಲು'

 | 
Ghi

ಬಹುಭಾಷಾ ನಟಿ ಮೀನಾ ಭಾರತೀಯ ಚಿತ್ರೋದ್ಯಮದಲ್ಲಿ ಒಂದು ಕಾಲದಲ್ಲಿ ಸ್ಟಾರ್‌ ಆಗಿ ಮೆರೆದವರು. ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌, ಮಾಲಿವುಡ್‌ ಹೀಗೆ ಎಲ್ಲ ಚಿತ್ರರಂಗದಲ್ಲೂ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದರು. ಕೇವಲ 4ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದ ಈ ನಟಿ, ಅದಾದ ಮೇಲೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ ಬಾಲನಟಿಯಾಗಿ ನಟಿಸುವುದರ ಜತೆಗೆ ನಾಯಕಿಯಾಗಿಯೂ ಮಿಂಚಿದ್ದಾರೆ. ಇದೀಗ ಪೋಷಕ ಪಾತ್ರಗಳಲ್ಲಿಯೂ ಅವರು ನಟಿಸುತ್ತಿದ್ದಾರೆ.

2022ರ ಜೂನ್‌ನಲ್ಲಿ ಮೀನಾ ಪತಿ ವಿದ್ಯಾ ಸಾಗರ್‌ ಶ್ವಾಸಕೋಶ ಸೋಂಕಿಗೆ ತುತ್ತಾಗಿದ್ದರು. ವಿದ್ಯಾಸಾಗರ್‌ ನಿಧನಕ್ಕೆ ಸೌತ್‌ನ ಸಿನಿ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಬಳಿಕ ಸಾಕಷ್ಟು ಗಾಸಿಪ್‌ಗಳಲ್ಲೂ ಮೀನಾ ಅವರ ಹೆಸರು ತೇಲಿ ಬಂತು. ಮೀನಾ ಇನ್ನೇನು ಎರಡನೇ ಮದುವೆ ಆಗಲಿದ್ದಾರೆ, ತಮಿಳು ನಟ ಧನುಷ್ ಜತೆ ಕೈ ಹಿಡಿಯಲಿದ್ದಾರೆ ಎಂದೆಲ್ಲ ಪುಕಾರು ಹಬ್ಬಿತ್ತು. ಆದರೆ, ಆ ಬಗ್ಗೆ ಓಪನ್‌ ಆಗಿ ಮೀನಾ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ.

ಧನುಷ್ ಮಾತ್ರವಲ್ಲ, ಪತಿಯ ಅಗಲಿಕೆ ನಡುವೆಯೇ ತಮ್ಮ 47ನೇ ವಯಸ್ಸಿನಲ್ಲಿಯೇ ಖ್ಯಾತ ಉದ್ಯಮಿಯ ಜತೆ ಮೀನಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಓಡಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮೀನಾ, "ಹೈಪ್‌ ಕ್ರಿಯೆಟ್‌ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಈ ರೀತಿ ಸುದ್ದಿ ಬರೆದರೆ, ನನ್ನ ಕುಟುಂಬಕ್ಕೆ ಏನಾಗುತ್ತದೆ ಎಂದು ಯಾರಾದರೂ ಊಹಿಸಿದ್ದಾರಾ? ಸಾರ್ವಜನಿಕ ವಲಯದಲ್ಲಿ ಇರುತ್ತೇವೆ ಎಂದ ಮಾತ್ರಕ್ಕೆ ನಮ್ಮನ್ನು ಕೇಳದೇ ಅನಿಸಿದ್ದನ್ನು ಪೋಸ್ಟ್‌ ಮಾಡುವುದು ಎಷ್ಟು ಸರಿ?" ಎಂದಿದ್ದರು.

ಕಾಲಿವುಡ್‌ನಲ್ಲಿ ಸಿನಿಮಾ ವಿಮರ್ಶೆಗಳನ್ನು ಮಾಡುತ್ತ, ಸಂದರ್ಶನಗಳಲ್ಲಿ ಅನಿಸಿದ್ದನ್ನು ನೇರವಾಗಿ ಹೇಳುತ್ತ ವಿವಾದಕ್ಕೆ ತುಪ್ಪ ಸುರಿಯುವ ಬೈಲ್ವಾನ್‌ ರಂಗನಾಥನ್‌, ಇತ್ತೀಚೆಗಷ್ಟೇ ಮೀನಾ ಬಗ್ಗೆ ಕಟುವಾಗಿ ಮಾತನಾಡಿದ್ದರು. ಧನುಷ್ ಜತೆ ಅವರ ವಿವಾಹವಾಗಲಿದೆ ಎಂದಿದ್ದರು. ಇದೀಗ ಮತ್ತೊಂದು ಹೇಳಿಕೆ ಮೂಲಕ ಎದುರಾಗಿದ್ದಾರೆ. ಇದೀಗ ಮೀನಾ ಬೇಕೆಂದರೆ 2 ಗಂಟೆಗೆ 13 ಲಕ್ಷ ಹಣ ನೀಡಬೇಕು ಎಂದಿದ್ದಾರೆ. ಅಷ್ಟಕ್ಕೂ ಬೈಲ್ವಾನ್‌ ರಂಗನಾಥನ್‌ ಹೇಳಿದ್ದು ಈ ವಿಚಾರಕ್ಕೆ.

ಇತ್ತೀಚೆಗಷ್ಟೇ ಮೀನಾ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಆ ಸಂದರ್ಶನಕ್ಕಾಗಿ ಆ ಯೂಟ್ಯೂಬ್‌ ಚಾನೆಲ್‌ನವರು 2 ಗಂಟೆಯ ಸಂದರ್ಶನಕ್ಕೆ 13 ಲಕ್ಷ ಹಣವನ್ನು ಮೀನಾಗೆ ನೀಡಿದ್ದರು. ಯೂಟ್ಯೂಬ್‌ಗೂ ಪ್ರಚಾರ ಅನಿವಾರ್ಯ. ಹಾಗಾಗಿ ಅವರು ಹೇಳಿದಷ್ಟು ದುಡ್ಡು ಕೊಟ್ಟಿದ್ದಾರೆ ಎಂದು ಬೈಲ್ವಾನ್‌ ರಂಗನಾಥನ್‌ ತಮ್ಮ ಯೂಟ್ಯೂಬ್‌ನಲ್ಲಿ ಹೇಳಿಕೊಂಡಿದ್ದಾರೆ. ಹೀಗೆ ಹೇಳಿದ್ದೇ ತಡ ಕಾಲಿವುಡ್‌ನಲ್ಲಿ ಈ ವಿಚಾರ ಹಲ್‌ಚಲ್‌ ಸೃಷ್ಟಿಸಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.